
ನ್ಯೂಯಾರ್ಕ್: ‘ಬಿಜೆಪಿ ವಿಶ್ವದ ಅತ್ಯಂತ ಪ್ರಮುಖ ವಿದೇಶಿ ರಾಜಕೀಯ ಪಕ್ಷವಾಗಿದೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅಮೆರಿಕದ ಪ್ರಭಾವಿ ದಿನಪತ್ರಿಕೆ ‘ವಾಲ್‌ಸ್ಟ್ರೀಟ್ ಜರ್ನಲ್’ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಬಣ್ಣಿಸಲಾಗಿದೆ.
ಅಮೆರಿಕದ ಖ್ಯಾತ ಶಿಕ್ಷಣ ತಜ್ಞ ( (American educationalist) ವಾಲ್ಟರ್ ರಸೆಲ್ ಮೀಡ್(Walter Russell Mead) ಅವರು ಈ ಲೇಖನವನ್ನು ಬರೆದಿದ್ದಾರೆ. ‘ಬಿಜೆಪಿ 2014 ಮತ್ತು 2019ರ ಸತತ ಗೆಲುವಿನ ನಂತರ 2024ರಲ್ಲಿ ಪುನರಾವರ್ತಿತ ಗೆಲುವಿನತ್ತ ಸಾಗುತ್ತಿದೆ. ಭಾರತವು ಜಪಾನ್‌ನೊಂದಿಗೆ ಇಂಡೋ-ಪೆಸಿಫಿಕ್ ವಲಯದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ’ ಎಂದೂ ಅವರು ಬಣ್ಣಿಸಿದ್ದಾರೆ.
ಇದೇ ವೇಳೆ, ಭಾರತ ಹಾಗೂ ಚೀನಾ ನಡುವಿನ ಸಂಘರ್ಷವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಮೀಡ್, ‘ಬಿಜೆಪಿ ಯಾರ ಸಹಾಯವೂ ಇಲ್ಲದೇ ಚೀನಾದ ಪ್ರತಿರೋಧವನ್ನು ಸಮರ್ಥವಾಗಿ ಎದುರಿಸುತ್ತಿದೆ. ಇದು ಈ ಪ್ರದೇಶದಲ್ಲಿ ಸಮತೋಲನ ಕಾಯುವ ಅಮೆರಿಕದ (America) ಯತ್ನಕ್ಕೆ ನೆರವಾಗಲಿದೆ’ ಹೇಳಿದ್ದಾರೆ.
Karnataka election 2023: Rallyಗೆ ಜನಾ ಬೇಕಾ? ಕತ್ತಲಾದರೆ ಎಕ್ಸ್‌ಟ್ರಾ ಚಾರ್ಜು!
ಅಮೆರಿಕ ಪಾಲಿಗೆ ಬಿಜೆಪಿ ಮುಖ್ಯ:
‘ಬಿಜೆಪಿ ವಿದೇಶಿಯರಿಗೆ ಹೆಚ್ಚು ಪರಿಚಯವಿಲ್ಲದ ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸದಿಂದ ಬೆಳೆದು ಬಂದಿದೆ. ಹೀಗಾಗಿ ವಿದೇಶಗಳಲ್ಲಿ ಆ ಪಕ್ಷವನ್ನು ಸರಿಯಾಗಿ ಜನರು ಅರ್ಥ ಮಾಡಿಕೊಂಡಿಲ್ಲ’ ಎಂದಿದ್ದಾರೆ. ಆದರೆ, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ (BJP and RSS) ತೊಡಗಿಸಿಕೊಳ್ಳುವ ಸಾಧ್ಯತೆಯನ್ನು ಅಮೆರಿಕನ್ನರು ತಿರಸ್ಕರಿಸಕೂಡದು. ಚೀನಾದೊಂದಿಗಿನ ಉದ್ವಿಗ್ನತೆ ಹೆಚ್ಚಾದಂತೆ, ಅಮೆರಿಕಕ್ಕೆ ಭಾರತವು ಆರ್ಥಿಕ ಮತ್ತು ರಾಜಕೀಯ ಪಾಲುದಾರನಾಗಿ ಅಗತ್ಯವಿದೆ. ಭಾರತದೊಂದಿಗೆ ಆರ್ಥಿಕವಾಗಿ ತೊಡಗಿಸಿಕೊಳ್ಳಲು ಬಯಸುವ ಅಮೆರಿಕ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಹಿಂದೂ ರಾಷ್ಟ್ರೀಯತಾವಾದಿ ಚಳವಳಿಯ ಸಿದ್ಧಾಂತ ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ’ ಎಂದು ಮೀಡ್ ಬರೆದಿದ್ದಾರೆ.
ಸೂಪರ್ ಪವರ್ ಮಾಡಲು ಪಣ:
‘ಈಜಿಪ್ಟ್ ನ ಮುಸ್ಲಿಂ ಬ್ರದರ್‌ಹುಡ್ (Brotherhood) ಪಕ್ಷದಂತೆ ಬಿಜೆಪಿಯು ಪಾಶ್ಚಿಮಾತ್ಯ ಉದಾರವಾದದ ಅನೇಕ ವಿಚಾರಗಳು ಮತ್ತು ಆದ್ಯತೆಗಳನ್ನು ತಿರಸ್ಕರಿಸುತ್ತದೆ. ಆದರೂ ಅದು ಆಧುನಿಕತೆಯ ಪ್ರಮುಖ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. ಚೀನಾದ ಕಮ್ಯುನಿಸ್ವ್ ಪಕ್ಷದಂತೆ, ಬಿಜೆಪಿಯು ಭಾರತವನ್ನು ಜಾಗತಿಕ ಸೂಪರ್ ಪವರ್ ಮಾಡಲು ಪಣ ತೊಟ್ಟಿದೆ’ ಎಂದಿದ್ದಾರೆ.
ಇತರ ಧರ್ಮದ ಮೇಲೂ ಬಿಜೆಪಿ ಪ್ರಭಾವ:
ಇದೇ ವೇಳೆ, ಬಿಜೆಪಿಯ ಇತ್ತೀಚಿನ ಚುನಾವಣಾ ಯಶಸ್ಸುಗಳ ಬಗ್ಗೆಯೂ ಬರೆಯಲಾಗಿದೆ. ‘ಪ್ರಬಲ ಹಿಂದುತ್ವವಾದಿ ಪಕ್ಷವಾದರೂ ಕ್ರೈಸ್ತರೇ ಪ್ರಬಲವಾಗಿರುವ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಇನ್ನು 20 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಿಯಾ ಮುಸ್ಲಿಮರ ಬೆಂಬಲ ಗಳಿಸಿದೆ. ಜಾತಿ ತಾರತಮ್ಯದ (caste discrimination) ವಿರುದ್ಧ ಹೋರಾಡುವ ಪ್ರಯತ್ನಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಮಹತ್ವದ ಪಾತ್ರ ವಹಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಪ್‌ನಿಂದ ಖಲಿಸ್ತಾನ ಹೋರಾಟ ಮತ್ತೆ ಆರಂಭ, ರಾಜಕೀಯಕ್ಕಾಗಿ ಪಂಜಾಬ್ ಬಲಿ ಎಂದ ಬಿಜೆಪಿ!
‘ಹಿರಿಯ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಮತ್ತು ಅವರ ಕೆಲವು ವಿಮರ್ಶಕರೊಂದಿಗೆ ನಾನು ಸರಣಿ ಸಭೆಗಳನ್ನು ನಡೆಸಿದೆ. ಅಮೆರಿಕನ್ನರು ಮತ್ತು ಪಾಶ್ಚಿಮಾತ್ಯರು ಬಿಜೆಪಿ ಬಗ್ಗೆ ಆಳವಾಗಿ ತಿಳಿಯವುದು ಸಾಕಷ್ಟಿದೆ ಎಂಬುದು ನನಗೆ ಮನವರಿಕೆ ಆಯಿತು’ ಎಂದಿದ್ದಾರೆ.
‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Pradesh Chief Minister Yogi Adityanath) ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ (RSS chief Mohan Bhagwat) ಅವರನ್ನೂ ನಾನು ಭೇಟಿ ಆದೆ. ಯೋಗಿ ಕೆಲವೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ರೀತಿ ಮಾತನಾಡುತ್ತಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರು ತುಂಬಾ ಮಾತನಾಡಿದರು. ಇನ್ನು ಭಾಗವತ್ ಅವರು ಭಾರತದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವ ಅಗತ್ಯದ ಬಗ್ಗೆ ನನ್ನೊಂದಿಗೆ ಮಾತನಾಡಿದರು. ಆದರೆ ಅಲ್ಪಸಂಖ್ಯಾತರ ಹಕ್ಕು ಮೊಟಕು ಮಾಡುವ ಆರೋಪ ನಿರಾಕರಿಸಿದರು’ ಎಂದು ಮೀಡ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ