ಕೊರೊನಾ ಭಯ: ದಲೈ ಲಾಮಾ ಅರಮನೆ ಬಾಗಿಲು ಮುಚ್ಚಿದ ಚೀನಾ!

Suvarna News   | Asianet News
Published : Jan 30, 2020, 04:27 PM IST
ಕೊರೊನಾ ಭಯ: ದಲೈ ಲಾಮಾ ಅರಮನೆ ಬಾಗಿಲು ಮುಚ್ಚಿದ ಚೀನಾ!

ಸಾರಾಂಶ

ಕೊರೊನಾ ವೈರಸ್ ನೆಪದಲ್ಲಿ ದಲೈ ಲಾಮಾ ಅರಮನೆ ಮುಚ್ಚಿದ ಚೀನಾ| ಟಿಬೆಟ್ ಧರ್ಮಗುರು ದಲೈ ಲಾಮಾ ಅಧಿಕೃತ ಪಟೋಲಾ  ಅರಮನೆ| ಕೊರೊನಾ ವೈರಸ್ ಹರಡುವಿಕೆಯನ್ನು ತಪ್ಪಿಸುವ ಉದ್ದೇಶ ಎಂದ ಚೀನಾ ಸರ್ಕಾರ| ಮುಂಜಾಗೃತಾ ಕ್ರಮವಾಗಿ ಪಟೋಲಾ ಅರಮನೆ ಮುಚ್ಚಿರುವುದಾಗಿ ಚೀನಾ ಸ್ಪಷ್ಟನೆ| ಚೀನಾ ಸರ್ಕಾರದ ಕ್ರಮ ಖಂಡಿಸಿದ ಟೆಬೆಟ್ ಸಂಸತ್ತು| ಟಿಬೆಟ್ ಆಪೋಷಣ ಪಡೆಯುವ ಚೀನಾದ ಹುನ್ನಾರ ಎಂದ ಯೆಶಿ ಫುಂಟ್‌ಸೋಕ್| 

ಟಿಬೆಟ್(ಜ.30): ಕೊರೊನಾ ವೈರಸ್ ಭಯ ಇಡೀ ಚೀನಾವನ್ನು ಆವರಿಸಿದ್ದು, ಈ ಮಾರಣಾಂತಿಕ ವೈರಸ್ ಚೀನಾ ಗಡಿ ದಾಟುವ ಭಯ ಇದೀಗ ಕಾಡತೊಡಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಟಿಬೆಟ್ ಧರ್ಮಗುರು ದಲೈ ಲಾಮಾ ಅವರ ಅಧಿಕೃತ ಪಟೋಲಾ ಅರಮನೆಯನ್ನು ಚೀನಿ ಸರ್ಕಾರ ಮುಚ್ಚಿದೆ.

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಟಿಬೆಟ್ ಧರ್ಮಗುರು ದಲೈ ಲಾಮಾ ಅವರ ಅಧಿಕೃತ ಪಟೋಲಾ ಅರಮನೆಯನ್ನು ಮುಚ್ಚಿರುವುದಾಗಿ ಚೀನಾ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೋನಾ ಸಾವು 132ಕ್ಕೇರಿಕೆ, ಚೀನಾದಲ್ಲಿ ಮರಣ ಮೃದಂಗ!

ಕೊರೊನಾ ವೈರಸ್ ಅತ್ಯಂತ ವೇಗವಾಗಿ ಚೀನಾ ಹೊರತುಪಡಿಸಿ ಇತರ ದೇಶಗಳಿಗೆ ಹರಡುತ್ತಿದ್ದು, ಟಿಬೆಟ್ ಕೂಡ ಇದಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ಮವಾಗಿ ಪಟೋಲಾ ಅರಮನೆಯನ್ನು ಮುಚ್ಚಿರುವುದಾಗಿ ಚೀನಾ ಸರ್ಕಾರ ತಿಳಿಸಿದೆ.

ಆದರೆ ಚೀನಾದ ಈ ಕ್ರಮವನ್ನು ಖಂಡಿಸಿರುವ ಅರಮನೆ ಅಧಿಕಾರಿಗಳು, ಕೊರೊನಾ ವೈರಸ್ ನೆಪದಲ್ಲಿ ಅರಮನೆಯನ್ನು ವಶಕ್ಕೆ ಪಡೆಯುವ ಹುನ್ನಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಬೆಟ್ ಸಂಸತ್ತಿನ ವಕ್ತಾರ ಯೆಶಿ ಫುಂಟ್‌ಸೋಕ್, ಕೊರೊನಾ ವೈರಸ್ ನೆಪದಲ್ಲಿ ಟಿಬೆಟ್ ಆಪೋಷಣ ಪಡೆಯುವ ಚೀನಾದ ಹುನ್ನಾರವನ್ನು ಖಂಡಿಸುವುದಾಗಿ ಕಿಡಿಕಾರಿದ್ದಾರೆ.

ಟಿಬೆಟ್‌ ಹೊಸ ವರ್ಷಾಚರಣೆಗೆ ಸಿದ್ಧತೆ ಆರಂಭಿಸಿದ್ದು, ಈ ಸಂದರ್ಭದಲ್ಲಿ ಅರಮನೆ ಮುಚ್ಚುವ ನಿರ್ಧಾರದಿಂದ ಲಕ್ಷಾಂತರ ಭೌದ್ಧ ಅನುಯಾಯಿಗಳಿಗೆ ಆಘಾತವಾಗಿದೆ ಎಂದು ಫುಂಟ್‌ಸೋಕ್ ಖೇದ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ