ಶೌಚಾಲಯದಲ್ಲಿ 45 ನಿಮಿಷ ಕಳೆದ ಪತಿ, ಕೋಪಗೊಂಡ ಪತ್ನಿ 'ಬುದ್ಧಿ' ಕಲಿಸಿದ್ದು ಹೀಗೆ!

Published : Aug 03, 2021, 05:38 PM IST
ಶೌಚಾಲಯದಲ್ಲಿ 45 ನಿಮಿಷ ಕಳೆದ ಪತಿ, ಕೋಪಗೊಂಡ ಪತ್ನಿ 'ಬುದ್ಧಿ' ಕಲಿಸಿದ್ದು ಹೀಗೆ!

ಸಾರಾಂಶ

* ಗಂಡನಿಗೆ ವಿಚಿತ್ರ ಅಭ್ಯಾಸ * ಗಂಡನ ವಿಚಿತ್ರ ವರ್ತನೆಗೆ ಬೇಸತ್ತ ಪತ್ನಿ * ಶೌಚಾಲಯದಲ್ಲಿದ್ದ ಗಮಡನಿಗೆ ಹೆಂಡತಿ ಬುದ್ಧಿ ಕಲಿಸಿದ್ದು ಹೀಗೆ

ನವದೆಹಲಿ(ಆ.03): ಮಹಿಳೆ ತನ್ನ ಪೋಸ್ಟ್‌ನಲ್ಲಿ ತಾವಿಬ್ಬರು ರೆಸ್ಟೋರೆಂಟ್‌ ಹೋದಾಗ ನಡೆದ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲಿ ಆಕೆಯ ಗಂಡ ಸ್ನಾನಗೃಹಕ್ಕೆ ಹೋಗಿ ಸುಮಾರು 45 ನಿಮಿಷಗಳಾದರೂ ಹೊರ ಬಂದಿರಲಿಲ್ಲ. ಇದರಿಂದ ಕೋಪಗೊಂಡ ಹೆಂಡತಿ ರೆಸ್ಟೋರೆಂಟ್ ನಿಂದ ಒಬ್ಬಳೇ ಮನೆಗೆ ಬಂದಿದ್ದಳಂತೆ. ಮಹಿಳೆಯ ಪ್ರಕಾರ, ನನ್ನ ಪತಿ ಜಸ್ಟಿನ್ ಹೊಸ ಮನೆಗೆ ಹೋದ ನಂತರ ವಾಶ್‌ರೂಂ ಒಳಗೆ ಸಾಕಷ್ಟು ಸಮಯ ಕಳೆಯಲು ಆರಂಭಿಸಿದ್ದಾರೆ. ಅವನು ದಿನಕ್ಕೆ 4 ರಿಂದ 5 ಬಾರಿ ಸ್ನಾನಗೃಹಕ್ಕೆ ಹೋಗುತ್ತಾನೆ ಮತ್ತು ಈ ಸಮಯದಲ್ಲಿ ಅವನು ಸುಮಾರು 45 ನಿಮಿಷಗಳನ್ನು ಕಳೆಯುತ್ತಾನೆ ಎಂದಿದ್ದಾರೆ.

ಗಂಡನ ಅಭ್ಯಾಸಕ್ಕೆ ಬೇಸತ್ತ ಪತ್ನಿ

ದಿ ಸನ್ ಈ ಬಗ್ಗೆ ವರದಿ ಪ್ರಕಟಿಸಲಾಗಿದೆ. ವರದಿಯ ಪ್ರಕಾರ, ಮಹಿಳೆ ತನ್ನ ಗಂಡನ ಅಭ್ಯಾಸದಿಂದ ಅಸಮಾಧಾನಗೊಂಡಿದ್ದಾಳೆ. ಮಹಿಳೆಯ ಬರೆದ ಪೋಸ್ಟ್ ಪ್ರಕಾರ, ಆಕೆ ರೆಸ್ಟೋರೆಂಟ್‌ನಲ್ಲಿ ತನ್ನ ಗಂಡನಿಗೆ ಇದು ರೆಸ್ಟೋರೆಂಟ್, ಮನೆಯಲ್ಲ ಎಂದು ನೆನಪಿಸಿದಳು, ಹೀಗಿರುವಾಗ ಪತಿ ತಾಬು ಬೇಗ ಬರುವುದಾಗಿ ಹೇಳಿದ್ದ. ಹೀಗಿದ್ದರೂ ಪತಿ 45 ನಿಮಿಷ ಶೌಚಾಲಯದಲ್ಲಿ ಕಳೆದಿದ್ದಾನೆ. ಗಂಡ ಮರಳದಿರುವುದನ್ನು ಕಂಡ ಪತ್ನಿ ಪುರುಷರ ಶೌಚಾಲಯಕ್ಕೆ ಹೋಗಿ, ಅವನು ಚೆನ್ನಾಗಿದ್ದಾನೋ ಇಲ್ಲವೋ ಎಂದು ಪರೀಕ್ಷಿಸಲು ಮುಂದಾಗಿದ್ದಾಳೆ. ಈ ವೇಳೆ ಆತ ಕ್ಷೇಮವಾಗಿರುವುದನ್ನು ಕಂಡ ಮಹಿಳೆ ಅವನನ್ನು ಹೊರಗೆ ಬರುವಂತೆ ಹೇಳಿದ್ದಾಳೆ. ಆದರೆ ಗಂಡ ಮಾತ್ರ ಬಂದಿಲ್ಲ, ಇದರಿಂದ ಕೋಪಗೊಂಡ ಪತ್ನಿ ಅಲ್ಲಿಂದ ತೆರಳಿದ್ದಾಳೆ. 

ಬಳಿಕ ಪತ್ನಿ ಗಂಡನಫೋನ್‌ಗೆ ಕರೆ ಮಾಡಲು ಮತ್ತು ಸಂದೇಶ ಕಳುಹಿಸಲು ಪ್ರಾರಂಭಿಸಿದಳು. ಮಹಿಳೆಯ ಫೋನ್ ಗೆ ಪತಿ ಉತ್ತರಿಸಲಿಲ್ಲ. ಕೋಪಗೊಂಡ ಮಹಿಳೆ ತನ್ನ ತಿಂಡಿ ತಿಂದು ಬಿಲ್‌ ಪಾವತಿಸಿ ಮನೆಗೆ ತೆರಳಿದ್ದಾಳೆ. ಮನೆಗೆ ಬಂದ ಸ್ವಲ್ಪ ಸಮಯದ ನಂತರ, ಗಂಡ ಮರಳಿದ್ದಾನೆ. ಫೋನ್ ರಿಸೀವ್‌ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದಾಗ ಪತಿ ತನ್ನ ಫೋನಿನ ಬ್ಯಾಟರಿ ಖಾಲಿಯಾಗಿದೆ ಎಂದು ಹೇಳಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?