Fastest Train ವಿಶ್ವದ ಅತೀ ವೇಗದ ರೈಲು, ಚೀನಾ ನಿರ್ಮಿತ ಟ್ರೈನ್ ಸ್ಪೀಡ್ ಗಂಟೆಗೆ 600 ಕಿ.ಮೀ!

Published : May 24, 2022, 09:59 PM ISTUpdated : May 24, 2022, 10:08 PM IST
Fastest Train ವಿಶ್ವದ ಅತೀ ವೇಗದ ರೈಲು, ಚೀನಾ ನಿರ್ಮಿತ ಟ್ರೈನ್ ಸ್ಪೀಡ್ ಗಂಟೆಗೆ 600 ಕಿ.ಮೀ!

ಸಾರಾಂಶ

ಮ್ಯಾಗ್ಲೆವ್ ರೈಲು ಅನಾವರ ಮಾಡಿದ ಚೀನಾ ಎಲೆಕ್ಟ್ರೋ ಮ್ಯಾಗ್ನೆಟಿಕ್‌ನಿಂದ ಚಲಿಸುವ ರೈಲು ಬೀಜಿನಿಂದ ಶಾಂಘೈಗೆ ತೆರಳಲು ಕೇವಲ 2 ಗಂಟೆ

ಬೀಜಿಂಗ್(ಮೇ.24): ರೈಲು ನಿರ್ಮಾಣ, ರೈಲು ಅವಿಷ್ಕಾರ, ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಚೀನಾ ಇತರ ದೇಶಗಳಿಗಿಂತ ಮಂಚೂಣಿಯಲ್ಲಿದೆ. ಇದೀಗ ವಿಶ್ವದ ಅತೀ ವೇಗದ ರೈಲನ್ನು ಚೀನಾ ಅನಾವರಣ ಮಾಡಿದೆ. ಇದು ಗಂಚೆಗೆ 600 ಕಿ.ಮೀ ವೇಗದಲ್ಲಿ ಚಲಿಸಲಿದೆ.

ಚೀನಾದ ನೂತನ ಹೈ ಸ್ಪೀಡ್ ರೈಲಿಗೆ ಮ್ಯಾಗ್ಲೆವ್ ಎಂದು ಹೆಸರಿಡಲಾಗಿದೆ. ಚೀನಾದ ಕರಾವಳಿ ಭಾಗ ಕ್ವಿಂಗ್‌ದಾದಲ್ಲಿ ಈ ರೈಲು ನಿರ್ಮಾಣ ಮಾಡಲಾಗಿದೆ. ಎಲೆಕ್ಟ್ರೋ-ಮ್ಯಾಗ್ನೆಟಿಕ್ ಬಲವನ್ನು ಬಳಸಿಕೊಂಡು, ಮ್ಯಾಗ್ಲೆವ್ ರೈಲು ಚಲಿಸಲಿದೆ. 

ಚೀನಾ ರಾಜಧಾನಿ ಬೀಜಿಂಗ್‌ನಿಂದ ಬೀಜಿಂಗ್ ದೂರ ಸರಿಸುಮಾರು 1,200 ಕಿಲೋಮೀಟರ್‌ಗೂ ಹೆಚ್ಚಿದೆ.. ಮ್ಯಾಗ್ಲೆವ್ ರೈಲಿನಲ್ಲಿ ಬೀಜಿಂಗ್‌ನಿಂದ ಶಾಂಘೈ ತಲುಪಲು ಕೇವಲ 2.5 ಗಂಟೆ ಸಾಕು. ಇನ್ನು ಬೀಜಿಂಗ್‌ನಿಂದ ಶಾಂಘೈಗೆ ವಿಮಾನದ ಮೂಲಕ ಪ್ರಯಾಣಿಸಲು 3 ಗಂಟೆ ತೆಗೆದುಕೊಳ್ಳಲಿದೆ.

ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಸೇರಿ 9 ರೈಲುಗಳ ವೇಗ ಹೆಚ್ಚಳ

ಅತೀ ವೇಗದ ರೈಲಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅತೀಯಾದ ವೇಗವಿರುವ ಕಾರಣ ಬ್ರೇಕ್ ಕುರಿತು ಹೆಚ್ಚಿನ ಗಮನಹರಿಸಲಾಗಿದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ರೈಲು ನಿಲ್ಲಿಸಲು ಸಾಧ್ಯವಿದೆ. ಫ್ರಿಕ್ಷನ್ ಬ್ರೇಕಿಂಗ್ ಹಾಗೂ ಆಕ್ಸಲರೇಶನ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ.

ಇನ್ನು ರೈಲಿನಲ್ಲಿ ಪ್ರತಿ ಸೀಟಿಗೂ ಬೆಲ್ಟ್ ನೀಡಲಾಗಿದೆ. ವಿಮಾನ ಪ್ರಯಾಣದಲ್ಲಿರುವಂತೆ ಹೈಸ್ಪೀಡ್ ರೈಲಿನಲ್ಲಿ ಸೀಟ್ ಬೆಲ್ಟ್ ಕಡ್ಡಾಯವಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕ ಸೀಟ್ ಬೆಲ್ಟ್ ಧರಿಸಬೇಕು. ಈ ಮೂಲಕ ಅತೀವೇಗದಿಂದ ಸೃಷ್ಟಿಯಾಗುವ ಅಪಾಯ ತಪ್ಪಲಿದೆ.ರೈಲಿನಲ್ಲಿ ವೈಫ್, ವೈಯರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ.

ಭಾರತದಲ್ಲಿ 160 ಕಿ.ಮೀ ವೇಗದ ರೈಲು
ತಾಸಿಗೆ 160 ಕಿ.ಮೀ. ವೇಗದವರೆಗೆ ಸಾಗಬಲ್ಲ ದೇಶದ ಅತೀ ವೇಗದ ರೈಲು ‘ವಂದೇಭಾರತ್‌ ಎಕ್ಸ್‌ಪ್ರೆಸ್‌’ಗೆ  ಭಾರತದಲ್ಲಿದೆ.  ಐತಿಹಾಸಿಕ ರೈಲು ಓಡಾಟಕ್ಕೆ ನವದೆಹಲಿ ರೈಲು ನಿಲ್ದಾಣದಲ್ಲಿ ಹಸಿರು ಧ್ವಜ ತೋರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ವಾರಾಣಸಿ ಹಾಗೂ ದಿಲ್ಲಿ ನಡುವೆ ಈ ರೈಲು ಸಂಚರಿಸಲಿದ್ದು, 820 ಕಿ.ಮೀ. ದೂರವನ್ನು 9.45 ಗಂಟೆಯಲ್ಲಿ ಕ್ರಮಿಸಲಿದೆ.

ಬೆಂಗಳೂರಲ್ಲಿ ವಂದೇ ಭಾರತ್‌ ರೈಲು ಗಾಲಿ ಉತ್ಪಾದನೆ

ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ದೆಹಲಿಯಿಂದ ವಾರಾಣಸಿಗೆ ತೆರಳುವ ಮೂಲಕ ಮೊದಲ ಅಧಿಕೃತ ಪ್ರಯಾಣಕ್ಕೆ ಸಾಕ್ಷಿಯಾದರು. ಹೊಸ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ‘ವಂದೇಭಾರತ ಎಕ್ಸ್‌ಪ್ರೆಸ್‌ ನಿರ್ಮಾಣ ಕಾರ್ಯದಲ್ಲಿ ವಿಶೇಷ ಶ್ರಮವಹಿಸಿದ ಇಂಜಿನಿಯರ್‌ಗಳು, ಡಿಸೈನರ್‌ಗಳನ್ನು ಅಭಿನಂದಿಸುವೆ’ ಎಂದು ಹೇಳಿದರು.

‘ಕಳೆದ ನಾಲ್ಕೈದು ವರ್ಷಗಳಿಂದ ನಮ್ಮೆಲ್ಲರ ಶ್ರಮದ ಪ್ರತಿಫಲವಾಗಿ ರೈಲ್ವೆ ಇಲಾಖೆ ಇಂದು ಸಾಕಷ್ಟುಪ್ರಗತಿ ಕಂಡಿದೆ’ ಎಂದು ಹೇಳಿದ ಪ್ರಧಾನಿ ಮೋದಿ, ‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ಘೋಷಣೆಗೆ ಹೊಸ ರೈಲ್ವೆ ಯೋಜನೆ ಹೊಸ ಬಲ ತಂದುಕೊಟಿದ್ದೆ. ರೈಲ್ವೆ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆಯಲ್ಲೂ ಸುಧಾರಣೆ ಆಗಿದ್ದು, ಈ ಮೊದಲು ನಿಮಿಷವೊಂದರಲ್ಲಿ ಎರಡು ಸಾವಿರ ಟಿಕೆಟ್‌ ಕಾಯ್ದಿರಿಸುವುದು ಕಷ್ಟಸಾಧ್ಯವಾಗಿತ್ತು. ಈಗ ವೆಬ್‌ಸೈಟ್‌ ಮೂಲಕ ಒಂದು ನಿಮಿಷದಲ್ಲಿ 20,000 ಟಿಕೆಟ್‌ಗಳನ್ನು ಬುಕ್‌ ಮಾಡಲು ಸಾಧ್ಯ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!