Fighter Jet Crash: ಕುವೈತ್‌ನಲ್ಲಿ ಪತನಗೊಂಡ ಅಮೆರಿಕದ F-15 ಫೈಟರ್ ಜೆಟ್!

Published : Mar 02, 2026, 11:41 AM IST
Kuwait

ಸಾರಾಂಶ

ಅಮೆರಿಕ ವಾಯುಪಡೆಗೆ ಸೇರಿದ F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್ ಕುವೈತ್‌ನಲ್ಲಿ ಪತನಗೊಂಡಿದೆ. ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಈ ಘಟನೆ ನಡೆದಿದ್ದು, ವಿಮಾನ ಕೆಳಗೆ ಬೀಳುವ ಮುನ್ನ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಮೆರಿಕ ವಾಯುಪಡೆಗೆ ಸೇರಿದ F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್ ಕುವೈತ್‌ನಲ್ಲಿ ಪತನಗೊಂಡಿದೆ. ವಿಮಾನ ಕೆಳಗೆ ಬೀಳುವ ಮುನ್ನ ಪೈಲಟ್ ಅದರಿಂದ ಹೊರಗೆ ಜಿಗಿದು ಪಾರಾಗುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರಷ್ಯಾ ಮತ್ತು ಉಕ್ರೇನ್ ಯುದ್ಧದ ನಂತರ, ಈಗ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾ ಮತ್ತು ಇಡೀ ಜಗತ್ತನ್ನು ಮತ್ತೊಂದು ದೊಡ್ಡ ಮಿಲಿಟರಿ ಸಂಘರ್ಷಕ್ಕೆ ತಳ್ಳಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ, F-15 ಯುದ್ಧ ವಿಮಾನವು ಬೆಂಕಿ ಉಗುಳುತ್ತಾ ನಿಧಾನವಾಗಿ ಸುರುಳಿಯಾಕಾರದಲ್ಲಿ ಕೆಳಗೆ ಬೀಳುತ್ತಿರುವುದು ಕಾಣಿಸುತ್ತಿದೆ. ಇಸ್ರೇಲ್ ಕೂಡ ಇದೇ ಮಾದರಿಯ ಫೈಟರ್ ಜೆಟ್‌ಗಳನ್ನು ಬಳಸುವುದರಿಂದ, ಪತನಗೊಂಡ ವಿಮಾನ ಅಮೆರಿಕದ್ದೋ ಅಥವಾ ಇಸ್ರೇಲ್ದ್ದೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ವಿಡಿಯೋ ವೈರಲ್

 

ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಖಮೇನಿ ಹತ್ಯೆ ಬಗ್ಗೆ ವಿಶ್ವ ನಾಯಕರ ಮೌನ

ಬ್ರುಸ್ಸೆಲ್ಸ್‌: ಖಮೇನಿ ಹತ್ಯೆಗೆ ಮಧ್ಯಪ್ರಾಚ್ಯ ಸೇರಿ ವಿಶ್ವದ ನಾಯಕರು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಟ್ರೇಲಿಯಾ, ಕೆನಡಾ ಸೇರಿ ಕೆಲ ದೇಶಗಳು ಅಮೆರಿಕ ಮತ್ತು ಇಸ್ರೇಲ್‌ನ ದಾಳಿ ಕ್ರಮವನ್ನು ಬೆಂಬಲಿಸಿದರೆ, ರಷ್ಯಾ ಮತ್ತು ಚೀನಾ ಮಾತ್ರ ಖಂಡಿಸಿವೆ.

ಯುಎಇ ಸೇರಿ ಮಧ್ಯಪ್ರಾಚ್ಯದ ಅನೇಕ ದೇಶಗಳು ಅಮೆರಿಕದ ಸೇನಾ ನೆಲೆಗಳ ಮೇಲಿನ ಇರಾನ್‌ ನಡೆಸಿದ ದಾಳಿಯನ್ನು ಖಂಡಿಸಿದ್ದರೂ ಬಹುತೇಕ ದೇಶಗಳು ಇರಾನ್‌ ಮೇಲಿನ ದಾಳಿ ಕುರಿತು ನೇರ ಪ್ರತಿಕ್ರಿಯೆ ನೀಡುವುದರಿಂದ ಅಂತರ ಕಾಯ್ದುಕೊಂಡಿವೆ.

ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರಾನ್‌, ಜರ್ಮನಿ ಚಾನ್ಸಲರ್‌ ಫೆಡ್ರಿಚ್‌ ಮೆರ್ಜ್‌ ಅವರು ಅಮೆರಿಕ ಮತ್ತು ಇರಾನ್ ಮಾತುಕತೆ ಆರಂಭಿಸಬೇಕು, ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ. ನಾವು ಇರಾನ್‌ ಮೇಲಿನ ದಾಳಿಯಲ್ಲಿ ಪಾಲ್ಗೊಳ್ಳುತ್ತಿಲ್ಲ, ಆದರೆ ಅಮರಿಕ, ಇಸ್ರೇಲ್‌ ಮತ್ತು ಮಧ್ಯಪ್ರಾಚ್ಯದ ಇತರೆ ದೇಶಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಮೊರಕ್ಕೋ, ಜೋರ್ಡನ್‌, ಸಿರಿಯಾ ಮತ್ತು ಯುಎಇ, ಕತಾರ್‌, ಕುವೈಟ್‌ ಮಾತ್ರ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ನಡೆಸಿದ ದಾಳಿಯನ್ನು ಖಂಡಿಸಿವೆ.

ರಷ್ಯಾ ಖಂಡನೆ

ಆದರೆ ರಷ್ಯಾ ಮಾತ್ರ ಇದು ಸ್ವತಂತ್ರ ದೇಶವೊಂದರ ಮೇಲಿನ ಪೂರ್ವಯೋಜಿತ ದಾಳಿ ಎಂದು ಆರೋಪಿಸಿದರೆ, ಇರಾನ್‌ನ ಸಾರ್ವಭೌಮತೆ, ಭದ್ರತೆಯನ್ನು ಗೌರವಿಸಬೇಕು ಎಂದು ಚೀನಾ ಆಗ್ರಹಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pahalgam​ನಲ್ಲಿ ನಮ್ಮವರು ಸತ್ತಾಗ ಕಪ್ಪು ಬಟ್ಟೆ ಎಲ್ಲಿತ್ತು? ಪಾಕ್​ ವಿರುದ್ಧ ಘೋಷಣೆ ಬರಲೇ ಇಲ್ಲ: ನಟ ಪ್ರಥಮ್​ ಕಿಡಿ
ಖಮೇನಿ ಸಾವಿನ ಬಳಿಕ ಮತ್ತೆ ಸುದ್ದಿಯಾಗುತ್ತಿದೆ ಇರಾನ್‌ ನಾಯಕನಿಗೆ ಇದ್ದ ಭಾರತದ ಕನೆಕ್ಷನ್