ಭಾರತ-ಮಾಲ್ಡೀವ್ಸ್ ವಿಮಾನಸೇವೆಗೆ 46 ವರ್ಷ: ಜಲಫಿರಂಗಿ ಹಾರಿಸಿ ಏರ್‌ಇಂಡಿಯಾ ವಿಮಾನಕ್ಕೆ ಸ್ವಾಗತ

Suvarna News   | Asianet News
Published : Feb 22, 2022, 02:50 PM IST
ಭಾರತ-ಮಾಲ್ಡೀವ್ಸ್ ವಿಮಾನಸೇವೆಗೆ 46 ವರ್ಷ: ಜಲಫಿರಂಗಿ ಹಾರಿಸಿ ಏರ್‌ಇಂಡಿಯಾ ವಿಮಾನಕ್ಕೆ ಸ್ವಾಗತ

ಸಾರಾಂಶ

ಮಾಲೆಯಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಅದ್ಧೂರಿ ಸ್ವಾಗತ ಜಲಫಿರಂಗಿ ಹಾರಿಸಿ ಏರ್‌ಇಂಡಿಯಾ ವಿಮಾನ ಸ್ವಾಗತಿಸಿದ ಮಾಲ್ಡೀವ್ಸ್ ಭಾರತ-ಮಾಲ್ಡೀವ್ಸ್ ವಿಮಾನಸೇವೆಗೆ 46 ವರ್ಷಗಳ ಸಂಭ್ರಮ

ಮಾಲ್ಡೀವ್ಸ್(ಫೆ.22): ಏರ್ ಇಂಡಿಯಾ ವಿಮಾನ, AI-267 ಅನ್ನು ಸೋಮವಾರ ಮಾಲೆ ವಿಮಾನ ನಿಲ್ದಾಣದಲ್ಲಿ ಜಲಫಿರಂಗಿ ಗೌರವದೊಂದಿಗೆ ಸ್ವಾಗತಿಸಲಾಯಿತು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ 46 ವರ್ಷಗಳ ವೈಮಾನಿಕ ಸೇವೆಯ ನೆನಪಿಗಾಗಿ ಈ ವಿಮಾನವನ್ನು ಜಲಫಿರಂಗಿ ಹಾರಿಸುವ ಮೂಲಕ ಸ್ವಾಗತಿಸಲಾಯಿತು. ಫೆಬ್ರವರಿ 1976 ರಲ್ಲಿ ಭಾರತದ ತಿರುವನಂತಪುರಂನಿಂದ (Thiruvananthapuram) ಮಾಲ್ಡೀವ್ಸ್‌ನ ಮಾಲೆಗೆ (Male) ಮೊದಲ ಬಾರಿ ಏರ್‌ ಇಂಡಿಯಾ ವಿಮಾನ ಹಾರುವ ಮೂಲಕ ಎರಡು ದೇಶಗಳ ನಡುವೆ ವಾಯುಯಾನ ಸೇವೆಯನ್ನು ಆರಂಭಿಸಲಾಯಿತು.

ಏರ್ ಇಂಡಿಯಾ ತನ್ನ ಅಧಿಕೃತ ಟ್ಟಿಟ್ಟರ್‌ ಖಾತೆಯಲ್ಲಿ ಮಾಲ್ಡೀವ್ಸ್‌ನ (Maldives) ಮಾಲೆಯಲ್ಲಿ ಜಲಫಿರಂಗಿ ಮೂಲಕ ಏರ್‌ ಇಂಡಿಯಾ ವಿಮಾನವನ್ನು ಸ್ವಾಗತಿಸಿದ ವಿಡಿಯೋವನ್ನು ಪೋಸ್ಟ್‌ ಮಾಡಿದೆ. ವಿಮಾನವೂ ಲ್ಯಾಂಡ್‌ ಆಗುವ ಸಂದರ್ಭದಲ್ಲಿ ಎರಡು ಬದಿಗಳಿಂದ ಮೇಲೆಗೆ ಜಲಫಿರಂಗಿಯನ್ನು ಹಾರಿಸಿ ವಿಮಾನದ ಮೇಲೆ ನೀರಿನ ಸಿಂಚನವಾಗುವುದನ್ನು ಈ ವಿಡಿಯೋ ತೋರಿಸುತ್ತಿದೆ. ಈ ಮನಮೋಹಕ ಸ್ವಾಗತವನ್ನು ಸ್ವೀಕರಿಸಿದ ಏರ್‌ ಇಂಡಿಯಾ ವಿಮಾನ AI-267 ನಿಧಾನವಾಗಿ ರನ್‌ವೇಯಲ್ಲಿ ಇಳಿಯುತ್ತದೆ. 

ಟ್ವಿಟರ್‌ನಲ್ಲಿ ನಿನ್ನೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಫೆಬ್ರವರಿ 1976 ರಲ್ಲಿ ತಿರುವನಂತಪುರಂನಿಂದ ಮಾಲೆಗೆ ಎರಡು ದೇಶಗಳ ನಡುವೆ ಮೊದಲ ಬಾರಿ ವಿಮಾನ ಹಾರಾಟ ನಡೆಸಲಾಯಿತು ಎಂದು ಏರ್ ಇಂಡಿಯಾ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ವಿಮಾನ ಹಾರಾಟ ಸೇವೆಗೆ ಸಿದ್ಧತೆಗಳು ಮುಂದುವರೆದಿದೆ. 'ಸಾರಿಗೆ ಬಬಲ್ಸ್' ಎಂಬುದು ಎರಡು ದೇಶಗಳ ನಡುವಿನ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಪುನರಾರಂಭಿಸಲು ನಿಯಮಿತ ಅಂತಾರಾಷ್ಟ್ರೀಯ ವಿಮಾನ ಸೇವೆ ಅಮಾನತು ಜಾರಿಯಲ್ಲಿದೆ.

5G Rollout Concerns: USನ ಹಲವು ನಗರಗಳಿಗೆ ಏರ್ ಇಂಡಿಯಾ ಸೇರಿದಂತೆ ಇತರ ವಿಮಾನಗಳು ರದ್ದು!

ಬರೋಬ್ಬರಿ 90 ವರ್ಷಗಳ ಹಿಂದೆ ಟಾಟಾ ಸಂಸ್ಥೆ(Tata Group) ಆರಂಭಿಸಿದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು  1953ರಲ್ಲಿ ರಾಷ್ಟ್ರೀಕರಣ ಹೆಸರಿನಲ್ಲಿ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಬಳಿಕ ನಷ್ಟದ ಮೇಲೆ ನಷ್ಟ ಅನುಭವಿಸಿದ್ದ ಅದೇ ಏರ್ ಇಂಡಿಯಾವನ್ನು(Air India) ಟಾಟಾ ಗ್ರೂಪ್ ಕಳೆದ ವರ್ಷ ಅಕ್ಟೋಬರ್  ತಿಂಗಳಲ್ಲಿ 18,000 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಈ ಮೂಲಕ ಸುಮಾರು ಏಳು ದಶಕಗಳ ನಂತರ, ರತನ್‌ ಟಾಟಾ (Ratan Tata) ನೇತೃತ್ವದ ಟಾಟಾ ಗ್ರೂಪ್ ದೇಶದ ಸರ್ಕಾರಿ ವಿಮಾನಯಾನ ಸಂಸ್ಥೆಯಾದ ಏರ್‌ ಇಂಡಿಯಾವನ್ನು ಪುನಃ ತಮ್ಮ ನಿಯಂತ್ರಣಕಕ್ಕೆ ಪಡೆದುಕೊಂಡಿದ್ದರು.

ಭಾರತೀಯರಿಗೆ ಮಾಲ್ಡೀವ್ಸ್‌ಗೆ ನೋ ಎಂಟ್ರಿ..! ಇನ್ನೆಲ್ರಪ್ಪಾ ಹೋಗ್ತೀರಿ ಎಂದ ನೆಟ್ಟಿಗರು

ಇತ್ತೀಚೆಗೆ, ಏರ್ ಇಂಡಿಯಾ ಪೈಲಟ್ ಇಂಗ್ಲೆಂಡ್‌ನಲ್ಲಿ (England) ಯುನೈಸ್‌ ಚಂಡಮಾರುತದ ಮಧ್ಯೆಯೂ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವನ್ನು ಚಾಣಾಕ್ಷತನದಿಂದ  ಲ್ಯಾಂಡ್‌ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ಗಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ