
ಪ್ಯಾರಿಸ್(ನ.15): ಜಮ್ಮು-ಕಾಶ್ಮೀರದ ಕುರಿತು ಸುಳ್ಳು ಪ್ರಚಾರ ಮಾಡುತ್ತಿರುವ ಪಾಕಿಸ್ತಾನ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ ಎಂದು ಭಾರತ ಹೇಳಿದೆ.
ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಭಾರತ ನಿಯೋಗ ಪ್ರತಿನಿಧಿಸಿ ಮಾತನಾಡಿದ ಅನನ್ಯಾ ಅಗರ್ವಾಲ್, ಪಾಕಿಸ್ತಾನದ ಡಿಎನ್ಎದಲ್ಲೇ ಭಯೋತ್ಪಾದನೆ ಇದೆ ಎಂದು ತಿರುಗೇಟು ನೀಡಿದ್ದಾರೆ.
ಬಾಂಬ್ ಬೀಳುವಾಗ ಹಕ್ಕುಗಳ ಚಿಂತೆ ಮಾಡ್ತಾರಾ?: ಯುಎಸ್ ಕಾಂಗ್ರೆಸ್‌ನಲ್ಲಿ ರವಿ ಭಾತ್ರಾ!
ತನ್ನ ವಿಲಕ್ಷಣ ನಡವಳಿಕೆಗಳಿಂದಾಗಿ ಪಾಕಿಸ್ತಾನ ದುರ್ಬಲ ಆರ್ಥಿಕತೆಯನ್ನು ಎದುರಿಸುತ್ತಿದೆ. ಭಯೋತ್ಪಾದನೆಯ ಡಿಎನ್ಎ ಆಳವಾಗಿ ಬೇರೂರಿರುವ ಪರಿಣಾಮ ಅದು ತೀವ್ರಗಾಮಿ ಸಮಾಜವನ್ನು ಸೃಷ್ಟಿಸಿದೆ ಎಂದು ಅನನ್ಯಾ ಅಗರ್ವಾಲ್ ಹರಿಹಾಯ್ದಿದ್ದಾರೆ.
ವಿಶ್ವಸಂಸ್ಥೆ ವೇದಿಕೆಯನ್ನು ಭಾರತದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಬಳಸಿಕೊಂಡಿರುವ ಪಾಕಿಸ್ತಾನ, ನಮ್ಮ ಆಂತರಿಕ ವಿಚಾರದಲ್ಲಿ ಮುಗು ತೂರಿಸುವುದನ್ನು ನಾವು ಖಂಡಿಸುತ್ತೇವೆ ಎಂದು ಅನನ್ಯಾ ಕಿಡಿಕಾರಿದರು.
ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!
ದುರ್ಬಲ ದೇಶ ಸೂಚ್ಯಂಕ ಪಟ್ಟಿಯಲ್ಲಿ ಕಳೆದ ವರ್ಷ ಪಾಕಿಸ್ತಾನ 14 ನೇ ಸ್ಥಾನದಲ್ಲಿದಿದ್ದನ್ನು ನೆನಪಿಸಿದ ಅಗರ್ವಾಲ್, ಕತ್ತಲೆಯ ಛಾಯೆಗೆ ಪಾಕಿಸ್ತಾನ ತವರಾಗಿದೆ ಎಂದು ಸೂಕ್ತ ತಿರುಗೇಟು ನೀಡಿದರು.
ಭಯೋತ್ಪಾದನೆಯೆಂಬ ವಿಷಬೀಜ ಬಿತ್ತಿ ಅದನ್ನು ಹರಡುವಲ್ಲಿ ಪಾಕಿಸ್ತಾನ ಮತ್ತಷ್ಟು ಸಕ್ರಿಯವಾಗಿದೆ ಎಂದು ಹೇಳಿದ ಅನನ್ಯಾ, ಪರಮಾಣು ಯುದ್ಧವನ್ನು ಮುಕ್ತವಾಗಿ ಬೋಧಿಸಲು ವಿಶ್ವಸಂಸ್ಥೆ ವೇದಿಕೆಯನ್ನು ಪಾಕಿಸ್ತಾನದ ನಾಯಕರು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪಾಕ್ ಉತ್ಪ್ರೇಕ್ಷೆಯ ದೂರು ಕಡೆಗಣಿಸಿ: ವಿಶ್ವಸಂಸ್ಥೆಗೆ ಭಾರತ ಮನವಿ!
ಪಾಕಿಸ್ತಾನ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಸಂದರ್ಶನವೊಂದರಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಹಕ್ಕಾನಿಯಂತ ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು ಎಂದು ಹೇಳಿದ್ದನ್ನು ಕೂಡ ಅಗರ್ವಾಲ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಕಾಶ್ಮೀರ ವಿವಾದ: ನಾವು ತಲೆ ಹಾಕಲ್ಲ ಎಂದ ವಿಶ್ವಸಂಸ್ಥೆ ಮುಖ್ಯಸ್ಥ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ