ಕಿಂಗ್ ನದಿಯಲ್ಲಿ ಮುಳುಗುತ್ತಿದ್ದ ಮಕ್ಕಳ ರಕ್ಷಿಸಲು ಹೋಗಿ ಭಾರತೀಯ ಸಾವು

By Suvarna NewsFirst Published Aug 7, 2020, 5:08 PM IST
Highlights

ಆಗಸ್ಟ್‌ 5ರಂದು ರೀಡ್ಲಿ ಬೀಚ್‌ನಲ್ಲಿ ಆಡುತ್ತಿದ್ದ ಮೂವರು ಮಕ್ಕಳು ಕಿಂಗ್ಸ್‌ ನದಿಯಲ್ಲಿ ಮುಳುಗಿದ್ದಾರೆ. ಈ ಸಂದರ್ಭ ಅಲ್ಲಿದ್ದ ವ್ಯಕ್ತಿ ಮತ್ತೇನೂ ಯೋಚಿಸದೆ ನದಿಗೆ ಧುಮುಕಿದ್ದಾರೆ. ಮಕ್ಕಳನ್ನು ರಕ್ಷಿಸಲು ಹೋಗಿ ಆ ವ್ಯಕ್ತಿ ನೀರು ಪಾಲಾಗಿದ್ದಾರೆ.

ಆಗಸ್ಟ್‌ 5ರಂದು ರೀಡ್ಲಿ ಬೀಚ್‌ನಲ್ಲಿ ಆಡುತ್ತಿದ್ದ ಮೂವರು ಮಕ್ಕಳು ಕಿಂಗ್ಸ್‌ ನದಿಯಲ್ಲಿ ಮುಳುಗಿದ್ದಾರೆ. ಈ ಸಂದರ್ಭ ಅಲ್ಲಿದ್ದ ವ್ಯಕ್ತಿ ಮತ್ತೇನೂ ಯೋಚಿಸದೆ ನದಿಗೆ ಧುಮುಕಿದ್ದಾರೆ. ಮಕ್ಕಳನ್ನು ರಕ್ಷಿಸಲು ಹೋಗಿ ಆ ವ್ಯಕ್ತಿ ನೀರು ಪಾಲಾಗಿದ್ದಾರೆ.

ಭಾರತದ ಮನ್‌ಜೀತ್ ಸಿಂಗ್ ಮೃತ ದುರ್ದೈವಿ. ಮನ್‌ಜೀತ್‌ ಸಿಂಗ್ ಫ್ರೆಸ್ನೋದಲ್ಲಿ ನೆಲೆಸಿದ್ದರು. ಎರಡು ವರ್ಷಗಳ ಹಿಂದೆ ಅಮೆರಿಕ್ಕೆ ಬಂದಿದ್ದ ಅವರು ಇತ್ತೀಚೆಗಷ್ಟೇ ಟ್ರಕ್ ಉದ್ಯಮಕ್ಕಾಗೊ ಫ್ರೆಸ್ನೋಗೆ ಶಿಫ್ಟ್ ಆಗಿದ್ದರು.

ಕೊರೋನಾಗೆ ಪರಿಣಾಮಕಾರಿಯಾದ ಲಸಿಕೆ ಕಂಡುಹಿಡಿದಿದ್ದೇವೆ; ಸಿಹಿ ಸುದ್ದಿ ನೀಡಿದ ಇಸ್ರೇಲ್!

ಆಗಸ್ಟ್‌ 5ರಂದು ಟ್ರಕ್ ಡ್ರೈವಿಂಗ್ ಶಾಲೆಯನ್ನೂ ಆರಂಭಿಸಿದ್ದರು. ತಮ್ಮ ತರಬೇತಿ ನಂತರ ತಮ್ಮ ಸಹೋದರನೊಂದಿಗೆ ಕಿಂಗ್ಸ್ ನದೀ ತೀರಕ್ಕೆ ಬಂದಿದ್ದರು. ನದಿಯ ಸಮೀಪದಲ್ಲಿಯೇ ಆಡುತ್ತಿದ್ದ 8 ವರ್ಷದ ಬಾಲಕಿ ಮತ್ತು 10 ವರ್ಷದ ಬಾಲಕ ನದಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಸಿಂಗ್ ನದಿಗೆ ಹಾರಿದ್ದರು.

29 year old Manjeet Singh didn’t think twice Wednesday night- when he jumped into the Kings River after three kids were...

Posted by Sontaya Rose ABC30 on Thursday, August 6, 2020

ಮಕ್ಕಳನ್ನು ರಕ್ಷಿಸಲು ಹೋದ ಕಿಂಗ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆತನಿಗೆ ಮಕ್ಕಳು ಯಾರೆಂಬುದು ತಿಳಿದಿರಲಿಲ್ಲ, ಆದರೂ ನೆರವು ಬೇಕೆಂದವರಿಗೆ ಆತ ನೆರವಾದ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

click me!