ಸೂಚನೆ ನೀಡದೆ ಝೇಲಂ ನದಿ ನೀರನ್ನು ಪಾಕ್‌ಗೆ ಬಿಟ್ಟ ಭಾರತ, ಮುಜಾಫರಬಾದ್‌ನಲ್ಲಿ ಎಮರ್ಜೆನ್ಸಿ!

Published : Apr 26, 2025, 06:09 PM ISTUpdated : Apr 26, 2025, 06:20 PM IST
ಸೂಚನೆ ನೀಡದೆ ಝೇಲಂ ನದಿ ನೀರನ್ನು ಪಾಕ್‌ಗೆ ಬಿಟ್ಟ ಭಾರತ, ಮುಜಾಫರಬಾದ್‌ನಲ್ಲಿ ಎಮರ್ಜೆನ್ಸಿ!

ಸಾರಾಂಶ

ಭಾರತ ಪೂರ್ವಸೂಚನೆ ಇಲ್ಲದೆ ಝೇಲಂ ನದಿಗೆ ನೀರು ಬಿಟ್ಟಿದ್ದರಿಂದ ಪಾಕಿಸ್ತಾನದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮುಜಫರಾಬಾದ್ ಬಳಿ ನೀರಿನ ಮಟ್ಟ ಏರಿಕೆಯಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪಾಕಿಸ್ತಾನ ಇದನ್ನು "ಜಲ ಭಯೋತ್ಪಾದನೆ" ಎಂದು ಕರೆದಿದ್ದು, ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೋರಿದೆ. ಸಿಂಧೂ ಜಲ ಒಪ್ಪಂದ ಉಲ್ಲಂಘನೆ ಎಂದು ಆರೋಪಿಸಿದೆ. ಭಾರತದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ನವದೆಹಲಿ (ಏ.26): ಭಾರತವು  ಯಾವುದೇ ಸೂಚನೆಯನ್ನು ನೀಡದೇ ಝೇಲಂ ನದಿ ನೀರನ್ನು ಪಾಕಿಸ್ತಾನಕ್ಕೆ ಬಿಟ್ಟಿದ. ಇದರಿಂದಾಗಿ ಮುಜಫರಾಬಾದ್ ಬಳಿ ನೀರಿನ ಮಟ್ಟದಲ್ಲಿ ತೀವ್ರ ಏರಿಕೆ ಉಂಟಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸ್ಥಳೀಯ ಆಡಳಿತವು ಹಟ್ಟಿಯನ್ ಬಾಲಾದಲ್ಲಿ ನೀರಿನ ತುರ್ತು ಪರಿಸ್ಥಿತಿಯನ್ನು ಘೋಷಿಸಿತು, ಮಸೀದಿ ಪ್ರಕಟಣೆಗಳ ಮೂಲಕ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಈ ಕ್ರಮವು ನದಿ ದಂಡೆಯ ಬಳಿ ವಾಸಿಸುವ ಜನರಲ್ಲಿ ಭೀತಿಯನ್ನು ಸೃಷ್ಟಿಸಿತು.

ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಿಂದ ನೀರು ಪ್ರವೇಶಿಸಿ ಚಕೋತಿ ಪ್ರದೇಶದಲ್ಲಿ ಉಕ್ಕಿ ಹರಿಯಲು ಆರಂಭಿಸಿದೆ. 'ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಭಾರತದ ಇತ್ತೀಚಿನ ಬೆದರಿಕೆಗಳ ನಂತರ ಈ  ಕ್ರಮ ಕೈಗೊಳ್ಳಲಾಗಿದೆ. ಈ ಒಪ್ಪಂದವು ಮೂರು ಯುದ್ಧಗಳು ಮತ್ತು ಅನೇಕ ಪ್ರಾದೇಶಿಕ ಬಿಕ್ಕಟ್ಟುಗಳ ನಡುವೆಯೂ ಉಳಿದುಕೊಂಡಿತ್ತು. ಆದರೂ, ಭಾರತ ಈಗ ದೀರ್ಘಕಾಲದ ಒಪ್ಪಂದದಿಂದ ಹಿಂದೆ ಸರಿಯಲು ಸಿದ್ಧವಾಗಿದೆ ಎಂದು ತೋರುತ್ತದೆ' ಎಂದು ಪಾಕಿಸ್ತಾನದ ಡೇಲಿ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಭಾರತದ ಆಕ್ರಮಣಕ್ಕೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಕೂಡ ಪ್ರತಿಕ್ರಿಯೆ ನೀಡಿದೆ. ಅಂತರರಾಷ್ಟ್ರೀಯ ನಿಯಮಗಳ ಅಡಿಯಲ್ಲಿ ಕಾನೂನುಬದ್ಧ ಪ್ರತಿಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಮತ್ತಷ್ಟು ಪ್ರತಿಕೂಲ ಕ್ರಮಗಳು ಉದ್ವಿಗ್ನತೆಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಹೇಳಿದ್ದರೂ, ಭಾರತದ ಸೇನಾ ಪ್ರಯೋಗದ ಆತಂಕ ಪಾಕಿಸ್ತಾನದಲ್ಲಿದೆ. ಉದ್ವಿಗ್ನತೆ ಉಲ್ಬಣಗೊಳ್ಳುವುದನ್ನು ತಡೆಯುವಲ್ಲಿ ಪಾತ್ರ ವಹಿಸುವಂತೆ ಪಾಕಿಸ್ತಾನ ಜಾಗತಿಕ ಸಂಸ್ಥೆಗಳಿಗೆ ಕರೆ ನೀಡಿದೆ.

ವಿಶ್ವಸಂಸ್ಥೆಯು ಸಂಯಮವನ್ನು ಒತ್ತಾಯಿಸಿ ಸಂಕ್ಷಿಪ್ತ ಹೇಳಿಕೆಯನ್ನು ನೀಡಿದ್ದರೂ, ಯಾವುದೇ ಬಲವಾದ ಕ್ರಮಗಳನ್ನು ಅನುಸರಿಸಿಲ್ಲ. ಬಿಕ್ಕಟ್ಟು ಇನ್ನಷ್ಟು ಹದಗೆಡುವ ಮೊದಲು ವಿಶ್ವಸಂಸ್ಥೆಯು ಕ್ರಮ ಕೈಗೊಳ್ಳುತ್ತದೆ ಎಂದು ಪಾಕಿಸ್ತಾನ ನಿರೀಕ್ಷೆಯಲ್ಲಿದೆ. ಈ ನಡುವೆ ಪೀಡಿತ ಸಮುದಾಯಗಳನ್ನು ರಕ್ಷಿಸಲು ಅಧಿಕಾರಿಗಳು ನದಿ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದ್ದಾರೆ.

'ಭಾರತವು ಅನಂತನಾಗ್‌ನಿಂದ ಝೀಲಂ ನದಿಗೆ ಹೆಚ್ಚುವರಿ ನೀರನ್ನು ಅಜಾಗರೂಕತೆಯಿಂದ ಬಿಡುಗಡೆ ಮಾಡುವುದರಿಂದ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಿದ್ದು, ನದಿಯ ಕೆಳಭಾಗದ ಜೀವಗಳು ಮತ್ತು ಜೀವನೋಪಾಯಗಳಿಗೆ ಅಪಾಯವಿದೆ. ಭಾರತವನ್ನು ಅದಕ್ಕೆ ತಕ್ಕಂತೆ ನಿಭಾಯಿಸಬೇಕು ಮತ್ತು ಈ ಜಲ ಭಯೋತ್ಪಾದನೆಯನ್ನು ನಿಲ್ಲಿಸಬೇಕು' ಎಂದು ಪಾಕಿಸ್ತಾನಿಗಳು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಇನ್ನು ಪಾಕಿಸ್ತಾನದ ಮಾಧ್ಯಮಗಳು ಕೂಡ ಇದನ್ನು ವರದಿ ಮಾಡಿದ್ದು, ಭಾರತ ತನ್ನ ಜಲ ಭಯೋತ್ಪಾದನೆ ಮಾಡೋದನ್ನು ನಿಲ್ಲಿಸಬೇಕು ಎಂದು ಹೇಳಿದೆ. ಕೆಲವೆಡೆ ಪಾಕಿಸ್ತಾನದ ಗ್ರಾಮಗಳಿಗೆ ನೀರು ಹರಿದಿರುವ ವಿಡಿಯೋ ಕೂಡ ಪೋಸ್ಟ್‌ ಮಾಡಲಾಗಿದೆ. ಆದರೆ, ಇದು ಇಂದಿನ ವಿಡಿಯೋ ಎನ್ನುವುದು ಖಚಿತವಾಗಿಲ್ಲ.

ಪಾಕಿಸ್ತಾನದ ಜೊತೆ ಯುದ್ಧ ಬೇಡ, ನಾನು ಯುದ್ಧದ ಪರವಿಲ್ಲ ಎಂದ ಸಿಎಂ ಸಿದ್ಧರಾಮಯ್ಯ!

ಏಪ್ರಿಲ್‌ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರಣ್‌ನಲ್ಲಿ ಪ್ರವಾಸಿಗರ ಮೇಲೆ ಪಾಕ್‌ ಮೂಲದ ಉಗ್ರವಾದಿಗಳು ಸ್ಥಳೀಯ ಭಯೋತ್ಪಾದಕರ ನೆರವಿನಿಂದ ಪೈಶಾಚಿಕ ದಾಳಿ ಮಾಡಿದ್ದರು. ಈ ಘಟನೆಯಲ್ಲಿ 1 ನೇಪಾಳಿ ಪ್ರಜೆ ಸೇರಿದಂತೆ 26 ಮಂದಿ ಸಾವು ಕಂಡಿದ್ದರು. ಉಗ್ರರು ಧರ್ಮ ಕೇಳಿ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪಹಲ್ಗಾಮ್‌ ಬಗ್ಗೆ 'ಮಾನವೀಯತೆಯೇ ಮೊದಲ ಧರ್ಮ' ಎಂದ ಪ್ರಿಯಾಂಕ್‌ ಖರ್ಗೆ, ನಿಮಗಿಂತ ಓವೈಸಿಯೇ ಬೆಸ್ಟ್‌!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್