ಕೊರೋನಾ ಪೀಡಿತರಿಗೆ ಸೋಂಕುನಾಶಕ ದ್ರವ ಚುಚ್ಚಿ: ಟ್ರಂಪ್ ಭಯಾನಕ ಐಡಿಯಾ!

By Kannadaprabha News  |  First Published Apr 25, 2020, 9:03 AM IST

ಕೊರೋನಾಪೀಡಿತರಿಗೆ ಸೋಂಕುನಾಶಕ ಚುಚ್ಚಿ!| ಕೊರೋನಾ ತಡೆಗೆ ಟ್ರಂಪ್‌ ಭಯಾನಕ ಐಡಿಯಾ| ಇದು ಅಪಾಯಕಾರಿ, ಪಾಲಿಸಬೇಡಿ: ವೈದ್ಯರು


ವಾಷಿಂಗ್ಟನ್‌(ಏ.25): ಸೋಂಕು ಹರಡದಂತೆ ತಡೆಯಲು ಸಿಂಪಡಿಸಲಾಗುವ ಸೋಂಕುನಿವಾರಕಗಳನ್ನು ರೋಗಿಯ ದೇಹಕ್ಕೆ ಚುಚ್ಚಿದರೆ ಅಥವಾ ನೇರಳಾತೀತ (ಅಲ್ಟಾ್ರವಯಲೆಟ್‌- ಯುವಿ) ಕಿರಣಗಳನ್ನು ಹಾಯಿಸಿದರೆ ಕೊರೋನಾ ವೈರಸ್‌ ಅನ್ನು ಕೊಲ್ಲಬಹುದು ಎಂದು ಸಲಹೆ ನೀಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಗೆಪಾಟಲಿಗೆ ಗುರಿಯಾಗಿದ್ದಾರೆ. ಟ್ರಂಪ್‌ ಅವರ ಸಲಹೆ ಅಪಾಯಕಾರಿಯಾಗಿದ್ದು, ಯಾರೂ ಇದನ್ನು ಪಾಲಿಸಬೇಡಿ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ಹೊಸ ವೈಜ್ಞಾನಿಕ ಅಧ್ಯಯನವೊಂದನ್ನು ಬಿಡುಗಡೆ ಮಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಬಿಲ್‌ ಬ್ರಿಯಾನ್‌, ಸೂರ್ಯನ ಕಿರಣಗಳು ಮತ್ತು ಆದ್ರ್ರತೆಗೆ ತೆರೆದುಕೊಂಡರೆ ಕೊರೋನಾ ವೈರಸ್‌ ಸಾಯುತ್ತದೆ. ಬ್ಲೀಚ್‌ ಹಾಗೂ ಐಸೋಪ್ರೊಪೈಲ್‌ ಅಲ್ಕೋಹಾಲ್‌ 30 ಸೆಕೆಂಡ್‌ನಲ್ಲಿ ವೈರಸ್‌ ಅನ್ನು ಕೊಲ್ಲುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ ಎಂದು ಹೇಳಿದರು.

Latest Videos

undefined

ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ಇನ್ನೂ ಭೀಕರ ಕೊರೋನಾ ದಾಳಿ: ತಜ್ಞರ ಎಚ್ಚರಿಕೆ!

ಇದರಿಂದ ಅಚ್ಚರಿಗೆ ಒಳಗಾದ ಟ್ರಂಪ್‌ ಸುದ್ದಿಗೋಷ್ಠಿಯ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿ, ವ್ಯಕ್ತಿಯ ದೇಹದ ಒಳಕ್ಕೆ ಸೋಂಕು ನಿವಾರಕಗಳನ್ನು ಸೇರಿಸಿದರೆ ಕೊರೋನಾವನ್ನು ಹಿಮ್ಮೆಟ್ಟಿಸಬಹುದು. ಇವು ಒಂದು ನಿಮಿಷದಲ್ಲಿ ಶ್ವಾಸಕೋಶವನ್ನು ವೈರಸ್‌ನಿಂದ ಮುಕ್ತಗೊಳಿಸುತ್ತವೆ ಎಂಬ ಸಲಹೆಯನ್ನು ಮುಂದಿಟ್ಟರು. ಅಲ್ಲದೇ ದೆಹಕ್ಕೆ ಯುವಿ ಕಿರಣಗಳಂತಹ ಶಕ್ತಿಶಾಲಿ ಬೆಳಕನ್ನು ಹರಿಸುವುದರಿಂದ ಕೊರೋನಾ ವೈರಸ್‌ ನಾಶವಾಗುತ್ತದೆಯೇ ಎಂಬುದನ್ನೂ ಪ್ರಯೋಗ ಮಾಡಬೇಕು ಎಂಬ ಸಲಹೆ ನೀಡಿದರು.

ಕೊರೋನಾ ತಾಂಡವ: ಅಮೆರಿಕದಲ್ಲಿ ದುಡ್ಡಿಗೆ ಬಲೆ, ಭಾರತದಲ್ಲಿ ಜೀವಕ್ಕೆ ಬೆಲೆ!

ಟ್ರಂಪ್‌ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಆರೋಗ್ಯ ಇಲಾಖೆಯೇ ಟ್ರಂಪ್‌ ಅವರ ಸಲಹೆಯನ್ನು ಅಲ್ಲಗಳೆದಿದೆ. ಇದೇ ವೇಳೆ ಟ್ರಂಪ್‌ ಸಲಹೆಯಂತೆ ಸೋಂಕು ನಾಶಕಗಳನ್ನು ಸೇವನೆ ಮಾಡಬೇಡಿ ಎಂದು ಬ್ಲೀಚ್‌ ತಯಾರಿಕಾ ಕಂಪನಿಗಳು ಗ್ರಾಹಕರಿಗೆ ಎಚ್ಚರಿಕೆ ನೀಡಿವೆ.

click me!