
ನವದೆಹಲಿ (ಫೆ.22): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Pakistan PM Imran Khan) ಅವರ ಪತ್ನಿ ಬುಶ್ರಾ ಬಿಬಿ (Bushra Bibi) ಅವರ ಹಿಂದಿನ ಮದುವೆಯಿಂದ ಹುಟ್ಟಿದ ಪುತ್ರನ ಮೇಲೆ ಲಾಹೋರ್ ಪೊಲೀಸ್ (Lahore Police) ಎಫ್ಐಆರ್ (FIR) ದಾಖಲು ಮಾಡಿದ್ದಾರೆ. ಮದ್ಯವನ್ನು ಹೊಂದಿದ್ದ ಆರೋಪದ ವೇಳೆ ಆತನ ಬಂಧನವಾಗಿದೆ ಎಂದು ಪಾಕಿಸ್ತಾನದ ಪತ್ರಿಕೆಗಳು ವರದಿ ಮಾಡಿವೆ.
ಎಫ್ಐಆರ್ ವರದಿಯ ಪ್ರಕಾರ, ಸೋಮವಾರ ಮುಂಜಾನೆಯ ವೇಳೆ ಗಾಲಿಭ್ ಮಾರ್ಕೆಟ್ ಪೊಲೀಸ್ ಕಾರ್ ಒಂದರಿಂದ ಸಾಕಷ್ಟು ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಮೊಹಮದ್ ಮೂಸಾ ಮನೇಕಾ ಹಾಗೂ ಆತನ ಸಂಬಂಧಿ ಮೊಹಮದ್ ಅಹ್ಮದ್ ಮನೇಕಾ (ಪಿಎಂಎಲ್-ಎನ್ ಎಂಎನ್ ಎ ಅಹ್ಮದ್ ರಾಜಾ ಮನೇಕಾ ಪುತ್ರ) ಹಾಗೂ ಅವರ ಸ್ನೇಹಿತ ಅಹ್ಮದ್ ಶಹರ್ಯಾರ್ ರನ್ನು ಬಂಧಿಸಲಾಗಿದೆ. ಜಹೂರ್ ಇಲಾಹಿ ರಸ್ತೆಯಲ್ಲಿ ಪೊಲೀಸ್ ಪಿಕೆಟ್ ದಾಟುತ್ತಿದ್ದಾಗ ಬಂಧಿಸಲಾದ ಮೂವರು ಶಂಕಿತರ ವಿರುದ್ಧ ನಿಷೇಧದ (ಹದ್ದ್ ಆದೇಶ ಜಾರಿ, 1979) ಉಪವಿಭಾಗ 3, 4 ಮತ್ತು 11 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ ಶಹರ್ಯಾರ್ ಕುಡಿದಿರುವುದು ಕಂಡುಬಂದಿದೆ. ಮೂಸಾ ಮತ್ತು ಅಹ್ಮದ್ ಅವರು ಆ ಸಮಯದಲ್ಲಿ ನಿಷಿದ್ಧ ಪದಾರ್ಥಗಳನ್ನು ಸೇವಿಸದ ಕಾರಣ ಮೇನಕಾ ಕುಟುಂಬದ ವ್ಯಕ್ತಿಯ ವೈಯಕ್ತಿಕ ಖಾತರಿಯ ಮೇರೆಗೆ ನಂತರ ಬಿಡುಗಡೆ ಮಾಡಲಾಯಿತು. ಶಹರ್ಯಾರ್ ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದರು. ವಶಪಡಿಸಿಕೊಂಡ ಮದ್ಯದ ಮಾದರಿಯನ್ನು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.
Top 10 News ಸಂಕಷ್ಟದಲ್ಲಿರುವ ಪಾಕಿಸ್ತಾನ ಸರ್ಕಾರ ಜನರಿಂದ ಚಿನ್ನ ಸಾಲ ಪಡೆಯಲು ನಿರ್ಧಾರ!
ಇತ್ತೀಚಿನ ದಿನಗಳಲ್ಲಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ಮಾತ್ರವಲ್ಲ ಮನೆಯ ವಿಚಾರದಲ್ಲೂ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಮ್ರಾನ್ ಖಾನ್ ಮತ್ತು ಅವರ ಮೂರನೇ ಪತ್ನಿ ಬುಶ್ರಾ ಬೀಬಿ ನಡುವೆ ಮನಸ್ತಾಪ ಇನ್ನಷ್ಟು ಹೆಚ್ಚಳವಾಗಿದೆ ಈ ಕಾರಣದಿಂದಾಗಿ ಬುಶ್ರಾ ಬೀಬಿ ಇಸ್ಲಾಮಾಬಾದ್‌ನಲ್ಲಿರುವ ಇಮ್ರಾನ್ ಖಾನ್ ಅವರ ಅರಮನೆಯನ್ನು ತೊರೆದು ಲಾಹೋರ್‌ಗೆ ಹೋಗಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ. ಬುಶ್ರಾ ಬೀಬಿ ತನ್ನ ಸ್ನೇಹಿತೆ ಸಾನಿಯಾ ಶಾ ಜೊತೆ ಲಾಹೋರ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಬುಶ್ರಾ ಬೀಬಿ ನಿರ್ಗಮನದ ನಂತರ ಇಮ್ರಾನ್ ತನ್ನ ಮನೆಯ ಎಲ್ಲಾ ವೈಯಕ್ತಿಕ ಸಿಬ್ಬಂದಿಯನ್ನು ಸಹ ಬದಲಾಯಿಸಿದ್ದಾರೆ ಎಂದು ಹೇಳಲಾಗಿದೆ.
ಭಾರತದೆದುರು ತಲೆಬಾಗಲು ಸಿದ್ಧ ಎಂದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!
ಶೀಘ್ರದಲ್ಲೇ ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ತಾವು ಬೇರ್ಪಟ್ಟಿರುವುದನ್ನು ಔಪಚಾರಿಕವಾಗಿ ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ವಿರೋಧ ಪಕ್ಷಗಳ ಒಕ್ಕೂಟವಾದ ಪಾಕಿಸ್ತಾನ್ ಡೆಮಾಕ್ರಟಿಕ್ ಅಲಯನ್ಸ್ ಇಮ್ರಾನ್ ಖಾನ್ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಮತ್ತು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ದೇಶದ ಮುಂದಿನ ಪ್ರಧಾನಿಯಾಗಿ ಬಿಂಬಿಸಲು ವಿರೋಧ ಪಕ್ಷಗಳಿಂದ ಊಹಾಪೋಹವೂ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ