
ವಾಷಿಂಗ್ಟನ್ (ಜ.23): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ನಂತರ ’ಲಿಬರ್ಟಿ ಬಾಲ್’ನಲ್ಲಿ ನಡೆದ ನಡೆದ ಸಮಾರಂಭದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಪ್ರತ್ಯಕ್ಷನಾಗಿದ್ದಾನೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಾರೂ ಈ ವಿಡಿಯೋ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ವಿಡಿಯೋದಲ್ಲಿ ಟ್ರಂಪ್ ಅವರ ವೇದಿಕೆ ಎಡ ಭಾಗದಲ್ಲಿ ಪನ್ನೂನ್ ಮತ್ತು ಇನ್ನಿತರರು ಹಾಜರಿದ್ದರು.
ಟ್ರಂಪ್ ಮತ್ತು ಅಲ್ಲಿದ್ದ ಎಲ್ಲರೂ ಅಮೆರಿಕ ಅಮೆರಿಕ ಎಂದು ಘೋಷಣೆ ಕೂಗುತ್ತಿದ್ದರೆ, ಇತ್ತ ಪನ್ನೂನ್ ಮಾತ್ರ ‘ಖಲಿಸ್ತಾನ್ ಜಿಂದಾಬಾದ್, ಖಲಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ ದೃಶ್ಯ ವಿಡಿಯೋದಲ್ಲಿದೆ. ಪನ್ನುಗೆ ಈ ಸಮಾರಂಭಕ್ಕೆ ಆಹ್ವಾನ ಇರಲಿಲ್ಲ. ಆದರೆ ಆತ ಬೇರೊಬ್ಬರ ಪಾಸ್ ಪಡೆದು ಸಮಾರಂಭಕ್ಕೆ ಹೋಗಿದ್ದ ಎಂದು ಹೇಳಲಾಗಿದೆ. ಈ ವಿಡಿಯೋ ಭಾರತದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪನ್ನು ಕೆನಡಾ ಹಾಗೂ ಅಮೆರಿಕ- ಎರಡೂ ದೇಶಗಳ ದ್ವಿಪೌರತ್ವ ಪಡೆದುರುವ ಪ್ರಜೆಯಾಗಿದ್ದಾನೆ.
ಕುಂಭಮೇಳ ರಣಾಂಗಣ ಮಾಡ್ತೇನೆ: ಉತ್ತರ ಪ್ರದೇಶದಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಮತ್ತೊಮ್ಮೆ ಬೆದರಿಕೆ ಹಾಕಿದ್ದು, ‘ಮಹಾ ಕುಂಭಮೇಳವನ್ನು ರಣರಂಗವನ್ನಾಗಿ ಮಾಡುತ್ತೇನೆ ’ಎಂದು ಹೇಳಿ ವಿಡಿಯೋ ಹರಿ ಬಿಟ್ಟಿದ್ದಾನೆ. ತನ್ನ ಒಂದು ವಿಡಿಯೋದಲ್ಲಿ ‘ಪ್ರಯಾಗ್‌ರಾಜ್ ಚಲೋ ನಡೆಸಬೇಕು. ಹಿಂದುತ್ವದ ಸಿದ್ಧಾಂತವನ್ನು ಕೊಂದು ಹಾಕಿ 2025ರ ಮಹಾಕುಂಭ ಮೇಳವನ್ನು ರಣರಂಗವನ್ನಾಗಿ ಮಾಡುತ್ತೇನೆ’ ಎಂದು ಆತ ಹೇಳಿದ್ದಾನೆ. ಮತ್ತೊಂದು ವಿಡಿಯೋದಲ್ಲಿ, ‘ಪ್ರಮುಖ ದಿನಗಳನ್ನು ಗುರಿಯಾಗಿಸಿ ಕಾಶ್ಮೀರಿಗಳು ಹಾಗೂ ಖಲಿಸ್ತಾನಿಗಳು ದಾಳಿ ಮಾಡಬೇಕು’ ಎಂದು ಕರೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತೀಯ ಅಖಾಡ್ ಪರಿಷದ್, ‘ಪನ್ನು ಒಬ್ಬ ಹುಚ್ಚ. ಆತ ಬಂದರೆ ಹೊಡೆದು ಓಡಿಸುತ್ತೇವೆ’ ಎಂದಿದೆ.
ಜನ್ಮಸಿದ್ಧ ಪೌರತ್ವ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ಭಾರತೀಯರ ವಿರೋಧ
ಇನ್ನೂ ಪನ್ನೂನ್ ಬೆದರಿಕೆ ಬಗ್ಗೆ ಅಖಿಲ ಭಾರತೀಯ ಅಖಾಡ ಪರಿಷತ್‌ನ ಮಹಂತ್ ರವೀಂದ್ರ ಪುರಿ ಪ್ರತಿಕ್ರಿಯಿಸಿ, ‘ಪನ್ನೂನ್ ಎಂಬ ವ್ಯಕ್ತಿ ಮಹಾ ಕುಂಭಮೇಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದರೆ ಅವನನ್ನು ಹೊಡೆದು ಓಡಿಸಲಾಗುವುದು. ಅಂತಹ ನೂರಾರು ಹುಚ್ಚರನ್ನು ನೋಡಿದ್ದೇವೆ. ಆದ್ದರಿಂದ ನಾವು ಅಂತಹ ಭ್ರಮೆಯ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ