First Sunrise : 2022ರ ಮೊದಲ ಸೂರ್ಯೋದಯದ ವರ್ಣರಂಜಿತ ಫೋಟೋಗಳಿವು...

Suvarna News   | Asianet News
Published : Jan 03, 2022, 03:20 PM ISTUpdated : Jan 03, 2022, 03:24 PM IST
First Sunrise : 2022ರ ಮೊದಲ ಸೂರ್ಯೋದಯದ ವರ್ಣರಂಜಿತ ಫೋಟೋಗಳಿವು...

ಸಾರಾಂಶ

2022ರ ಮೊದಲ ಸೂರ್ಯೋದಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತೆಗೆದ ಫೋಟೋ ವರ್ಣರಂಜಿತ ಫೋಟೋಗೆ ನೆಟ್ಟಿಗರು ಫಿದಾ

ನವದೆಹಲಿ(ಡಿ.3): 2022ರ ಮೊದಲ ಸೂರ್ಯೋದಯದ ಫೋಟೋಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS) ವೂ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, ಸೂರ್ಯನಿಂದ ಹೊರಹೊಮ್ಮುವ ಬಣ್ಣಗಳ ವೈವಿಧ್ಯತೆ, ಮೋಡಿ ಮಾಡುವ ಮೋಡಗಳು ಮತ್ತು ವಿಭಿನ್ನವಾದ  ಛಾಯೆಗಳೊಂದಿಗೆ ಫೋಟೋಗಳು ಒಂದು ದೃಶ್ಯ ಕಾವ್ಯದಂತೆ ಕಾಣುತ್ತಿದ್ದು, ಒಂದಕ್ಕಿಂತ ಒಂದು ಅಮೋಘವಾಗಿರುವ ಈ ಫೋಟೋಗಳನ್ನು ನೋಡಿ ನೆಟ್ಟಿಗರು ಮೂಕ ವಿಸ್ಮಿತರಾಗಿದ್ದಾರೆ. 

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಭೂಮಿಯಿಂದ 354 ಕಿಲೋಮೀಟರ್ (220 ಮೈಲುಗಳು) ದೂರದಲ್ಲಿ ಪರಿಭ್ರಮಿಸುತ್ತಿದ್ದು, ಬಾಹ್ಯಾಕಾಶ ನೌಕೆ (spacecraft) ಯು ಪ್ರತಿ 92 ನಿಮಿಷಗಳಿಗೊಮ್ಮೆ ಭೂಮಿಯ ಸುತ್ತ ಒಂದು ಸುತ್ತು ಪೂರ್ಣಗೊಳಿಸುತ್ತದೆ. ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು 2022 ರ ಮೊದಲ ಸೂರ್ಯೋದಯದ ಅಮೋಘವಾದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಫೋಟೋಗಳನ್ನು ನೋಡಿ ರೋಮಾಂಚನಗೊಂಡಿದ್ದಾರೆ.

 

ಸೂರ್ಯನಿಂದ ಹೊರಹೊಮ್ಮುವ ವರ್ಣಗಳ ವೈವಿಧ್ಯತೆ, ಮೋಡಿ ಮಾಡುವ ಮೋಡಗಳು ಮತ್ತು ವಿಭಿನ್ನವಾದ ಸಮತಲ ಛಾಯೆಗಳೊಂದಿಗೆ ಈ ಫೋಟೋಗಳು ಒಂದು ಸುಂದರ ದೃಶ್ಯ ಕಾವ್ಯದಂತೆ ಮೂಡಿ ಬಂದಿದೆ. ಹೊಸ ವರ್ಷದ ಶುಭಾಶಯಗಳು, ಬಾಹ್ಯಾಕಾಶ ಸಂಸ್ಥೆಯ ಸಿಬ್ಬಂದಿ ದಿನವೊಂದಕ್ಕೆ 16 ಬಾರಿ ಸೂರ್ಯೋದಯವನ್ನು ನೋಡುತ್ತಾರೆ. 2022ರ 12am ನಿಂದ ಅದು ಅಧಿಕೃತವಾಗಿ ಆರಂಭವಾಗುತ್ತದೆ ಎಂದು ಈ ಫೋಟೋಗಳಿಗೆ ಬಾಹ್ಯಾಕಾಶ ಸಂಸ್ಥೆ ಕ್ಯಾಪ್ಷನ್ ನೀಡಿದೆ. ಈ ಫೋಟೋಗಳು ಸಾವಿರ ಪದಗಳಿಗೆ ಸಮ, ಧನ್ಯವಾದ 2022ರ ಹೊಸ ವರ್ಷದ ಶುಭಾಶಯಗಳು ಎಂದು ಈ ಫೋಟೋಗಳಿಗೆ ಟ್ವಿಟ್ಟರ್‌ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಸೂರ್ಯೋದಯಕ್ಕೂ ಮುನ್ನ ಎದ್ದರೇನು ಲಾಭ?

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಭೂಮಿಯಿಂದ 354 ಕಿಲೋಮೀಟರ್ (220 ಮೈಲುಗಳು) ದೂರದಲ್ಲಿ ಪರಿಭ್ರಮಿಸುತ್ತದೆ. ಬಾಹ್ಯಾಕಾಶ ನೌಕೆಯು ಪ್ರತಿ 92 ನಿಮಿಷಗಳಿಗೊಮ್ಮೆ ಭೂಮಿಯ ಸುತ್ತ ಒಂದು ಪ್ರಸುತ್ತು ಪೂರ್ಣಗೊಳಿಸುತ್ತದೆ. ಪ್ರತಿ ಗಂಟೆಗೆ 27,700 ಕಿಮೀ (17,200 ಮೈಲುಗಳು) ವೇಗದಲ್ಲಿ ಚಲಿಸುವ ನೌಕೆಯಿಂದಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಪ್ರತಿದಿನ 15 ರಿಂದ 16 ಸೂರ್ಯೋದಯ(Sunrise)  ಮತ್ತು ಸೂರ್ಯಾಸ್ತ (sunset) ಗಳನ್ನು ಅನುಭವಿಸುತ್ತಾರೆ ಎಂದು ಭೂ ವೀಕ್ಷಣಾಲಯ ತಿಳಿಸಿದೆ. 

2021ರ ಕೊನೆಯ ಸೂರ್ಯಾಸ್ತ, ಗೋಳಗುಮ್ಮಟದ ನಡುವೆ ಮರೆಯಾದ ದಿವಾಕರನ ಕಣ್ತುಂಬಿಕೊಳ್ಳಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಲ್ಲಿರುವ ಗಗನಯಾತ್ರಿಗಳು ಇತ್ತೀಚೆಗೆ ಕ್ರಿಸ್‌ಮಸ್‌ಗೂ ಮುನ್ನ ಹಬ್ಬದ ಸಂದೇಶ ರವಾನಿಸಿಕೊಂಡಿದ್ದರು.  ಈ ವೇಳೆ ಪ್ರತಿಯೊಬ್ಬರಿಗೂ ಕ್ರಿಸ್‌ಮಸ್ ಎಂದರೆ ಏನು ಎಂದು ವಿವರಿಸಿ ಮತ್ತು ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದರು. 2021ರ ಕೊನೆಯ ಸೂರ್ಯಾಸ್ತವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಗೋಳಗುಮ್ಮಟದ ನಡುವೆ ಸೂರ್ಯ ಮರೆಯಾಗುತ್ತಿರುವ ಮನಮೋಹಕ ದೃಶ್ಯವನ್ನು ಗುಮ್ಮಟ್ಟ ನಗರಿಯ ಜನ ಕಣ್ತುಂಬಿಕೊಂಡಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ