ಅಮೆರಿಕಾದಲ್ಲಿ ಮನೆ ಗೃಹಪ್ರವೇಶಕ್ಕೆ ಹವನ ಮಾಡಿದ ಭಾರತೀಯ ಕುಟುಂಬ: ಬೆಂಕಿ ಬಿತ್ತೆಂದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ

Published : Aug 05, 2025, 10:49 AM ISTUpdated : Aug 05, 2025, 10:56 AM IST
Fire department called on indian family's housewarming ceremony

ಸಾರಾಂಶ

ಅಮೆರಿಕದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದಾಗ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶಕ್ಕಾಗಿ ಹೋಮ ಮಾಡುವಾಗ ಈ ಘಟನೆ ನಡೆದಿದ್ದು ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಸ್ಕೃತಿಗಳು ಆಚಾರ ವಿಚಾರಗಳು ವಿಭಿನ್ನವಾಗಿರುತ್ತವೆ. ಕೆಲವು ದೇಶದ ಆಚರಣೆಗಳನ್ನು ಮತ್ತೊಂದು ದೇಶದ ಜನರು ವಿಚಿತ್ರವಾಗಿ ಕಾಣಬಹುದು. ಹಾಗೆಯೇ ಅಮೆರಿಕಾದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದ ವೇಳೆ ಬೆಂಕಿ ಬಿದ್ದಿರಬಹುದು ಎಂದು ಭಯಗೊಂಡ ನೆರೆಹೊರೆಯ ಮನೆಯವರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ಕರೆಸಿದಂತಹ ಅಚ್ಚರಿಯ ಘಟನೆ ನಡೆದಿದೆ. @BengaliFalcon71 ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅಮೆರಿಕಾದ ಟೆಕ್ಸಾಸ್‌ನಲ್ಲಿ ಭಾರತೀಯರ ಗುಂಪೊಂದು ಹೋಮ ಹವನ ಮಾಡುತ್ತಿದ್ದಾಗ ನೆರೆಹೊರೆಯ ಜನರು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿದರು ಎಂದು ಅವರು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ 22 ಸೆಕೆಂಡ್‌ನ ವೀಡಿಯೋದಲ್ಲಿ ಒಂದೆಡೆ ಮನೆಯೊಳಗೆ ಹೋಮ ಹವನ ನಡೆಯುತ್ತಿದ್ದರೆ ಹೊರಗೆ ಅಗ್ನಿಶಾಮಕ ಸಿಬ್ಬಂದಿ ಬಂದು ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಹೊಸ ಮನೆಯ ಗೃಹಪ್ರವೇಶಕ್ಕಾಗಿ ಹೋಮ

ಟೆಕ್ಸಾಸ್‌ನಲ್ಲಿ ನೆಲೆಸಿದ್ದ ಭಾರತೀಯ ಕುಟುಂಬ ಇತ್ತೀಚೆಗೆ ತಮ್ಮ ಹೊಸ ಮನೆಯ ಗೃಹಪ್ರವೇಶಕ್ಕಾಗಿ ಈ ಹೋಮ ಹವನ ಆಯೋಜಿಸಿತ್ತು ಎಂದು ವರದಿಯಾಗಿದೆ. ಆದರೆ ಈ ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಬಂದಿರುವ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಲವರು ಭಾರತೀಯ ಕುಟುಂಬದ ಕ್ರಮವನ್ನು ಸಮರ್ಥಿಸಿಕೊಂಡಿದ್ದರೆ ಮತ್ತೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಂಸ್ಕೃತಿಕ ತಪ್ಪು ತಿಳುವಳಿಕೆಯಿಂದಾಗಿ ನಮ್ಮ ಮನೆಯ ಗೃಹಪ್ರವೇಶದ ವೇಳೆ ಅಗ್ನಿಶಾಮಕ ಸಿಬ್ಬಂದಿ ಬಂದು ಅಡ್ಡಿಪಡಿಸಿದರು ಎಂದು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ಅಮೆರಿಕಾದ ಹಾಗೂ ಭಾರತದ ಮನೆಗಳಿಗೆ ತುಂಬಾ ವ್ಯತ್ಯಾಸವಿದೆ. ಭಾರತದಲ್ಲಿ ಮನೆಗಳನ್ನು ಕಲ್ಲು ಇಟ್ಟಿಗೆಗಳಿಂದ ಕಟ್ಟಿದ್ದರೆ ಅಮೆರಿಕಾದಲ್ಲಿ ಕೆಲವು ಕಡೆ ಒಣಗಿದ ಮರಗಳಿಂದ ನಿರ್ಮಿಸಲಾಗುತ್ತದೆ. ಹೀಗಾಗಿ ಕೆಲವರು ಮನೆಯೊಳಗೆ ಪೂಜೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿದೇಶಿಗರಿಂದ ಭಾರತೀಯ ಕುಟುಂಬಕ್ಕೆ ನಿಂದನೆ

ಒಣ ಮರದ ಗೋಡೆಗಳಿಂದ ಮನೆಗಳನ್ನು ನಿರ್ಮಿಸಿರುವ ವಿದೇಶಗಳಲ್ಲಿ ಇದನ್ನು ಮಾಡಲಾಗಿದೆ. ನಾನು ಈ ನಡವಳಿಕೆಯನ್ನು ಖಂಡಿಸುತ್ತೇನೆ ಮತ್ತು ಇದನ್ನು ಸಾಂಸ್ಕೃತಿಕ ಅಭ್ಯಾಸವೆಂದು ಸ್ವೀಕರಿಸುವುದಿಲ್ಲ ಎಂದು ಒಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ. ನೀವು ವಾಸಿಸುವ ದೇಶದ ನಿಯಮಗಳನ್ನು ನೀವು ಪಾಲಿಸಬೇಕು. ಅವರು ನಮ್ಮ ಧರ್ಮವನ್ನು ಅನುಸರಿಸುವುದಿಲ್ಲ, ಆದ್ದರಿಂದ ಅವರಿಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರು ಹವನ ಮಾಡಲು ಅಗ್ನಿಶಾಮಕ ಇಲಾಖೆಯಿಂದ ಪರವಾನಗಿ ಪಡೆಯಬೇಕಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರು ಇದ್ದಕ್ಕಿದ್ದಂತೆ ತುಂಬಾ ಧಾರ್ಮಿಕರಾಗಿದ್ದಾರೆ ಮತ್ತು ತಮ್ಮ ಮನೆಗಳಲ್ಲಿ ಮಾತ್ರವಲ್ಲದೆ ಬೀದಿಗಳಲ್ಲಿಯೂ ಗದ್ದಲದೊಂದಿಗೆ ತಮ್ಮ ಸಂಸ್ಕೃತಿಯನ್ನು ಅನುಸರಿಸಲು ಬಯಸುತ್ತಾರೆ. ನೀವು ವಿದೇಶದಲ್ಲಿ ಅವರ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ಭಾರತವನ್ನು ಏಕೆ ಬಿಡಬೇಕು ಎಂದು ಮತ್ತೊಬ್ಬರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಅವರು ಅಮೆರಿಕಾದಲ್ಲೇ ನೆಲೆಸಿ ಪೌರತ್ವ ಪಡೆದಿದ್ದರೆ ಅವರು ತಮ್ಮ ಹೊಸ ದೇಶದ ಕಾನೂನುಗಳಿಗೆ ಏಕೆ ಹೊಂದಿಕೊಳ್ಳುವುದಿಲ್ಲ? ವಿಭಿನ್ನ ದೇಶಗಳು ವಿಭಿನ್ನ ನಿಯಮಗಳನ್ನು ಹೊಂದಿವೆ. ನಾವು ಮನೆ ಎಂದು ಕರೆಯುವ ಭೂಮಿಯನ್ನು ಗೌರವಿಸೋಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಭಾರತೀಯ ಕುಟುಂಬವವನ್ನು ಸಮರ್ಥಿಸಿಕೊಂಡ ಕೆಲ ನೆಟ್ಟಿಗರು:

ಆದರೆ ಹೀಗೆ ಪೂಜೆ ಮಾಡಿದ ಕುಟುಂಬವನ್ನು ಅನೇಕರು ನಿಂದಿಸಿದ್ದಕ್ಕೆ ಒಬ್ಬರು ವಿರೋಧ ವ್ಯಕ್ತಪಡಿಸಿದ್ದು, ಈ ಜನರು ಯಾರಿಗೂ ನೋವುಂಟು ಮಾಡಿಲ್ಲ ಅಥವಾ ಜನರಿಗೆ ಅಥವಾ ಆಸ್ತಿಗೆ ಹಾನಿ ಮಾಡುವ ಏನನ್ನೂ ಮಾಡಿಲ್ಲ. ಅವರು ಸರಳ ಪೂಜೆ ಮಾಡುತ್ತಿದ್ದರು. ತಮ್ಮ ಗ್ಯಾರೇಜ್‌ನಲ್ಲಿ ಗ್ರಿಲ್ ಬಳಸಿ ಅದರಿಂದ ಹೊಗೆ ಎಬ್ಬಿಸುವ ಜನರ ಬಗ್ಗೆ ಏನು ಹೇಳುತ್ತೀರಿ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ನಾನು ಮೊದಲ ತಲೆಮಾರಿನ ಭಾರತೀಯ ಅಮೇರಿಕನ್ ಆಗಿ ಹುಟ್ಟಿ ಬೆಳೆದವನು, ಮತ್ತು ಇದನ್ನು ನೋಡಲು ನನಗೆ ತುಂಬಾ ಹೆಮ್ಮೆಯಾಗುತ್ತದೆ. ನಾನು ವಾಸಿಸುತ್ತಿದ್ದ ಪ್ರತಿಯೊಂದು ಮನೆಗೆ ಮತ್ತು ನಾನು ಖರೀದಿಸಿದ ಪ್ರತಿಯೊಂದು ಹೊಸ ಕಾರಿಗೆ ಪೂಜೆ ಮಾಡಿದ್ದೇನೆ. ಪ್ರತಿ ದೊಡ್ಡ ಪರೀಕ್ಷೆ ಅಥವಾ ದೊಡ್ಡ ಉದ್ಯೋಗ ಸಂದರ್ಶನಕ್ಕೂ ಪ್ರಾರ್ಥನೆ ಮಾಡಿದ್ದೇನೆ ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಧಾನಿಗೆ ಜೋರ್ಡಾನ್‌ನಲ್ಲಿ ಭವ್ಯ ಸ್ವಾಗತ: ಐಎಂಇಸಿ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ