
ನ್ಯೂಯಾರ್ಕ್(ಅ.17): ಸ್ನಾನ ಮಾಡುವ ವೇಳೆ ಮಹಿಳೆಯೊಬ್ಬರಿಗೆ ಏಕಾಏಕಿ ಹೆರಿಗೆಯಾಗಿ ಮಗುವೊಂದನ್ನು ಹೆತ್ತ ಘಟನೆ ಅಮೆರಿಕದ ನ್ಯೂಯಾರ್ಕ್ ಕ್ವೀನ್ಸ್‌ನಲ್ಲಿ ನಡೆದಿದೆ.
ವಿಚಿತ್ರವೆಂದರೆ ಭಾರತೀಯ ಮೂಲದ ಸಬಿತಾ ದೂಕ್ರಾಮ್ (23) ಎಂಬ ಆ ಮಹಿಳಿಗೆ ತಾನು ಗರ್ಭ ಧರಿಸಿದ್ದೇ ಗೊತ್ತಿಲ್ಲವಂತೆ. ಹೀಗಾಗಿ ಬಾತ್‌ರೂಮ್‌ನಲ್ಲಿ ಮಗು ಕಂಡು ಹೆದರಿದ ಆಕೆ ಮಗುವನ್ನು ಎತ್ತಿ ಕಿಟಕಿಯಿಂದ ಆಚೆ ಎಸೆದಿದ್ದಾಳೆ. ಬಳಿಕ ಸ್ನಾನದ ಕೋಣೆಯನ್ನು ತಾನೇ ಸ್ವಚ್ಛ ಮಾಡಿ, ಸ್ನಾನವನ್ನು ಮುಗಿಸಿ ನಿದ್ದೆ ಮಾಡಿದ್ದಾಳೆ. ಮಗುವಿನ ಚೀರಾಟ ಕೇಳಿದ ನೆರೆಹೊರೆಯವರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
16ನೇ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ, ಮಗು ಇಬ್ಬರೂ ಸಾವು!
ಘಟನೆಗೆ ಸಂಬಂಧಿಸಿದಂತೆ ಸಬಿತಾ ವಿರುದ್ಧ ಕೊಲೆ ಯತ್ನದ ಕೇಸು ದಾಖಲಾಗಿದೆ. ವಿಚಾರಣೆಯ ವೇಳೆ ಮಗು ಹೇಗೆ ಜನಿಸಿತು ಎಂಬುದು ನನಗೆ ಗೊತ್ತೇ ಇಲ್ಲ. ಸ್ನಾನಕ್ಕೆಂದು ಹೋಗಿದ್ದಾಗ ಮಗು ಜನಿಸಿತು. ಏನು ಮಾಡಬೇಕು ಎಂದು ತಿಳಿಯದೇ ಹೀಗೆ ಮಾಡಿದೆ. ಮಗು ಹೇಗಿದೆ ಎಂದು ಕೂಡ ನಾನು ನೋಡಿಲ್ಲ. ತನ್ನನ್ನು ಕ್ಷಮಿಸಿ ಎಂದು ದೂಕ್ರಾಮ್ ಕೇಳಿಕೊಂಡಿದ್ದಾಳೆ.
5 ಅಡಿ ಎತ್ತರದಿಂದ ಬಿದ್ದಿದ್ದರಿಂದ ಮಗುವಿನ ತಲೆಗೆ ಪೆಟ್ಟು ಬಿದ್ದಿದ್ದು, ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ