ಭಾರತದ ಪತ್ರಿಕೋದ್ಯಮ ಬಗ್ಗೆ ಬೈಡೆನ್‌ ಮೆಚ್ಚುಗೆ!

By Suvarna NewsFirst Published Sep 26, 2021, 9:57 AM IST
Highlights

* ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಮೋದಿ ಅವರ ಬಳಿ ಹಾಸ್ಯ ಚಟಾಕಿ

* ಭಾರತದ ಪತ್ರಿಕೋದ್ಯಮ ಬಗ್ಗೆ ಬೈಡೆನ್‌ ಮೆಚ್ಚುಗೆ

ವಾಷಿಂಗ್ಟನ್‌(ಸೆ.26): ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಜತೆಗಿನ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌(Joe Biden) ಅವರು ಮೋದಿ ಅವರ ಬಳಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಓವಲ್‌ ಕಚೇರಿಯಲ್ಲಿ ಬೈಡೆನ್‌ ಅವರು ಸ್ವಾಗತ ಮಾಡಿದರು. ಬಳಿಕ ದ್ವಿಪಕ್ಷೀಯ ಮಾತುಕತೆಗೆ ಮುನ್ನ ಭಾರತದ ಪತ್ರಿಕೋದ್ಯಮ(Journalism) ಅಮೆರಿಕದ ಪತ್ರಿಕೋದ್ಯಮಕ್ಕಿಂತಲೂ ಉತ್ತಮವಾಗಿದೆ ಎಂದು ಬೈಡೆನ್‌ ಅವರು ಪ್ರಧಾನಿ ಮೋದಿ ಅವರ ಬಳಿ ತಮಾಷೆಯಾಗಿ ಹೇಳಿದರು.

ಅಲ್ಲದೆ, ‘ಮಾಧ್ಯಮ ಪ್ರತಿನಿಧಿಗಳು ಸರಿಯಾದ ಪ್ರಶ್ನೆಗಳನ್ನು ಕೇಳಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ(ಮೋದಿ) ಅನುಮತಿಯೊಂದಿಗೆ ಅವರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದು ಬೇಡ ಎಂದೆನಿಸುತ್ತದೆ’ ಎಂದರು. ಇದ​ಕ್ಕೆ ಮೋದಿ, ‘ಸಂಪೂರ್ಣ ಸಹ​ಮ​ತ​ವಿ​ದೆ’ ಎಂದು ಉತ್ತ​ರಿ​ಸಿ​ದ​ರು.

ಮೊದಲ ಬಾರಿ ಕ್ವಾಡ್‌ ಶಕ್ತಿ​ಪ್ರ​ದ​ರ್ಶ​ನ

ಕ್ವಾಡ್‌’ ಒಕ್ಕೂಟ (ಭಾ​ರತ, ಆಸ್ಪ್ರೇ​ಲಿಯಾ, ಅಮೆರಿಕ ಹಾಗೂ ಜಪಾ​ನ್‌ ದೇಶ​ಗ​ಳ ಒಕ್ಕೂ​ಟ​) ಇರು​ವುದು ಜಾಗ​ತಿಕ ಒಳಿ​ತಿ​ಗಾಗಿ. ನಮ್ಮ ಸಹ​ಕಾ​ರ​ದಿಂದ ವಿಶ್ವ ಹಾಗೂ ಇಂಡೋ-ಪೆಸಿ​ಫಿಕ್‌(indo Pacific) ವಲ​ಯ​ದಲ್ಲಿ ಶಾಂತಿ ಸ್ಥಾಪನೆ ಆಗ​ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿ​ದ್ದಾ​ರೆ.

ಭೌತಿ​ಕ​ವಾಗಿ ಮೊತ್ತ​ಮೊ​ದಲ ಬಾರಿ ನಡೆ​ಯು​ತ್ತಿ​ರುವ ಕ್ವಾಡ್‌ ಶೃಂಗ ಉದ್ದೇ​ಶಿಸಿ ಶುಕ್ರ​ವಾರ ಮಾತ​ನಾ​ಡಿದ ಮೋದಿ, ‘ನಾ​ವೆಲ್ಲ ಈ ಹಿಂದೆ 2004ರಲ್ಲಿ ಸುನಾಮಿ ಸಂಭ​ವಿ​ಸಿ​ದಾಗ ಇಂಡೋ-ಪೆಸಿ​ಫಿಕ್‌ ಪ್ರಾದೇ​ಶಿಕ ಸಹ​ಕಾ​ರಕ್ಕೆ ಒಟ್ಟಾ​ಗಿ​ದ್ದೆವು. ಈಗ ಮತ್ತೆ ಪ್ರಾದೇ​ಶಿಕ ಸಹ​ಕಾ​ರಕ್ಕೆ ಒಂದಾ​ಗಿ​ದ್ದೇವೆ. ನಮ್ಮೆ​ಲ್ಲರ ಧ್ಯೇಯ ಜಾಗತಿಕ ಒಳಿ​ತು’ ಎಂದ​ರು.

‘ಇಂದು ಕೋವಿ​ಡ್‌-19 ವಿರುದ್ಧ ವಿಶ್ವ​ವು ಹೋರಾ​ಡು​ತ್ತಿದೆ. ಈ ಸಂದ​ರ್ಭ​ದಲ್ಲಿ ಮಾನ​ವೀ​ಯ​ತೆಯ ಅಂಗ​ವಾಗಿ ನಾವು ಕೂಡ ಒಗ್ಗ​ಟ್ಟಾ​ಗಿ​ದ್ದೇ​ವೆ’ ಎಂದು ತಿಳಿ​ಸಿ​ದ​ರು.

click me!