
ಇಸ್ರೇಲ್ ಅಮೆರಿಕಾದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಸೌದಿ ಅರೇಬಿಯಾದ ರಾಷ್ಟ್ರಗಳ ಮೇಲೆ ಹಾಗೂ ಅಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ದಾಳಿ ಮುಂದುವರೆಸಿದ್ದು, ಅಮೆರಿಕಾದ ಫೈಟರ್ ಜೆಟ್ ಎಫ್ -15ನನ್ನು ಹೊಡೆದುರುಳಿಸಿದಾಗಿ ಹೇಳಿಕೊಂಡಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಫ್-15 ವಿಮಾನವೂ ನಿಧಾನವಾಗಿ ಕೆಳಕ್ಕೆ ಸುರುಳಿಯಾಗಿ ಚಲಿಸುತ್ತಿರುವುದನ್ನು ಕಾಣಬಹುದು. ಅದರ ಹಿಂದೆ ಬೆಂಕಿಯ ಜ್ವಾಲೆ ಏಳುವುದನ್ನು ಕಾಣಬಹುದು. ಅದರೆ ಈ ವಿಮಾನವು ಇಸ್ರೇಲ್‌ಗೆ ಸೇರಿದ್ದ ಅಥವಾ ಅಮೆರಿಕಾದ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಫೈಟರ್ ಜೆಟ್‌ನಿಂದ ಪೈಲಟ್ ಕೆಳಗೆ ಹಾರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಸೋಮವಾರ ಬೆಳಗಿನ ಜಾವ ಕುವೈತ್‌ನ ಮೇಲಿನ ಆಕಾಶದಲ್ಲಿ ಅಮೆರಿಕದ ಎಫ್ -15 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ಐಆರ್‌ಎನ್‌ಎ ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಆದರೆ ಹೇಳಿಕೆಗೆ ಸಂಬಂಧಿಸಿದಂತೆ ಅಮೆರಿಕ ಅಥವಾ ಕುವೈತ್ ಅಧಿಕಾರಿಗಳಿಂದ ತಕ್ಷಣದ ಅಧಿಕೃತ ದೃಢೀಕರಣ ಬಂದಿಲ್ಲ. ಮತ್ತೊಂದೆಡೆ ಬಹ್ರೇನ್, ಕುವೈತ್, ದುಬೈ ಮತ್ತು ದೋಹಾದಲ್ಲಿ ಹೊಸ ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ವರದಿಯಾಗಿದೆ.
ಅಮೆರಿಕ ಮತ್ತು ಇಸ್ರೇಲ್ ನಿನ್ನೆ(ಭಾನುವಾರ) ಇರಾನ್‌ನಾದ್ಯಂತ ವ್ಯಾಪಕ ದಾಳಿಗಳನ್ನು ನಡೆಸಿದವು, ಸುಪ್ರೀಂ ನಾಯಕ ಅಲಿ ಖಮೇನಿಯವರ ಹತ್ಯೆಯ ನಂತರ ತೀವ್ರಗೊಳ್ಳುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ದೇಶದ ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿಕೊಂಡು ಯುದ್ಧನೌಕೆಗಳನ್ನು ನಾಶಪಡಿಸಿದವು. ಸ್ಫೋಟಗಳು ದೇಶಾದ್ಯಂತ ಕಟ್ಟಡಗಳನ್ನು ನಡುಗಿಸಿದವು, ರಾಜಧಾನಿ ಟೆಹ್ರಾನ್ ಮೇಲೆ ಹೊಗೆಯ ದಟ್ಟಣೆ ಹೆಚ್ಚಾಯಿತು. ದಾಳಿಗಳು ಪ್ರಾರಂಭವಾದಾಗಿನಿಂದ ಖಮೇನಿ ಮತ್ತು ಇತರ ಹಿರಿಯ ಅಧಿಕಾರಿಗಳು ಸೇರಿದಂತೆ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ನಾಯಕರು ಹೇಳಿದ್ದಾರೆ.
ಇರಾನ್ ಸೇನಾ ಕಮಾಂಡರ್‌ಗಳು ತಮ್ಮ ಸರ್ವೋಚ್ಚ ನಾಯಕನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ದಾಳಿಯನ್ನು ತೀವ್ರಗೊಳಿಸಿದ್ದು, ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪರಿಸ್ಥಿತಿಯು ಈಗ ಇಡೀ ಮಧ್ಯಪ್ರಾಚ್ಯವನ್ನು ದೊಡ್ಡ ಯುದ್ಧದತ್ತ ತಳ್ಳುತ್ತಿದೆ. ಇರಾನ್ ದುಬೈ ವಿಮಾನ ನಿಲ್ದಾಣ, ಬುರ್ಜ್ ಖಲೀಫಾ ಮತ್ತು ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಈ ನಡುವೆ ಯುಎಸ್ ಮಿಲಿಟರಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ಪ್ರಧಾನ ಕಚೇರಿಯನ್ನು ನಾಶಪಡಿಸಿದೆ ಎಂದು ಘೋಷಿಸಿದೆ.
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಮನಾರ್ಹ ಹೇಳಿಕೆ ನೀಡಿದ್ದಾರೆ. ಆಪರೇಷನ್ ಎಪಿಕ್ ಫ್ಯೂರಿಯ ಭಾಗವಾಗಿ ನಡೆದ ಒಂದೇ ಗುಂಡಿನ ದಾಳಿಯಲ್ಲಿ 48 ಉನ್ನತ ಇರಾನಿನ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಒಂಬತ್ತು ಇರಾನಿನ ನೌಕಾಪಡೆಯ ಹಡಗುಗಳು ನಾಶವಾದವು ಎಂದು ಟ್ರಂಪ್ ಹೇಳಿದ್ದಾರೆ. ಇರಾನ್‌ನ ನೌಕಾಪಡೆಯ ಪ್ರಧಾನ ಕಚೇರಿಯೂ ಸಹ ಬಹುತೇಕ ನಾಶವಾಯಿತು. ಕಾರ್ಯಾಚರಣೆಯಲ್ಲಿ ಕನಿಷ್ಠ ಮೂವರು ಯುಎಸ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳಾದ ಹಲವಾರು ಇತರ ಸೈನಿಕರು ಕರ್ತವ್ಯಕ್ಕೆ ಮರಳುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ