ಚೀನಾ ಅಸಲಿ ಮುಖ ಬಹಿರಂಗಪಡಿಸಿದ ಭಾರತೀಯ ಮೂಲದ ಪತ್ರಕರ್ತೆಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ!

By Suvarna NewsFirst Published Jun 12, 2021, 9:26 PM IST
Highlights
  • ಪ್ರತಿಷ್ಠಿತ ಅಂತಾರಾಷ್ಟ್ರೀಯ ಪುಲಿಟ್ಜರ್ ಪ್ರಶಸ್ತಿ ಪ್ರಕಟ
  • ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ಗೆ ಪ್ರಶಸ್ತಿ
  • ಚೀನಾ ಅಸಲಿ ಮುಖ ತನಿಖಾ ವರದಿಗೆ ಪ್ರಶಸ್ತಿ

ನವದೆಹಲಿ(ಜೂ.12):  ತನಿಖಾ ವರದಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ರಿಟನ್‌ನಲ್ಲಿ ನೆಲೆಸಿರುವ ತಮಿಳುನಾಡಿನ ಮೇಘಾ ರಾಜಗೋಪಾಲನ್‌ಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಭಾರತೀಯರಿಗೂ ಹೆಮ್ಮೆ ತಂದಿದೆ.

ಪ್ರತಿಷ್ಠಿತ ಜಾಕ್‌ಸನ್‌ ವನ್ಯಜೀವಿ ಮಾಧ್ಯಮ ಪ್ರಶಸ್ತಿ ಪ್ರಕಟ: ಪ್ರಶಸ್ತಿಗೆ ಭಾಜನವಾದ ಚಿತ್ರಗಳಿವು

ಚೀನಾದಲ್ಲಿ ನಡೆಸಿದ ತನಿಖಾ ವರದಿಗೆ ಈ ಪ್ರಶಸ್ತಿ ಲಭಿಸಿದೆ. ಚೀನಾ ಕೆಲ ಕ್ಯಾಂಪ್‌ಗಳಲ್ಲಿ ಮುಸ್ಲಿಂ ಉಯಿಘರ್ ಇತರ ಅಲ್ಪ ಸಂಖ್ಯಾತರನ್ನು ಬಂಧಿಸಿ ನೀಡುತ್ತಿದ್ದ ಚಿತ್ರಹಿಂಸೆ ಕುರಿತು ಮೇಘ ರಾಜಗೋಪಾಲನ್ ತನಿಖಾ ವರದಿ ಮಾಡಿದ್ದರು. ಈ ಮೂಲಕ ಚೀನಾದ ಅಸಲಿ ಮುಖ ಬಹಿರಂಗವಾಗಿತ್ತು.  ಈ ವರದಿ ಪ್ರಕಟಗೊಂಡ ಬಳಿಕ ಚೀನಾದಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದರು. ಇದೇ ವರದಿಗೆ ಪ್ರಶಸ್ತಿ ಲಭಿಸಿದೆ.

ಲಂಡನ್‌ನ ಬಝ್ ಫೀಡ್ ಸುದ್ದಿ ಸಂಸ್ಥೆಯ ಪತ್ರಕರ್ತೆಯಾಗಿರುವ ಮೇಘಾ, ತನಿಖಾ ವರದಿಯಿಂದಲೇ ಜನಪ್ರಿಯರಾಗಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ವರದಿ ಮಾಡಿದ್ದಾರೆ. ಚೀನಾ ಸೇರಿದಂತೆ 23 ರಾಷ್ಟ್ರಗಳಲ್ಲಿ ಮೇಘಾ ತನಿಖಾ ವರದಿ ಮಾಡಿದ್ದಾರೆ. ಚೀನಾದ ಉಯಿಘರ್ ಮುಸ್ಲಿಂ ಶಿಬಿರಕ್ಕೆ ಬೇಟಿ ನೀಡಿದ ಮೊದಲ ಪತ್ರಕರ್ತೆ ಮೇಘ. 2018ರಲ್ಲಿ ಮಾನವ ಹಕ್ಕುಗಳ ಪ್ರಶಸ್ತಿಯನ್ನೂ ಪಡೆದಿರುವ ಮೇಘಾ, ಇದೀಗ ಅತ್ಯುನ್ನತ್ತ ಪ್ರಶಸ್ತಿ ಪಡೆದಿದ್ದಾರೆ.

ಮೇಘಾ ರಾಜಗೋಪಾಲನ್, ಸಹೋದ್ಯೋಗಿಗಳಾದ ಅಲಿಸನ್ ಕಿಲಿಂಗ್, ಕ್ರಿಸ್ಟೋ ಬಶ್‌ಚೆಕ್ ಜೊತೆ ಈ ಬಾರಿಯ ಪುಲಿಟ್ಜರ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.  ಚೀನಾದ ಅಸಲಿ ಮುಖ ತೋರಿಸಿದ ಕಾರಣಕ್ಕೆ ಮೇಘಾಗೆ ನಿರ್ಬಂಧ ಹೇರಲಾಗಿತ್ತು. ಚೀನಾದಿಂದ ಕಜಕಿಸ್ತಾನಕ್ಕೆ ಪರಾರಿಯಾದ ಮೇಘಾ ಮತ್ತಷ್ಟು ಉಯಿಘರ್ ಮುಸ್ಲಿಂಮರನ್ನು ಸಂದರ್ಶಿಸಿ ವರದಿ ಪ್ರಕಟಿಸಿದ್ದರು.

click me!