ರಾಜ ಚಾರ್ಲ್ಸ್ ಭೇಟಿಯಾದ ರಿಷಿ ಸುನಕ್, ಬ್ರಿಟನ್ ಪ್ರಧಾನಿಯಾಗಿ ಪದಗ್ರಹಣ!

By Suvarna NewsFirst Published Oct 25, 2022, 4:38 PM IST
Highlights

ಭಾರತೀಯ ಮೂಲಕ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂಗ್ಲೆಂಡ್ ರಾಜ 3ನೇ ಚಾರ್ಲ್ಸ್ ಭೇಟಿಯಾದ ಸುನಕ್, ಬಳಿಕ ಪ್ರಮಾಣ ವಚನ ಸ್ವೀಕರಿಸಿದರು. ಇಷ್ಟೇ ಅಲ್ಲ ಪ್ರಧಾನಿಯಾಗಿ ಮೊದಲ ಬಾರಿ ಭಾಷಣ ಮಾಡಿದ್ದಾರೆ 

ಲಂಡನ್(ಅ.25): ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಇಂಗ್ಲೆಂಡ್ ರಾಜ ಮೂರನೇ ಚಾರ್ಲ್ಸ್ ಭೇಟಿಯಾದ ಬೆನ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬ್ರಿಟನ್ ಪ್ರಧಾನಿಯಾಗಿ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ. ಈ ಕ್ಷಣದಿಂದಲೇ ನನ್ನ ಅಧಿಕಾರವದಿ ಆರಂಭಗೊಂಡಿದೆ. ಬ್ರಿಟನ್ ಎದುರಿಸುತ್ತಿರುವ ಸಂಕಷ್ಟಕ್ಕೆ ಸೂಕ್ತ ಪರಿಹಾರ ಒದಿಗಿಸುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ಬ್ರಿಟನ್ ಎದುರಿಸುತ್ತಿರುವ ಅಸ್ಥಿರತೆ ದೂರ ಮಾಡಿ ಸ್ಥಿರತ ತರುತ್ತೇನೆ. ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳು ಜಾರಿಯಾಗಲಿದೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ರಿಷಿ ಸುನಕ್ ಪ್ರಧಾನಿಯಾಗಿ ಪದಗ್ರಹಣ ಮಾಡಲು ಇಂಗ್ಲೆಂಡ್ ರಾಜ ಚಾರ್ಲ್ಸ್ ಭೇಟಿಯಾಗಿ ಅನುಮತಿ ಕೋರಿದರು. ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ರಾಜ ಚಾರ್ಲ್ಸ್ ಭೇಟಿಯಾದ ಸುನಕ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಬ್ರಿಟನ್ ರಾಣಿ ಕ್ಯಾಮಿಲ್ಲಾ ಸದ್ಯ ಬೆಂಗಳೂರಿನಲ್ಲಿದ್ದಾರೆ. ಪ್ರಕೃತಿ ಚಿಕಿತ್ಸೆಗಾಗಿ ನಿನ್ನೆ ಬೆಂಗಳೂರಿಗೆ ಆಗಮಿಸಿರುವ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ ಸದ್ಯ ವೈಟ್‌ಫೀಲ್ಡ್‌ನಲ್ಲಿರುವ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ದಿನಗಳ ಕಾಲ ಬೆಂಗಳೂರಿನಲ್ಲಿ ತಂಗಲಿದ್ದಾರೆ. ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಕ್ಯಾಮಿಲ್ಲಾ ಭಾಗಿಯಾವುದಿಲ್ಲ. ಇದು ಖಾಸಗಿ ಬೇಟಿಯಾಗಿದೆ ಎಂದು ಇಂಗ್ಲೆಂಡ್ ರಾಜಮನೆತನದ ಮೂಲಗಳು ಹೇಳಿವೆ. ಹೀಗಾಗಿ ರಿಷಿ ಸುನಕ್ ಅರಮನೆಯಲ್ಲಿ ರಾಜ ಚಾರ್ಲ್ಸ್ ಭೇಟಿಯಾದರು.

ಬ್ರಿಟನ್ ಮುಂದಿನ ಪ್ರಧಾನಿ ರಿಷಿ ಸುನಕ್ ಜೊತೆ ಟ್ರೆಂಡ್ ಆದ ಕ್ರಿಕೆಟಿಗ ಆಶಿಶ್ ನೆಹ್ರಾ!

ಚಾರ್ಲ್ಸ್ ಭೇಟಿ ಬಳಿಕ ರಿಷಿ ಸುನಕ್ ದೇಶವನ್ನುದ್ದೇಶಿ ಮಾತನಾಡಿದರು. ಕುಸಿದಿರುವ ಬ್ರಿಟನ್ ಆರ್ಥಿಕತೆಯನ್ನು ಮೇಲೆಕ್ಕೆತ್ತುವುದು ನನ್ನ ಮೊದಲ ಆದ್ಯತೆಯಾಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ. ದೇಶ ಹಾಗೂ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತೇನೆ. ಬ್ರಿಟನ್ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಮತ್ತೆ ಗತವೈಭವನ್ನು ಮರುಕಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ದೇಶಕ್ಕಾಗಿ ಹಗಲು ರಾತ್ರಿ ದುಡಿಯುತ್ತೇನೆ. ಕೇವಲ ಮಾತಿನಲ್ಲಿ ಮಾತ್ರವಲ್ಲ, ಕೆಲಸ ಮಾಡಿ ತೋರಿಸುತ್ತೇನೆ. ಬ್ರಿಟನ್ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಬ್ರಿಟನ್‌ ರಾಜ ಚಾರ್ಲ್ಸ್‌ಗಿಂತ Rishi Sunak ಹಾಗೂ ಪತ್ನಿ ಅಕ್ಷತಾ 2 ಪಟ್ಟು ಹೆಚ್ಚು ಶ್ರೀಮಂತರು..!

ದೇಶದ ಋುಣವನ್ನು ತೀರಿಸಲು ನನಗೆ ಸಿಕ್ಕ ಈ ಅತಿದೊಡ್ಡ ಅವಕಾಶವನ್ನು ವಿನಮ್ರತೆ ಹಾಗೂ ಗೌರವದಿಂದ ಸ್ವೀಕರಿಸುತ್ತೇನೆ. ಬ್ರಿಟನ್ನಿನ ಜನರಿಗಾಗಿ ನಾನು ಹಗಲು-ರಾತ್ರಿ ಸಮಗ್ರತೆ ಹಾಗೂ ವಿನಮ್ರತೆಯಿಂದ ಸೇವೆ ಸಲ್ಲಿಸಲು ಪಣ ತೊಡುತ್ತೇನೆ’ ಎಂದು ಘೋಷಿಸಿದ್ದಾರೆ. ‘ಬ್ರಿಟನ್‌ ಒಂದು ಅತ್ಯುತ್ತಮ ದೇಶವಾಗಿದೆ. ಆದರೆ ನಾವು ಗಂಭೀರವಾದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಮಗೀಗ ಸ್ಥಿರತೆ ಹಾಗೂ ಏಕತೆಯ ಅಗತ್ಯವಿದೆ. ಹೀಗಾಗಿ ಇದನ್ನೇ ನಾನು ನನ್ನ ಆದ್ಯತೆಯನ್ನಾಗಿಸಿ ಪಕ್ಷವನ್ನು ಹಾಗೂ ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇನೆ. ದೇಶ ಎದುರಿಸುತ್ತಿದ್ದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಹಾಗೂ ನಮ್ಮ ಮುಂದಿನ ಪೀಳಿಗೆಯ ಸಮೃದ್ಧ ಭವಿಷ್ಯಕ್ಕಾಗಿ ಇದು ಅನಿವಾರ್ಯವಾಗಿದೆ’ ಎಂದಿದ್ದಾರೆ.

ಸುನಕ್‌ಗೆ ಮೋದಿ ಅಭಿನಂದನೆ
ರಿಷಿ ಸುನಕ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವು ಬ್ರಿಟನ್‌ನ ಪ್ರಧಾನಿಯಾಗಿರುವುರಿಂದ ನಾನು ನಿಮ್ಮೊಂದಿಗೆ ಸೇರಿ ಜಾಗತಿಕ ವಿಚಾರಗಳಲ್ಲಿ ಹಾಗೂ 2030ರ ಮಾರ್ಗಸೂಚಿಯ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ. ಬ್ರಿಟನ್‌ನಲ್ಲಿರುವ ಭಾರತೀಯರೊಂದಿಗಿನ ‘ಜೀವಂತ ಸೇತುವೆ’ಯಾಗಿರುವ ನಿಮಗೆ ದೀಪಾವಳಿಯ ವಿಶೇಷ ಶುಭಾಶಯಗಳು. ನಾವು ನಮ್ಮ ಐತಿಹಾಸಿಕ ಸಂಬಂಧಗಳನ್ನು ಆರ್ಥಿಕ ಪಾಲುದಾರಿಕೆಯಾಗಿ ಪರಿವರ್ತಿಸಿಕೊಳ್ಳೋಣ ಎಂದು ನಿನ್ನೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
 

 

click me!