ಪಾಕ್ ಗುರುನಾನಕ್ ಸಾಹೀಬ್ ಗುರುದ್ವಾರದ ಬಳಿ ಕಲ್ಲು ತೂರಟ: ವಿಡಿಯೋ!

Suvarna News   | ANI
Published : Jan 03, 2020, 09:31 PM ISTUpdated : Jan 03, 2020, 10:46 PM IST
ಪಾಕ್ ಗುರುನಾನಕ್ ಸಾಹೀಬ್ ಗುರುದ್ವಾರದ ಬಳಿ ಕಲ್ಲು ತೂರಟ: ವಿಡಿಯೋ!

ಸಾರಾಂಶ

ಪಾಕ್ ಗುರುನಾನಕ್ ಸಾಹೀಬ್ ಗುರುದ್ವಾರದ ಬಳಿ ಕಲ್ಲು ತೂರಾಟ| ಗುರುನಾನಕ್ ಸಾಹೀಬ್ ಗುರುದ್ವಾರದ ಒಳಗೆ ಭಾರೀ ಸಂಖ್ಯೆಯಲ್ಲಿ ಭಕ್ತರು| ಗುರುದ್ವಾರದ ಮೇಲೆ ಕಲ್ಲು ತೂರಟ ನಡೆಸುತ್ತಿರುವ ಗುಂಪು| ಇಮ್ರಾನ್ ಖಾನ್ ಮಧ್ಯಪ್ರವೇಶಕ್ಕೆ ಪಂಜಾಬ್ ಸಿಎಂ ಒತ್ತಾಯ|

ನವದೆಹಲಿ(ಜ.03): ಪಾಕಿಸ್ತಾನದ ಗುರುನಾನಕ್ ಸಾಹೀಬ್ ಗುರುದ್ವಾರದ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಭಾರೀ ಕಲ್ಲು ತೂರಾಟದಲ್ಲಿ ನಿರತವಾಗಿದೆ.

ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಸಾಹೀಬ್ ಅವರ ಐತಿಹಾಸಿಕ ಗುರುದ್ವಾರದ ಮೇಲೆ ಭಾರೀ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಾಂಬ್ ತುಣುಕು ಇರಿಸಿ ಸಿಖ್ಖರ ಎತ್ತಿಕಟ್ಟಲು ಪಾಕ್ ಯತ್ನ

ಗುರುದ್ವಾರದ ಸಿಬ್ಬಂದಿಯ ಮಗಳು ಜಗ್ಜೀತ್ ಕೌರ್ ಎಂಬಾಕೆಯನ್ನು ಕಳೆದ ಆಗಸ್ಟ್’ನಲ್ಲಿ ಮನೆಯಿಂದ ಅಪಹರಿಸಿದ್ದ ಯುವಕನೋರ್ವ ಆಕೆಯನ್ನು ಬಲವಂತಾಗಿ ಇಸ್ಲಾಂಗೆ ಮತಾಂತರಿಸಿದ್ದ. ಈ ಕುರಿತು ಆಕೆಯ ತಂದೆ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಗುರುದ್ವಾರದಲ್ಲಿ ಭಜನೆ ಆರಂಭವಾಗುತ್ತಿದ್ದಂತೇ ಆವರಣದ ಎದುರಿಗೆ ಜಮಾಯಿಸಿದ ಗುಂಪು, ಕಲ್ಲುತೂರಾಟದಲ್ಲಿ ತೊಡಗಿದೆ. ಒಳಗಡೆ ಭಾರೀ ಸಂಖ್ಯೆಯಲ್ಲಿ ಭಕ್ತರು ಇರುವುದು ಆತಂಕಕ್ಕೆ ಕಾರಣವಾಗಿದೆ.

ಈ ಮಧ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್, ಈ ಕೂಡಲೇ ಮಧ್ಯಪ್ರವೇಶಿಸಿ ಭಕ್ತರ ರಕ್ಷಣೆಗೆ ಧಾವಿಸಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!