ಭಾರತದಿಂದ ವಿಶ್ವದ ಮೊದಲ ಡಿಎನ್‌ಎ ಲಸಿಕೆ: ಮೋದಿ

Published : Sep 26, 2021, 09:06 AM ISTUpdated : Sep 26, 2021, 09:18 AM IST
ಭಾರತದಿಂದ ವಿಶ್ವದ ಮೊದಲ ಡಿಎನ್‌ಎ ಲಸಿಕೆ: ಮೋದಿ

ಸಾರಾಂಶ

* 12 ವರ್ಷದ ಮೇಲ್ಪ​ಟ್ಟ​ ಎಲ್ಲ​ರಿಗೂ ಈ ಲಸಿಕೆ ನೀಡ​ಬ​ಹು​ದು * ಇಡೀ ವಿಶ್ವಕ್ಕೇ ಲಸಿಕೆ ನೀಡಲು ಭಾರತ ರೆಡಿ * ಭಾರ​ತ​ದ​ಲ್ಲೇ ಲಸಿಕೆ ಉತ್ಪಾ​ದಿ​ಸಿ: ಜಾಗ​ತಿಕ ಕಂಪ​ನಿ​ಗ​ಳಿಗೆ ಮನ​ವಿ * ಸೇವೆಯೇ ಪರಮ ಧರ್ಮ ಎಂಬುದು ಭಾರತದ ಸಿದ್ಧಾಂತ

ವಿಶ್ವಸಂಸ್ಥೆ(ಸೆ.26): ಭಾರತವು(India) ಕೊರೋನಾ ವೈರಸ್‌(Coronavirus) ವಿರುದ್ಧದ ವಿಶ್ವದ ಮೊದಲ ಡಿಎನ್‌ಎ ಲಸಿಕೆಯನ್ನು(DNA Vaccine) ಅಭಿವೃದ್ಧಿಪಡಿಸಿದ್ದು, ಅದನ್ನು 12 ವರ್ಷ ಮೇಲ್ಪಟ್ಟಎಲ್ಲರಿಗೂ ನೀಡಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(narendra Modi) ಅವರು ಹೇಳಿದ್ದಾರೆ. ಅಲ್ಲದೆ, ಭಾರತಕ್ಕೆ ಬಂದು ಭಾರತದಲ್ಲೇ ಲಸಿಕೆ ಉತ್ಪಾದಿಸುವಂತೆ ವಿಶ್ವದ ಔಷಧ ಉತ್ಪಾದಕ ಕಂಪನಿಗಳಿಗೆ ಅವರು ಮುಕ್ತ ಆಹ್ವಾನ ನೀಡಿದ್ದು, ವಿಶ್ವದ ಯಾವುದೇ ದೇಶಗಳ ಪ್ರಜೆಗಳಿಗೆ ಲಸಿಕೆ ಪೂರೈಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಶನಿವಾರ ಸಂಜೆ ವಿಶ್ವಸಂಸ್ಥೆಯ(United nations) ಅಧಿವೇಶನದಲ್ಲಿ ಮಾತನಾಡಿದ ಅವರು, ‘ಸೇವೆಯೇ ಪರಮ ಧರ್ಮ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿರುವ ಭಾರತವು ಲಭ್ಯವಿರುವ ವಿರಳ ಸಂಪನ್ಮೂಲಗಳನ್ನೇ ಕೊರೋನಾ ಲಸಿಕೆಯ(Coronavirus) ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಬಳಸಿಕೊಳ್ಳಲಾಗಿತ್ತು. ತನ್ಮೂಲಕ ಭಾರತವು 12 ವರ್ಷ ಮೇಲ್ಪಟ್ಟಎಲ್ಲರಿಗೂ ನೀಡಬಹುದಾದ ಝೈಡಸ್‌ ಕ್ಯಾಡಿಲಾ ಸಂಸ್ಥೆಯು ವಿಶ್ವದ ಮೊದಲ ಝೈಕೋವ್‌-ಡಿ ಹೆಸರಿ ಡಿಎನ್‌ಎ ಲಸಿಕೆಯನ್ನು(DNA vaccine) ಅಭಿವೃದ್ಧಿಪಡಿಸಿದೆ ಎಂದು ವಿಶ್ವಸಂಸ್ಥೆಗೆ ತಿಳಿಸಲು ಇಚ್ಛಿಸುತ್ತೇನೆ’ ಎಂದು ಹೇಳಿದರು.

ಅಲ್ಲದೆ ಮೂಗಿನ ಮುಖಾಂತರ ನೀಡಲಾಗುವ ಲಸಿಕೆಯ ಅಭಿವೃದ್ಧಿಯಲ್ಲಿ ನಮ್ಮ ದೇಶದ ವಿಜ್ಞಾನಿಗಳು ಸಕ್ರಿಯವಾಗಿ ತೊಡಗಿದ್ದಾರೆ ಎಂದು ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಲ್ಲೇ ಲಸಿಕೆ ಉತ್ಪಾದಿಸಲು ಬನ್ನಿ:

ಕೊರೋನಾ ವೈರಸ್‌ಗೆ(Coronavirus) ಬಲಿಯಾದ ಕುಟುಂಬಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ ಅವರು, ವಿಶ್ವದ ಯಾವುದೇ ದೇಶಗಳ ಪ್ರಜೆಗಳಿಗೆ ಲಸಿಕೆ ಪೂರೈಸಲು ಸಿದ್ಧವಿರುವುದಾಗಿ ಹೇಳಿದರು. ಅಲ್ಲದೆ ಭಾರತಕ್ಕೆ ಬಂದು ಭಾರತದಲ್ಲೇ ಲಸಿಕೆ ಉತ್ಪಾದಿಸುವಂತೆ ವಿಶ್ವದ ಔಷಧ ಉತ್ಪಾದಕ ಕಂಪನಿಗಳಿಗೆ ಅವರು ಮುಕ್ತ ಆಹ್ವಾನ ನೀಡಿದರು.

ಭಾರತದಲ್ಲಿರುವ ಹೆಚ್ಚುವರಿ ಲಸಿಕೆಗಳನ್ನು 2021ರ ನಾಲ್ಕನೇ ತ್ರೈಮಾಸಿಕ ಅವಧಿಯಿಂದ ‘ವ್ಯಾಕ್ಸಿನ್‌ ಮೈತ್ರಿ’ ಅಗತ್ಯವಿರುವ ರಾಷ್ಟ್ರಗಳಿಗೆ ಪೂರೈಸಲಾಗುತ್ತದೆ ಎಂದು ಭರವಸೆ ನೀಡಿದರು.

ಕಳೆದ ಒಂದೂವರೆ ವರ್ಷದಿಂದ ಇಡೀ ವಿಶ್ವವೇ 100 ವರ್ಷಗಳಲ್ಲಿ ಕಂಡುಕೇಳರಿಯದ ಸಾಂಕ್ರಮಿಕ ಕೊರೋನಾ ವೈರಸ್‌ಗೆ ತತ್ತರಿಸಿದೆ. ಇಂಥ ಮಹಾಮಾರಿ ವೈರಸ್‌ಗೆ ಬಲಿಯಾದವರಿಗೆ ಗೌರವ ಹಾಗೂ ಸಂತಾಪ ಸೂಚಿಸುವುದಾಗಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ