ಭಾರತಕ್ಕೆ ಆಗಮಿಸಿದ ನೇಪಾಳ ಪ್ರಧಾನಿ: ಇಂದು ಭಾರತ ನೇಪಾಳ ನಡುವೆ ಪ್ರಯಾಣಿಕ ರೈಲಿಗೆ ಚಾಲನೆ

Published : Apr 02, 2022, 05:58 AM IST
ಭಾರತಕ್ಕೆ ಆಗಮಿಸಿದ ನೇಪಾಳ ಪ್ರಧಾನಿ: ಇಂದು ಭಾರತ ನೇಪಾಳ ನಡುವೆ ಪ್ರಯಾಣಿಕ ರೈಲಿಗೆ ಚಾಲನೆ

ಸಾರಾಂಶ

ನೇಪಾಳ ಹಾಗೂ ಭಾರತ ಮಧ್ಯೆ ರೈಲು ಸೇವೆಗೆ ಇಂದು ಚಾಲನೆ ಇಂದು ಚಾಲನೆ ನೀಡಲಿರುವ ಉಭಯ ದೇಶಗಳ ಪ್ರಧಾನಿಗಳು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಚಾಲನೆ ನೀಡಲಿರುವ ಮೋದಿ, ಶೇರ್‌ ಬಹುದ್ದೂರ್‌

ನವದೆಹಲಿ(ಏ.2): ಪಟನಾ ಭಾರತ(India)  ಮತ್ತು ನೇಪಾಳ (Nepal) ನಡುವೆ ಇಂದಿನಿಂದ(ಏ.2)  ಪ್ರಯಾಣಿಕ ರೈಲು ಸಂಚಾರ ಪುನಾರಂಭಗೊಳ್ಳಲಿದೆ. ಭಾರತದ ಜಯನಗರ ಮತ್ತು ನೇಪಾಳದ ಕುರ್ತಾನಡುವಿನ 34.5 ಕಿ.ಮೀ ಉದ್ದದ ಪ್ರಯಾಣಿಕರ ರೈಲು ಸೇವೆಗೆ ಪ್ರಧಾನಿ ಮೋದಿ ನರೇಂದ್ರ ಮೋದಿ (Narendra Modi) ಮತ್ತು ನೇಪಾಳ ಪ್ರಧಾನಿ ಶೇರ್‌ ಬಹುದ್ದೂರ್‌ ದೇವುಬಾ (Sher Bahadur Devba) ವಿಡಿಯೋ ಕಾನ್ಪರೆನ್ಸಿಂಗ್‌ (video conferencing) ಮೂಲಕ ಚಾಲನೆ ನೀಡಿದ್ದಾರೆ. ಜಯನಗರ ಮತ್ತು ನೇಪಾಳದ ಬಿಜಾಲ್‌ಪುರ (Bijalpur) ನಡುವೆ 1937ರಲ್ಲೇ ರೈಲು ಸಂಚಾರ ಆರಂಭವಾಗಿತ್ತು. ಆದರೆ 2001ರಲ್ಲಿ ಸಂಭವಿಸಿದ ಭಾರೀ ಭೂಕುಸಿತದ ಬಳಿಕ ಈ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮೊದಲ ಹಂತದಲ್ಲಿ ಜಯನಗರ(Jayanagar)- ಕುರ್ತಾ (Kurta) ನಡುವೆ ಸಂಚಾರ ಪುನಾರಂಭಿಸಲಾಗಿದೆ.

ಪೂರ್ವ ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬೀರೇಂದ್ರಕುಮಾರ್(Birendra Kumar) ಈ ಬಗ್ಗೆ ಮಾತನಾಡಿ ಬಹು ನಿರೀಕ್ಷಿತ ಈ ರೈಲು ಸೇವೆ ಭಾರತ ಹಾಗೂ ನೇಪಾಳ ಈ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಮತ್ತಷ್ಟು ಬಲ ನೀಡಲಿದೆ. ನೇಪಾಳ ಪ್ರಧಾನಿ ಶೇರ್‌ ಬಹುದ್ದೂರ್‌ ದೇವುಬಾ ತಾವು ಪ್ರಧಾನಿಯಾಗಿ ಅಧಿಕಾರಕ್ಕೇರಿದ ನಂತರ ಭಾರತಕ್ಕೆ ಮೊದಲ ಬಾರಿಗೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲೇ ಈ  35 ಕಿಲೋ ಮೀಟರ್ ಉದ್ದದ ಈ ರೈಲು ಮಾರ್ಗ ಲೋಕಾರ್ಪಣೆಗೊಳ್ಳುತ್ತಿದೆ. ಜುಲೈ 2021ರಲ್ಲಿ ನೇಪಾಳ ಪ್ರಧಾನಿಯಾಗಿ ಶೇರ್‌ ಬಹುದ್ದೂರ್‌ ದೇವುಬಾ ಅಧಿಕಾರಕ್ಕೇರಿದ್ದರು. 

 ನೇಪಾಳ ಪ್ರಧಾನಿ ಶೇರ್‌ ಬಹುದ್ದೂರ್‌ ದೇವುಬಾ ಮೂರು ದಿನಗಳ ಭಾರತ ಭೇಟಿಗಾಗಿ ಶುಕ್ರವಾರವೇ ಭಾರತಕ್ಕೆ ಆಗಮಿಸಿದ್ದಾರೆ. ಅಲ್ಲದೇ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಆಹ್ವಾನದ ಮೇರೆಗೆ ಅವರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ. ದೇವುಬಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ನಡ್ಡಾ ಅವರಿಗೆ ದೀನ್‌ ದಯಾಳ್ ಉಪಾಧ್ಯಾಯ ಅವರು ಬರೆದ ಇಂಟಿಗ್ರಲ್ ಹ್ಯುಮನಿಸಂ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ದೆವುಬಾ ಅವರೊಂದಿಗೆ ಅವರ ಪತ್ನಿ ಡಾ. ಅರ್ಜು ರಾಣಾ ದೆಬ್ಯು ಹಾಗೂ ನಾಲ್ವರು ಸಂಪುಟ ದರ್ಜೆ ಸಚಿವರು ಇದ್ದರು. 

Nepal UPI Payments: ಡಿಜಿಟಲ್ ವಹಿವಾಟಿನಲ್ಲಿ ಮಹತ್ವದ ಹೆಜ್ಜೆ: ಇದೀಗ ನೇಪಾಳದಲ್ಲೂ ಭಾರತದ ಯುಪಿಐ ಎಂಟ್ರಿ!

ಇತ್ತ ಈ ರೈಲು ಮಾರ್ಗವೂ ಭಾರತದ ಬಿಹಾರದಲ್ಲಿರುವ ಜಯನಗರದಿಂದ  ನೇಪಾಳದ ಜಾನಕಪುರದಲ್ಲಿರುವ ಕುರ್ತಾ ನಡುವೆ ಈ ರೈಲು ಸಂಚರಿಸಲಿದೆ. ಇದು 68.7 ಕಿಲೋ ಮೀಟರ್ ಉದ್ದದ ಜಯನಗರ ಬಿಜಾಲ್ಪುರ್‌ ಬರ್ದಿದಾಸ್‌ ರೈಲ್ವೆ ಮಾರ್ಗದ ಭಾಗವಾಗಿದೆ. ಬಿಜಾಪ್ಲುರ ವರೆಗಿನ ಈ ಮಾರ್ಗಕ್ಕೆ ಭಾರತ ಸುಮಾರು 550 ಕೋಟಿ ರೂ ವೆಚ್ಚ ಮಾಡಿದೆ. ಕುರ್ತಾದಿಂದ ಬಿಜಾಲ್‌ಪುರಕ್ಕೆ 17 ಕಿಲೋ ಮೀಟರ್ ದೂರ ಇದೆ. ಈ ಯೋಜನೆಗೆ ನೇಪಾಳ ಸರ್ಕಾರ ಭೂಮಿ ಸ್ವಾಧೀನ ಪಡಿಸಿ ಕೊಟ್ಟ ಬಳಿಕ ಬರ್ದಿಬಸ್‌ ವರೆಗೆ ಹೊಸ ಮಾರ್ಗದ ನಿರ್ಮಾಣವಾಗಲಿದೆ. ಜಯನಗರವೂ ಭಾರತ ನೇಪಾಳ ಗಡಿಯಿಂದ ಕೇವಲ 4 ಕಿಲೋ ಮೀಟರ್ ದೂರದಲ್ಲಿದೆ. ಈ ಮಾರ್ಗವೂ ಖ್ಯಾತ ಹಿಂದೂ ತೀರ್ಥಕ್ಷೇತ್ರವಾದ ಜಾನಕ್‌ಪುರಕ್ಕೆ ಸಂಪರ್ಕ ಒದಗಿಸುತ್ತದೆ. 

Dharchula Bridge ಭಾರತ ನೇಪಾಳ ಸಂಬಂಧ ಮತ್ತಷ್ಟು ಗಟ್ಟಿ, ಮಹಾಕಾಳಿ ನದಿಗೆ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ!

ಈ ಮಾರ್ಗದಲ್ಲಿ ರೈಲು ಸೇವೆಯನ್ನು ಆರಂಭಿಸಲು ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್‌ ಎರಡು ಸೆಟ್‌ಗಳ 1600 ಹೆಚ್‌ಪಿ ಡೆಮೊ ಪ್ಯಾಸೆಂಜರ್‌ ರೆಕ್‌ನ್ನು ಪೂರೈಕೆ ಮಾಡಿದೆ. ಈ ಡೆಮೊ ರೆಕ್‌ಗಳು ಸಾಮಾನ್ಯ ಬೋಗಿಗಳಲ್ಲದೇ ಎರಡು ಏಸಿ ಬೋಗಿಗಳನ್ನು ಹೊಂದಿದೆ. ಈ ಎರಡು ರೆಕ್‌ಗಳನ್ನು 2020 ರ ಸೆಪ್ಟೆಂಬರ್‌ನಲ್ಲಿಯೇ ನೇಪಾಳಕ್ಕೆ ಹಸ್ತಾಂತರ ಮಾಡಲಾಗಿತ್ತು. ರೈಲ್ವೆಯ ಇರ್ಕಾನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ವಿಭಾಗಕ್ಕೆ ಮೂರು ಹಂತಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಟಾಸ್ಕ್ ನೀಡಲಾಗಿತ್ತು. ಈ ಯೋಜನೆಯ ಎರಡನೇ ಹಂತವಾದ ಜಯನಗರ ದಿಂದ ಕುರ್ತಾ ಹಾಗೂ ಕುರ್ತಾದಿಂದ ಬಿಜಾಲ್ಪುರ ಯೋಜನೆಯೂ ಈಗಾಗಲೇ ಪೂರ್ಣಗೊಂಡಿದೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!