ಅಮೆರಿಕ-ಇರಾನ್ ನಡುವೆ ಶುರುವಾಗಿದೆ ಯುದ್ಧ ಭೀತಿ| ಅಮೆರಿಕದ ಏರ್ ಸ್ಟ್ರೈಕ್’ನಲ್ಲಿ ಇರಾನ್’ನ ಉನ್ನತ ಸೇನಾಧಿಕಾರಿ ಸಾವು| ಬಾಗ್ದಾದ್ ಏರ್ ಸಟ್ರೈಕ್’ನಲ್ಲಿ ಹತರಾದ ಕಮಾಂಡರ್ ಖಾಸೀಮ್ ಸೋಲೆಮನಿ| ಅಮೆರಿಕ ವಿರುದ್ಧ ಪ್ರತೀಕಾರದ ಮಾತುಗಳನ್ನಾಡಿದ ಇರಾನ್| ಯುದ್ಧಕ್ಕೆ ನಾವೂ ಸಿದ್ಧ ಎಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್| ಸಂಯಮದಿಂದ ಎರಡೂ ದೇಶಗಳಿಗೆ ಭಾರತದ ಸಂದೇಶ| ಶಾಂತಿ ಸ್ಥಾಪನೆಗೆ ಸಾಧ್ಯವಾದ ಎಲ್ಲ ನೆರವು ನೀಡುವ ಭರವಸೆ ನೀಡಿದ ಭಾರತ|
ನವದೆಹಲಿ(ಜ.03): ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಡೆಸಿದ ಏರ್ ಸ್ಟ್ರೈಕ್’ನಲ್ಲಿ ಇರಾನ್ ಸೇನೆಯ ಉನ್ನತ ಅಧಿಕಾರಿ ಸಾವನ್ನಪ್ಪಿದ್ದು, ಇರಾನ್-ಅಮೆರಿಕ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.
ಅಮೆರಿಕದ ವಾಯುದಾಳಿಯಲ್ಲಿ ಇರಾನ್ ರೆವಲ್ಯೂಶನರಿ ಗಾರ್ಡ್’ನ ಖಾಸೀಂ ಸೋಲೆಮನಿ ಸಾವನ್ನಪ್ಪಿದ್ದು, ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಹವಣಿಸುತ್ತಿದೆ.
ಇರಾನ್ ಟಾಪ್ ಕಮಾಂಡರ್ ಹತ್ಯೆ: ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಟ್ರಂಪ್-ರೋಹಾನಿ!
ಈ ಮಧ್ಯೆ ಅಮೆರಿಕ-ಇರಾನ್’ಗೆ ಸಂಯಮದ ಸಂದೇಶ ಕಳುಹಿಸಿರುವ ಭಾರತ, ಎರಡೂ ದೇಶಗಳ ಯಾವುದೇ ನಕಾರಾತ್ಮಕ ನಡೆ ಮಧ್ಯಪ್ರಾಚ್ಯವನ್ನು ಮತ್ತೆ ಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
Vital that situation doesn't escalate further: India advocates restraint after US airstrike killed top Iranian commander
Read story | https://t.co/UBRilMCCeg pic.twitter.com/Szg5V6CDz7
ಯುದ್ಧೋನ್ಮಾದದಲ್ಲಿ ಯಾವುದೇ ನಕಾರಾತ್ಮಕ ನಿರ್ಣಯಗಳನ್ನು ಕೈಗೊಳ್ಳದಂತೆ ಎರಡೂ ದೇಶಗಳಿಗೆ ಭಾರತ ಮನವಿ ಮಾಡಿದ್ದು, ಶಾಂತಿ ಸ್ಥಾಪನೆಗೆ ಸಾಧ್ಯವಾದ ಎಲ್ಲ ನೆರವು ನೀಡುವ ಭರವಸೆ ನೀಡಿದೆ.
ಭಾರೀ ಬೆಲೆ ತೆರಬೇಕಾಗುತ್ತದೆ: ಹೊಸ ವರ್ಷಕ್ಕೆ ಟ್ರಂಪ್ ವಾರ್ನ್ ಮಾಡಿದ್ಯಾರಿಗೆ?
ಇರಾಕ್ ರಾಜಧಾನಿ ಬಾಗ್ದಾದ್’ನಲ್ಲಿ ಅಮೆರಿಕ ನಡೆಸಿದ ಏರ್ ಸ್ಟ್ರೈಕ್’ನಲ್ಲಿ ಇರಾನ್ ಸೇನೆಯ ಉನ್ನತ ಕಮಾಂಡರ್ ಖಾಸೀಮ್ ಸೋಲೆಮನಿ ಸಾವನ್ನಪ್ಪಿದ್ದು, ಇರಾನ್-ಅಮೆರಿಕ ನಡುವೆ ಯುದ್ಧ ಭೀತಿ ಸೃಷ್ಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು.