
ನವದೆಹಲಿ(ಜೂ.12): ಅಮೆರಿಕ ಹಾಗೂ ಸಿಂಗಾಪುರದಲ್ಲಿ ಈಗಾಗಲೇ ತಲ್ಲಣ ಹುಟ್ಟಿಸಿರುವ ಭಾರತದ ಡೆಲ್ಟಾರೂಪಾಂತರಿ ತಳಿಯ ಕೊರೋನಾ ವೈರಸ್ ಇದೀಗ ಯುರೋಪ್ ದೇಶಗಳಲ್ಲೂ ವ್ಯಾಪಕವಾಗುವ ಭೀತಿ ಎದುರಾಗಿದೆ.
ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖ ಆಗಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದಾಗಿ ಡೆಲ್ಟಾವೈರಸ್ ಹಬ್ಬುವ ಆತಂಕ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯ ವೇಳೆ ಮಾತನಾಡಿದ ಡಬ್ಲ್ಯು ಎಚ್‌ಒದ ಯುರೋಪ್ ಪ್ರತಿನಿಧಿ ಹನ್ಸ್ ಕ್ಲುಗೆ, ಕೆಲವು ಕೋವಿಡ್ ಲಸಿಕೆಯ ಪ್ರಭಾವವನ್ನು ಕುಗ್ಗಿಸಿ ಡೆಲ್ಟಾವೈರಸ್ ಒಬ್ಬರಿಂದ ಒಬ್ಬರಿಗೆ ಹರುಡುತ್ತಿರುವ ಸೂಚನೆಗಳು ಲಭಿಸಿವೆ. 60 ವರ್ಷ ಮೇಲ್ಪಟ್ಟವರು ಹಾಗೂ ದುರ್ಬಲರ ಮೇಲೆ ಡೆಲ್ಟಾವೈರಸ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಇನ್ನಷ್ಟುದೇಶಗಳಲ್ಲಿ ಲಸಿಕೆ ಉತ್ಪಾದನೆಗೆ ಆದ್ಯತೆ ನೀಡುವ ನಿಟ್ಟಿನಿಂದ ಲಸಿಕೆಯನ್ನು ಪೇಟೆಂಟ್ನಿಂದ ಹೊರಗೆ ಇಡುವಂತೆ ಯುರೋಪ್ ಸಂಸತ್ತು ಯುರೋಪಿನ ರಾಷ್ಟ್ರಗಳನ್ನು ಆಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ