ನ್ಯೂಜಿಲೆಂಡ್‌ನಲ್ಲಿ ಜ್ವಾಲಾಮುಖಿಗೆ ಭಾರತದ ದಂಪತಿ ಬಲಿ

By Kannadaprabha News  |  First Published Jan 31, 2020, 12:54 PM IST

ಜ್ವಾಲಾಮುಖಿ ಸ್ಫೋಟ ಪ್ರಕರಣದಲ್ಲಿ ಗಾಯಾಗೊಂಡಿದ್ದ ಭಾರತೀಯ ಮೂಲದ ಉದ್ಯಮಿ ಹಾಗೂ ಅವರ ಪತ್ನಿ ಸಾವನ್ನಪ್ಪಿದ್ದಾರೆ.


ವೆಲ್ಲಿಂಗ್ಟನ್‌ [ಜ.31]: ನ್ಯೂಜಿಲೆಂಡ್‌ನ ಜ್ವಾಲಾಮುಖಿ ಸ್ಫೋಟ ಪ್ರಕರಣದಲ್ಲಿ ಗಾಯಾಗೊಂಡಿದ್ದ ಭಾರತೀಯ ಮೂಲದ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ. 

ಇದೇ ಪ್ರಕರಣದಲ್ಲಿ ಗಾಯಗೊಂಡಿದ್ದ ಇವರ ಪತ್ನಿ ಕೂಡ ಡಿ.22 ರಂದು ಕೊನೆಯುಸಿರೆಳೆದಿದ್ದರು. ಪ್ರತಾಪ್‌ ಸಿಂಗ್‌ ಹಾಗೂ ಮಯೂರಿ ದಂಪತಿಗಳು ನ್ಯೂಜಿಲೆಂಡ್‌ನ ಪ್ರಸಿದ್ಧ ವೈಟ್‌ ಐಲ್ಯಾಂಡ್‌ಗೆ 2019ರ ಡಿ.9 ರಂದು ಭೇಟಿ ನೀಡಿದ್ದರು. ಈ ವೇಳೆ ಜ್ವಾಲಾಮುಖಿ ಸ್ಫೋಟದಿಂದಾಗಿ ದಂಪತಿಗಳಿಗೆ ತೀವ್ರ ಸುಟ್ಟಗಾಯಗಳಾಗಿತ್ತು. 

Tap to resize

Latest Videos

undefined

ಸರ್ಕಾರವೇ ಕ್ಲಿಕ್ಕಿಸಿದ ಜ್ವಾಲಾಮುಖಿ ಫೋಟೋದಲ್ಲಿ ಸೆರೆಯಾದ ಯುಎಫ್‌ಓ?..

ಆಸ್ಪತ್ರೆಗೆ ದಾಖಲಾಗಿದ್ದರೂ, ಚಿಕಿತ್ಸೆ ಫಲಿಸದೇ ಇಬ್ಬರೂ ಮೃತ ಪಟ್ಟಿದ್ದಾರೆ. ಸುದೈವಶಾತ್‌ ಘಟನೆ ವೇಳೆ ಮೂವರು ಮಕ್ಕಳು ಹಾಗೂ ಮಯೂರಿಯವರ ತಾಯಿ ಹಡಗಿನಲ್ಲಿದ್ದರಿಂದ ಅಪಾಯದಿಂದ ಪಾರಾಗಿದ್ದರು. 

ಇದೀಗ ಮೂವರು ಮಕ್ಕಳು ಅನಾಥರಾಗಿದ್ದಾರೆ. ಇದೇ ವೇಳೆ ಘಟನೆಯಲ್ಲಿ ಮೃತ ಪಟ್ಟವರ ಸಂಖ್ಯೆ 21ಕ್ಕೇರಿಕೆಯಾಗಿದೆ.

click me!