
ವಾಷಿಂಗ್ಟನ್(ಜ.24): ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್ 'ಜನ್ಮಸಿದ್ದ ಪೌರತ್ವ ಹಕ್ಕು' ರದ್ದತಿ ನಿರ್ಧಾರ!
ಹೌದು.. ಅಮೆರಿಕದಲ್ಲಿ ಜನಿಸುವ ವಿದೇಶಿ ಪ್ರಜೆಗಳ ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಅಮೆರಿಕದ ಪೌರತ್ವವನ್ನು ರದ್ದುಪಡಿಸುವ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದು, ಇದು ಫೆ.20ರಿಂದ ಜಾರಿಗೆ ಬರಲಿದೆ. ಆದ್ದರಿಂದ ಫೆ.19ಕ್ಕೂ (ಅಮೆರಿಕ ಕಾಲಮಾನ ಫೆ.19ರ ಮಧ್ಯರಾತ್ರಿ 12ರೊಳಗೆ ಮೊದಲೇ ಮಕ್ಕಳನ್ನು ಹೆತ್ತರೆ ಅವರು ಅಮೆರಿಕದ ಪ್ರಜೆಯಾಗುತ್ತಾರೆ ಎಂಬ ಆಸೆಯೊಂದಿಗೆ ದಂಪತಿಗಳು ಸಿಸೇರಿಯನ್ ಮೂಲಕ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾರೆ.
ಜನ್ಮಸಿದ್ಧ ಪೌರತ್ವ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ಭಾರತೀಯರ ವಿರೋಧ
ವೈದ್ಯರು ಹೇಳಿದ್ದೇನು?:
ಈ ಕುರಿತು ಮಾತನಾಡಿದ ನ್ಯೂ ಜೆರ್ಸಿಯಲ್ಲಿರುವ ಭಾರತ ಮೂದಲ ವೈದ್ಯೆ ರಮಾ, 'ಅನೇಕ ಗರ್ಭಿಣಿಯರು 9 ತಿಂಗಳು ತುಂಬುವ ಮೊದಲೇ ಸಿಸೇರಿಯನ್ ಮಾಡಿಸಲು ಬಯಸಿದ್ದಾರೆ. ತಾಯಿ- ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅರಿವಿದ್ದರೂ ಈ ಕ್ರಮಕ್ಕೆ ಮುಂದಾಗಿದ್ದಾರೆ' ಎಂದರು.
ಗರ್ಭಿಣಿಯರೇನು ಏನಂತಾರೆ?:
ಅತ್ತ ಭಾರತ ಮೂಲದ ಗರ್ಭಿಣಿಯೊಬ್ಬರು ಮಾತನಾಡಿ, 'ನಾವು ಕಳೆದ 6 ವರ್ಷಗಳಿಂದ ಅಮೆರಿಕದ ಶಾಶ್ವತ ಪೌರತ್ವ ನೀಡುವ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿದ್ದೇವೆ. ಈಗ ಮಗುವಿಗೆ ಅಮೆರಿಕದಲ್ಲಿ ಜನ್ಮನೀಡುವ ಮೂಲಕ ಅದನ್ನು ಸಾಧಿಸಲು ಯೋಚಿಸುತ್ತಿದ್ದೇವೆ. ಆದರೆ ಈಗ ಆಗುತ್ತಿರುವ ಬೆಳವಣಿಗೆಯಿಂದ ಭಯವಾ ಗುತ್ತಿದೆ' ಎಂದರು.
ಮಕ್ಕಳ ಹೆರಲು ಆತುರವೇಕೆ? .
ಅಮೆರಿಕದ ಹೊಸ ನೀತಿ ಅನ್ವಯ ಫೆ.19 ರೊಳಗೆ ಅಮೆರಿಕದಲ್ಲಿ ಜನಿಸಿದ ವಿದೇಶಿಯರ ಮಕ್ಕಳಿಗೆ ಜನ್ಮಸಿದ್ದ ಪೌರತ್ವ ಲಭ್ಯ " ಆ ಬಳಿಕ ಜನಿಸಿದ ಮಕ್ಕಳು ಪೌರತ್ವ ಕ್ಕಾಗಿ ಅನೇಕ ವರ್ಷ ಕಾಯಬೇಕು. ಹೀಗಾಗಿ ಭಾರತೀಯ ಮೂಲದ ಪೋಷಕರಿಂದ ಅವಧಿಗೆ ಮೊದಲೇ ಹೆರಿಗೆ ಮಾಡಿಸಿಕೊಳ್ಳಲು ಯತ್ನ, ವೈದ್ಯರು ಅನಾರೋಗ್ಯದ ಎಚ್ಚರಿಕೆ ನೀಡಿದರೂ ಕಿವಿಗೊಡದ ಪೋಷಕರು
ಟ್ರಂಪ್ ಆದೇಶವೇನು?
ಫೆ.19ರ ಬಳಿಕ ಜನಿಸುವ ಮಕ್ಕಳ ಪೋಷಕರಲ್ಲಿ ಒಬ್ಬರಾದರೂ ಅಮೆರಿಕ ನಾಗ ರಿಕ ಆಗಿರಬೇಕು. ಆಗ ಅವರಿಗೆ ಅಮೆರಿಕ ಪೌರತ್ವ ಸಿಗುತ್ತದೆ. ಇಬ್ಬರೂ ಅಮೆರಿಕ ನಾಗರಿಕ ಆಗದೇ ಇದ್ದರೆ, ಜನ್ಮಸಿದ್ದ ಪೌರತ್ವಸಿಗದು ಎಂಬ ನಿಯಮಕ್ಕೆ ಅಧ್ಯಕ್ಷ ಟ್ರಂಪ್ ಅಧಿ ಕಾರಕ್ಕೇರುತ್ತಿದ್ದಂತೆ ಸಹಿ ಮಾಡಿದ್ದರು.
ಅಮೇರಿಕಾ ಲಾಸ್ ಏಂಜಲೀಸ್ ಕಾಳ್ಗಿಚ್ಚು ಇನ್ನೂ ನಿಂತಿಲ್ಲ; 76 ಜೀವಗಳನ್ನು ಬಲಿ ಪಡೆದ ಭಯಾನಕ ಬೆಂಕಿ!
ಸಿಸೇರಿಯನ್ ಹೆರಿಗೆ ಏಕೆ?
ಫೆ.20ರಂದು ಜನ್ಮಸಿದ್ದ ಪೌರತ್ವ ಕಾಯ್ದೆ ರದ್ದಾಗುತ್ತದೆ. ಹೀಗಾಗಿ ಅಮೆರಿಕ ನಾಗರಿಕರಲ್ಲದ ದಂಪತಿಗಳು ಅಷ್ಟರೊಳಗೆ ಮಗು ಹೆತ್ತರೆ ಮಾತ್ರ ಆ ಮಗುವಿಗೆ ಅಮೆರಿಕ ಪೌರತ್ವ ಸಿಗುತ್ತದೆ. ಹೀಗಾಗಿ ಮಗುವಿಗೆ ಅಮೆರಿಕ ಪೌರತ್ವ ದೊರಕಲೇಬೇಕು ಎಂಬ ಹಟದಿ ಫೆ.19ರ ಮಧ್ಯರಾತ್ರಿಯೊಳಗೆ ಹೆರಿಗೆ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ಭಾರತೀಯರಿಗೇಕೆ ಆತಂಕ?
ಈಗಾಗಲೇ ಅಮೆರಿಕದಲ್ಲಿ ಭಾರತ ಮೂಲದ 54 ಲಕ್ಷ ಜನರಿದ್ದಾರೆ. ಆದರೆ ಇವರಲ್ಲಿ ಶೇ.34 | ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಉಳಿದ ಶೇ.66 ಜನರು ಭಾರತೀಯ ನಾಗರಿಕರಾಗಿದ್ದು, ಅಮೆರಿಕ ಪೌರರಲ್ಲ. ಕೆಲಸದ ಮೇಲೆ ಅಮೆರಿಕದಲ್ಲಿದ್ದಾರೆ. ಇವರಿಗೆ ಮಕ್ಕಳಾದರೆ, ಆಮಕ್ಕಳು ಅಮೆರಿಕ ಪೌರತ್ವದಿಂದ ವಂಚಿತರಾಗುವ ಭೀತಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ