ಬೇಡ ಅಂದ್ರೂ ರಷ್ಯಾದಿಂದ ಇಂಧನ ಖರೀದಿಸ್ತೀರಾ? ಭಾರತಕ್ಕೆ ಟ್ರಂಪ್ ತೆರಿಗೆ ಹೆಚ್ಚಳ ಬೆದರಿಕೆ

Published : Aug 04, 2025, 09:19 PM IST
trump-putin -modi

ಸಾರಾಂಶ

ರಷ್ಯಾದಿಂದ ಇಂಧನ ಖರೀದಿಸಬೇಡಿ ಎಂದರೂ ಮತ್ತೆ ಮತ್ತೆ ಖರೀದಿಸುತ್ತೀರಾ? ನಿಮ್ಮ ಶೇಕಡಾ 25ರಷ್ಟು ತೆರಿಗೆಯನ್ನು ಡಬಲ್ ಮಾಡುತ್ತೇನೆ ಎಂದು ಡೋನಾಲ್ಡ್ ಟ್ರಂಪ್ ಭಾರತಕ್ಕೆ ಎಚ್ಚರಿಸಿದ್ದಾರೆ.

ವಾಶಿಂಗ್ಟನ್ (ಆ.04) ಭಾರತದ ಮೇಲೆ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶೇಕಡಾ 25ರಷ್ಟು ತೆರಿಗೆ ವಿಧಿಸಿದ್ದಾರೆ. ಇದು ಭಾರತ ಹಾಗೂ ಅಮೆರಿಕ ನಡುವೆ ದ್ವಿಪಕ್ಷೀಯ ಸಂಬಂಧ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರಷ್ಯಾದಿಂದ ಇಂಧನ ಖರೀದಿಸದಂತೆ ಸೂಚಿಸಿ ತೆರೆಗಿ ವಿಧಿಸಿದ್ದರು. ಆದರೆ ಟ್ರಂಪ್ ಮಾತಿಗೆ ಕ್ಯಾರೇ ಎನ್ನದ ಭಾರತ ರಷ್ಯಾದಿಂದ ಇಂಧನ ಖರೀದಿ ಮುಂದುವರಿಸಿದೆ. ಇದು ಟ್ರಂಪ್‌ಗೆ ತೀವ್ರ ಮುಖಭಂಗ ತಂದಿದೆ. ಇದರಿಂದ ಕೆರಳಿರುವ ಡೋನಾಲ್ಡ್ ಟ್ರಂಪ್ ಇದೀಗ ಮತ್ತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ರಷ್ಯಾದಿಂದ ಇಂಧನ ಖರೀದಿಯನ್ನು ಭಾರತ ನಿಲ್ಲಿಸಿಲ್ಲ. ಹೀಗಾಗಿ ಭಾರತದ ಮೇಲೆ ಹೇರಿದ ಶೇಕಡಾ 25ರಷ್ಟು ತೆರಿಗೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಟ್ರಂಪ್ ಬೆದರಿಸಿದ್ದಾರೆ.

ಇಂಧನ ಖರೀದಿಗೆ ಭಾರತ ಆಕ್ರೋಶ

ರಷ್ಯಾದಿಂದ ಭಾರತ ಅತೀ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿ ಮಾತ್ರ ಮಾಡುತ್ತಿಲ್ಲ. ಇಂಧನ ಖರೀದಿಸಿ ಇದನ್ನು ಮುಕ್ತ ಮಾರುಕಟಟೆಯಲ್ಲಿ ಭಾರಿ ಲಾಭಕ್ಕೆ ಮಾರಾಟ ಮಾಡುತ್ತಿದೆ. ಭಾರತಕ್ಕೆ ಉಕ್ರೇನ್‌ನಲ್ಲಿ ಏನಾಗುತ್ತಿದೆ ಅನ್ನೋದು ಬೇಡವಾಗಿದೆ. ಭಾರತದ ಇಂಧನ ಮಾರಾಟ ಮಾಡಿದ ಲಾಭದಿಂದ ರಷ್ಯಾ ನೇರವಾಗಿ ಉಕ್ರೇನ್ ಮೇಲೆ ದಾಳಿ ಮಾಡಿ ಜನರ ಕೊಲ್ಲುತ್ತಿದೆ. ಹೀಗಾಗಿ ನಾನು ಭಾರತದ ಮೇಲೆ ಹೇರಿರುವ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿದ್ದೇನೆ ಎಂದು ಟ್ರಂಪ್ ತನ್ನ ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ರಷ್ಯಾಗೆ ಆರ್ಥಿಕ ಹೊಡೆತ ನೀಡಲು ಅಮೆರಿಕ ಪ್ರಯತ್ನಕ್ಕೆ ಹಿನ್ನಡೆ

ರಷ್ಯಾವನ್ನು ಏಕಾಂಗಿ ಮಾಡಲು ಅಮೆರಿಕ ಪ್ರಯತ್ನಿಸುತ್ತಿದೆ. ಅಮೆರಿಕ ರೀತಿ ದೈತ್ಯ ಶಕ್ತಿಯಾಗಿರುವ ರಷ್ಯಾ ವಿರುದ್ಧ ಟ್ರಂಪ್ ಸಮರ ಸಾರುತ್ತಲೇ ಇದ್ದಾರೆ. ಉಕ್ರೇನ್ ಯುದ್ಧದ ಬಳಿಕ ರಷ್ಯಾದಿಂದ ಇಂಧನ ಖರೀದಿಸಬೇಡಿ ಎಂದು ಯೂರೋಪ್ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳಿಗೆ ಅಮೆರಿಕ ಸೂಚನೆ ನೀಡಿತ್ತು. ಭಾರತಕ್ಕೂ ಅಮೆರಿಕ ನೇರ ಸೂಚನೆ ನೀಡಿತ್ತು. ಆದರೆ ಭಾರತ ಈ ಸೂಚನೆ ಬೆದರಿಕೆಗೆ ಗೊಡ್ಡು ಹಾಕಿಲ್ಲ. ಭಾರತದ ವಿದೇಶಾಂಗ ನೀತಿ, ಭಾರತೀಯ ಜನರ ಪರವಾಗಿದೆ. ಅದು ಭಾರತದ ಅಭಿವೃದ್ಧಿಗೆ ಪೂರಕವಾಗಿದೆ. ರಷ್ಯಾ ಕಡಿಮೆ ಬೆಲೆಯಲ್ಲಿ ಇಂಧನ ನೀಡುತ್ತಿದೆ. ನಾವು ಖರೀದಿಸುತ್ತೇವೆ ಎಂದು ರಷ್ಯಾದಿಂದ ಇಂಧನ ಖರೀದಿ ಮುಂದುವರಿಸಿತ್ತು. ಇದು ಅಮೆರಿಕ ಕಣ್ಣು ಕೆಂಪಾಗಿಸಿತ್ತು. ಈ ಸೂಚನೆ ನೀಡಿ ಇತ್ತೀಚೆಗೆ ಶೇಕಡಾ 25ರಷ್ಟು ತೆರಿಗೆ ವಿಧಿಸಿತ್ತು.

ಸುಳ್ಳು ಹೇಳಿ ಮತ್ತೆ ಮುಖಭಂಗ ಅನುಭವಿಸಿದ ಟ್ರಂಪ್

ಶೇಕಡಾ 25ರಷ್ಟು ತೆರಿಗೆ ವಿಧಿಸಿದ ಬೆನ್ನಲ್ಲೇ ಭಾರತ, ನೇರವಾಗಿ ಟ್ರಂಪ್ ಕಾಲಿಗೆ ಬಿದ್ದು ಕ್ಷಮೆ ಯಾಚಿಸಲಿದೆ. ಬಳಿಕ ರಷ್ಯಾದಿಂದ ಇನ್ನು ಇಂಧನ ಖರೀದಿಸುವುದಿಲ್ಲ ಎಂದು ಹೇಳಲಿದೆ ಎಂಬ ಟ್ರಂಪ್ ಲೆಕ್ಕಾಚಾರ ಉಲ್ಟಾ ಆಗಿತ್ತು. ಟ್ರಂಪ್ ತೆರಿಗೆ ಬೆನ್ನಲ್ಲೇ ಭಾರತ ರಷ್ಯಾದಿಂದ ಇಂಧನ ಖರೀದಿ ಮುಂದುವರಿಯಲಿದೆ ಎಂದಿತ್ತು. ಇತ್ತ ಟ್ರಂಪ್ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದರು. ರಷ್ಯಾದಿಂದ ಭಾರತ ಇಂದನ ಖರೀದಿ ನಿಲ್ಲಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಭಾರತ, ಯಾವುದೇ ಖರೀದಿ ಒಪ್ಪಂದ ನಿಂತಿಲ್ಲ ಎಂದಿತ್ತು. ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸಿದ ಟ್ರಂಪ್, ಇದೀಗ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ
ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌