
ಮಾಸ್ಕೋ: ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಲ್ಲಿ ರಭಸದಿಂದ ಹರಿಯುತ್ತಿದ್ದ ವೋಲ್ಕೋವ್ ನದಿಗೆ ಇಳಿದಿದ್ದ ಭಾರತೀಯ ಮೂಲದ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಜಲಗಾಂವ್ ಮೂಲದ ಹರ್ಷಲ್ ಅನಂತ್‌ರಾವ್ ದೇಸಾಲೆ, ಜಿಶಾನ್ ಅಶ್ಪಕ ಪಿಂಜಾರಿ, ಜಿಯಾ ಫಿರೋಜ್ ಪಿಂಜಾರಿ ಮತ್ತು ಮಲ್ಲಿಕ್ ಗುಲಾಮಗೌಸ್ ಮೊಹಮ್ಮದ್ ಯಾಕೂಬ್ ಮೃತ ವಿದ್ಯಾರ್ಥಿಗಳು.
ಮೊದಲ ಬಾರಿ ರಾಜ್ಯದಿಂದ 3 ಸ್ತ್ರೀ ಸಂಸದರು ಸಂಸತ್ ಪ್ರವೇಶ, ಇದು ಇತಿಹಾಸ!
ಇವರೆಲ್ಲರೂ ರಷ್ಯಾದ ವೆಲಿಕಿಯ ನಾವ್ಗೊರೊಡ್ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್ ಓದುತ್ತಿದ್ದರು. ನದಿ ನೀರಿನಲ್ಲಿ ಸಿಲುಕಿದ್ದ ಮತ್ತೋರ್ವ ಭಾರತೀಯ ವಿದ್ಯಾರ್ಥಿನಿ ನಿಶಾ ಭೂಪೇಶ್ ಸೋನಾವಾನೆಯವರನ್ನು ರಕ್ಷಿಸಲಾಗಿದ್ದು, ಜೀಶನ್ ಹಾಗೂ ಜಿಯಾ ಎಂಬ ಸೋದರ ಸಂಬಂಧಿ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಒಬ್ಬ ವಿದ್ಯಾರ್ಥಿನಿ ಮುಳುಗುತ್ತಿದ್ದಳು. ಆಕೆಯನ್ನು ಉಳಿದವರು ರಕ್ಷಿಸಲು ಹೋದಾಗ ಅವರೂ ಮುಳುಗಿ ಹೋದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಂಗನಾ ಕಪಾಳಕ್ಕೆ ಹೊಡೆದ ಮಹಿಳಾ ಪೇದೆಗೆ ರೈತ ಸಂಘಟನೆಗಳ ಬೆಂಬಲ, ಜೂ.9ಕ್ಕೆ ಪ್ರತಿಭಟನೆ
ಮೃತ ಪಟ್ಟ ನಾಲ್ವರು ವಿದ್ಯಾರ್ಥಿಗಳ ಪೈಕಿ ಜೀಶನ್ ಅಶ್ಪಕ್ ಪಿಂಜಾರಿ ಎನ್ನುವ ವಿದ್ಯಾರ್ಥಿ ತನ್ನ ಮನೆಯವರೊಡನೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ನೋಡ ನೋಡುತ್ತಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಜೀಶನ್ ನದಿಯಲ್ಲಿ ಮುಳುಗುವ ಮೊದಲು ತನ್ನ ಪೋಷಕರಿಗೆ ವಿಡಿಯೋ ಕಾಲ್ ಮಾಡಿದ್ದ. ನದಿಯಲ್ಲಿ ನಡೆದು ಹೋಗುತ್ತಿದ್ದ ಆತನಿಗೆ ಕುಟುಂಬದವರು ನದಿಯಿಂದ ಹೊರಕ್ಕೆ ಬರಲು ಮನವಿ ಮಾಡುತ್ತಿದ್ದ ಸಂದರ್ಭದಲ್ಲಿಯೇ ಬಲವಾದ ಅಲೆಯೊಂದು ಅಪ್ಪಳಿಸಿ, ನೀರಿನ ಸೆಳೆತಕ್ಕೆ ಸಿಲುಕಿ ಜಿಶಾನ್ ಸಾವನ್ನಪ್ಪಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ