ಡಿಸೆಂಬರ್‌ನಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೋಗೆ ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಗುರುವಾರ ಯುಟ್ಯೂಬರ್‌ನಲ್ಲಿ ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಲಾಸ್ ಏಂಜಲೀಸ್: ಇಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಎಲ್ಲರಿಗೂ ಮಿಂಚುವ ಆಸೆ. ರಾತ್ರೋರಾತ್ರಿ ತಾನು ಸ್ಟಾರ್ ಅಗಬೇಕು, ಜಗತ್ತನ್ನು ನನ್ನನ್ನು ಗುರುತಿಸಬೇಕು ಎಂಬ ಆಸೆಯಿಂದ ಏನೇನೋ ಕಸರತ್ತು ಮಾಡುತ್ತಿರುತ್ತಾರೆ. ಇದೀಗ ಇಂತಹುವುದೇ ಭಯಾನಕ ಸ್ಟಂಟ್ ಮಾಡಿದ 24 ವರ್ಷದ ಯುಟ್ಯೂಬರ್ (Youtuber) ಜೈಲು ಸೇರಿದ್ದಾನೆ. ಲಾಸ್ ಏಂಜಲೀಸ್ ಯೂಟ್ಯೂಬರ್ ಅಲೆಕ್ಸ್ ಚೋಯ್ (Alex Choi) ಮತ್ತು ಸ್ಟಂಟ್‌ಗೆ ಆತನಿಗೆ ಸಹಾಯ ಮಾಡಿದ್ದ 24 ವರ್ಷದ ಸುಕ್ ಮಿನ್ ಚೋಯ್ ಎಂಬಾತನನ್ನ ಬಂಧಿಸಲಾಗಿದೆ. ಹೆಲಿಕಾಪ್ಟರ್‌ನಿಂದ ಚಲಿಸುತ್ತಿರುವ ಲಂಬೋರ್ಘಿನಿ ಕಾರ್ ನಾಶಪಡಿಸುವ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು. ಹೆಲಿಕಾಪ್ಟರ್‌ನಲ್ಲಿನ ಸ್ಪೋಟಕ ವಸ್ತುಗಳನ್ನು ಸಾಗಿಸಿದ ಆರೋಪದಡಿಯಲ್ಲಿ ಇಬ್ಬರ ಬಂಧನವಾಗಿದೆ ಎಂದು ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ ಯುಎಸ್ ಅಟಾರ್ನಿ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ ಯುಎಸ್ ಅಟಾರ್ನಿ ಪ್ರಕಾರ, ಚೋಯ್ ಯುಟ್ಯೂಬ್‌ನಲ್ಲಿ 9,23,000 ಸಬ್‌ಸ್ಕ್ರೈಬರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ 1.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾನೆ. ಪಟಾಕಿಗಳಿಂದ ಲ್ಯಾಂಬೋರ್ಘಿನಿ ಕಾರ್ ನಾಶಗೊಳಿಸೋದು (Destroying a Lamborghini with Fireworks) ಎಂಬ ಹೆಸರಿನಲ್ಲಿ 11 ನಿಮಿಷದ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಹೆಲಿಕಾಪ್ಟರ್‌ನಿಂದ ಮಹಿಳೆಯರಿಬ್ಬರು ವೇಗವಾಗಿ ಚಲಿಸುತ್ತಿರುವ ಕಾರ್ ಪಟಾಕಿಗಳಿಂದ ದಾಳಿ ಮಾಡುತ್ತಾರೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಲಾಗಿದೆ.
undefined
ವಿಡಿಯೋ ಗೇಮ್ ಮಾದರಿಯಲ್ಲಿ ಚಿತ್ರೀಕರಣ
ವಿಡಿಯೋ ಗೇಮ್ ಮಾದರಿಯಲ್ಲಿ ಈ ದೃಶ್ಯಗಳನ್ನು ಚಿತ್ರೀಕರಿಸಿ ಅದನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿತ್ತು. ವಿಡಿಯೋದ ಮೂರನೇ ಕ್ಲಿಪ್‌ನಲ್ಲಿ ಚೋಯ್ ಹೇಗೆ ಚಿತ್ರೀಕರಣ ಮಾಡಿದ್ದಾನೆ ಎಂಬುದನ್ನು ಗಮನಿಸಬಹುದಾಗಿದೆ. ಶೂಟಿಂಗ್ ಮುನ್ನ ಚೋಯ್ ಹಲವು ಮಾಹಿತಿ ಪಡೆದುಕೊಂಡಿದ್ದಾನೆ ಎಂದು ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ ಯುಎಸ್ ಅಟಾರ್ನಿ ಹೇಳಿಕೆ ನೀಡಿದೆ.
ದುಬಾರಿ ಕಾರು ಖರೀದಿಸಿದ ಯುಟ್ಯೂಬರ್ ಸ್ಯಾಮ್ ಸಮೀರ್; ದುಡ್ಡು ಮಾಡಿದ್ರೆ ಹೀಗ್ ಮಾಡ್ಬೇಕು ಎಂದ ನೆಟ್ಟಿಗರು!
ಈ ವಿಡಿಯೋವನ್ನು ಜೂನ್ 2023ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೋ ಕೌಂಟಿಯಲ್ಲಿರುವ ಎಲ್ ಮಿರಾಜ್ ಡ್ರೈ ಲೇಕ್‌ಬೆಡ್‌ನ ಫೆಡರಲ್ ಪ್ರದೇಶದ ವ್ಯಾಪ್ತಿಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಅಟಾರ್ನಿ ಅನುಮಾನ ವ್ಯಕ್ತಪಡಿಸಿದೆ. ಬ್ಯೂರೋ ಆಫ್ ಲ್ಯಾಂಡ್ ಮ್ಯಾನೇಜ್‌ಮೆಂಟ್ ಸ್ಪೋರ್ಟ್ಸ್ ಚಿತ್ರೀಕರಣದ ಸಮಯದಲ್ಲಿನ ಕಾರ್ ಟೈರ್‌ಗಳ ಗುರುತುಗಳ ಫೋಟೋಗಳನ್ನು ಒದಗಿಸಿದೆ.
ಕಾನೂನುಗಳ ನಿಯಮ ಉಲ್ಲಂಘಿಸಿ ಚಿತ್ರೀಕರಣ
ಹೆಲಿಕಾಪ್ಟರ್‌ನಲ್ಲಿ ಸ್ಪೋಟಕ ವಸ್ತುಗಳನ್ನು ಇರಿಸಿಕೊಂಡು ಚಿತ್ರೀಕರಣ ನಡೆಸಲು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಒಪ್ಪಿಗೆಯೂ ಪಡೆದುಕೊಂಡಿರಲಿಲ್ಲ ಎಂಬ ಆರೋಪ ಚೋಯ್ ವಿರುದ್ಧ ಕೇಳಿ ಬಂದಿದೆ. ಚಿತ್ರೀಕರಣಕ್ಕೆ ಸ್ಥಳೀಯಮಟ್ಟದ ಅಧಿಕಾರಿಗಳಿಂದಲೂ ಚೋಯ್ ಯಾವುದೇ ಅನುಮತಿ ಪಡೆದಿಲ್ಲ. ಈ ಮೂಲಕ ಚೋಯ್ ಹಲವು ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾನೆ ಎಂದು ಅಟಾರ್ನಿ ತನ್ನ ಹೇಳಿಕೆಯನ್ನು ತಿಳಿಸಿದೆ.
ಯೂಟ್ಯೂಬ್ ಹಣದಿಂದ ಮೈಸೂರಿನಲ್ಲಿ ಎರಡು ಅಂತಸ್ತಿನ ಮನೆ ಖರೀದಿಸಿದ ನಿಖಿಲ್- ನಿಶಾ ರವೀಂದ್ರ; ಆದಾಯ ಕೇಳಿ ಶಾಕ್?
41 ಲಕ್ಷದ ಬಾಂಡ್ ಮೇಲೆ ಜಾಮೀನು
ಇನ್ನೂ ಈ ಚಿತ್ರೀಕರಣದ ವೇಳೆ ಯಾವುದೇ ಅಪಾಯವಾಗಿಲ್ಲ. ವಿಡಿಯೋ ಚಿತ್ರೀಕರಣ ವೇಳೆ ಭಾಗಿಯಾದ ಬೇರೆಯವರು ಹೆಸರನ್ನು ಸದ್ಯಕ್ಕೆ ಉಲ್ಲೇಖಿಸಿಲ್ಲ. ಡಿಸೆಂಬರ್‌ನಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೋಗೆ ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಗುರುವಾರ ಯುಟ್ಯೂಬರ್‌ನಲ್ಲಿ ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ 50,000 ಡಾಲರ್ ಬಾಂಡ್ (41.75 ಲಕ್ಷ ರೂಪಾಯಿ) ಮೇಲೆ ಜಾಮೀನು ನೀಡಿ ಅರ್ಜಿಯ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿಕೆ ಮಾಡಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಆಗಬಹುದು ಎಂದು ವಕೀಲರು ಹೇಳುತ್ತಾರೆ.