ಪಾಕಿಸ್ತಾನದಲ್ಲಿ ಹೆಡ್‌ಲೈನ್ಸ್‌ ಆದ ಭಾರತದ 'ಇಂಡಸ್‌' ನಿರ್ಧಾರ, ಸೆಕ್ಯುರಿಟಿ ಕಮಿಟಿ ಸಭೆ ಕರೆದ ಪಾಕ್‌ ಪ್ರಧಾನಿ!

Published : Apr 23, 2025, 10:52 PM ISTUpdated : Apr 23, 2025, 10:53 PM IST
ಪಾಕಿಸ್ತಾನದಲ್ಲಿ ಹೆಡ್‌ಲೈನ್ಸ್‌ ಆದ ಭಾರತದ 'ಇಂಡಸ್‌' ನಿರ್ಧಾರ, ಸೆಕ್ಯುರಿಟಿ ಕಮಿಟಿ ಸಭೆ ಕರೆದ ಪಾಕ್‌ ಪ್ರಧಾನಿ!

ಸಾರಾಂಶ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ೧೯೬೦ರ ಇಂಡಸ್ ಜಲ ಒಪ್ಪಂದವನ್ನು ರದ್ದುಗೊಳಿಸಿದೆ. ಪಾಕಿಸ್ತಾನಿ ಮಾಧ್ಯಮಗಳು ಈ ಸುದ್ದಿಯನ್ನು ಪ್ರಮುಖವಾಗಿ ವರದಿ ಮಾಡಿವೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ರಾಷ್ಟ್ರೀಯ ಭದ್ರತಾ ಸಮಿತಿಯ ತುರ್ತು ಸಭೆ ಕರೆದಿದ್ದಾರೆ.

ನವದೆಹಲಿ (ಏ.23): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪೈಶಾಚಿಕ ದಾಳಿಯ ಬೆನ್ನಲ್ಲಿಯೇ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಇಲ್ಲಿಯವರೆಗೂ ಭಾರತಕ್ಕೆ ಆದ ಅನ್ಯಾಯದ ರೀತಿಯಲ್ಲೇ ಇದ್ದ ಇಂಡಸ್‌ ಜಲ ಒಪ್ಪಂದವನ್ನು ಭಾರತ ರದ್ದು ಮಾಡಿದೆ. 1960ರಿಂದಲೂ ಜಾರಿಯಲ್ಲಿದ್ದ ಈ ಇಂಡಸ್‌ ಜಲ ಒಪ್ಪಂದದ ಪ್ರಕಾರ ಭಾರತ ಕೇವಲ ಶೇ. 20ರಷ್ಟು ನೀರನ್ನು ಮಾತ್ರವೇ ಉಪಯೋಗಿಸಬಹುದಾಗಿತ್ತು. ಈಗ ಇಂಥ ಘೋರ ಒಪ್ಪಂದವನ್ನೇ ಭಾರತ ಅಮಾನತು ಮಾಡುವ ನಿರ್ಧಾರ ಮಾಡಿದೆ.

ಪಹಲ್ಗಾಮ್‌ನಲ್ಲಿ ದಾಳಿ ಪಾಕಿಸ್ತಾನದಲ್ಲಿ ಸುದ್ದಿಯಾಗದೇ ಇದ್ದರೂ, ಪಾಕಿಸ್ತಾನದ ಬಹುತೇಕ ವೆಬ್‌ಸೈಟ್‌ಗಳಲ್ಲಿ ಭಾರತದ ಇಂಡಸ್‌ ನಿರ್ಧಾರ ಹೆಡ್‌ಲೈನ್‌ ಆಗಿದೆ. ಪಾಕ್‌ನ ಪ್ರಮುಖ ಪತ್ರಿಕೆ ಡಾನ್‌, 'Pahalgam attack: India suspends Indus Waters Treaty with immediate effect, closes Attari border check post' ಎನ್ನುವ ಟೈಟಲ್‌ನಲ್ಲಿ ಪ್ರಧಾನ ಸುದ್ದಿಯಾಗಿ ಪೋಸ್ಟ್‌ ಮಾಡಿದೆ. ಡೇಲಿ ಟೈಮ್ಸ್‌ ಪತ್ರಿಕೆ, 'India escalates tensions: ends water treaty, orders Pakistanis to leave' ಎಂದು ಲೀಡ್‌ ಸುದ್ದಿಯಾಗಿ ಪ್ರಕಟಿಸಿದೆ.
ಅದರೊಂದಿಗೆ ಪಾಕಿಸ್ತಾನ ಅಬ್ಸರ್ವರ್‌ ಪತ್ರಿಕೆ, 'India suspends Indus Water Treaty, expels Pakistani Diplomats after Pahalgam Attack' ಎನ್ನುವ ಹೆಡ್‌ಲೈನ್‌ನಲ್ಲಿ ವಿಚಾರ ಪೋಸ್ಟ್‌ ಮಾಡಿದೆ.

ಸೆಕ್ಯುರಿಟಿ ಕಮಿಟಿ ಸಭೆ ಕರೆದ ಪಾಕ್‌ ಪ್ರಧಾನಿ: ಭಾರತದ ಇಂಡಸ್ ನಿರ್ಧಾರದ ಬೆನ್ನಲ್ಲಿಯೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಗುರುವಾರ ಬೆಳಿಗ್ಗೆ ರಾಷ್ಟ್ರೀಯ ಭದ್ರತಾ ಸಮಿತಿಯ (NSC) ತುರ್ತು ಸಭೆ ಕರೆದಿದ್ದಾರೆ. ಈ ಪ್ರಕಟಣೆಯನ್ನು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು X ನಲ್ಲಿ ತಡರಾತ್ರಿ ಪೋಸ್ಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.

Indus Water Treaty: ಬಾಂಬ್‌ಗೂ ಮುನ್ನ ಪಾಕಿಸ್ತಾನದ ಮೇಲೆ ಬಿತ್ತು ಜಲಬಾಂಬ್‌, ಯಾಕಂದ್ರೆ ಇಂಡಸ್‌ ಇಲ್ಲದೆ ಪಾಕ್‌ ಇಲ್ಲ!

 

ಪಾಕಿಸ್ತಾನದ ಭದ್ರತೆ ಮತ್ತು ವಿದೇಶಾಂಗ ನೀತಿ ವಿಷಯಗಳಿಗೆ ಸಂಬಂಧಿಸಿದ ಅತ್ಯುನ್ನತ ವೇದಿಕೆಯಾದ NSC, ಅಧಿಕೃತ ಪ್ರತಿಕ್ರಿಯೆಯನ್ನು ರೂಪಿಸಲು ಸಭೆ ಸೇರಲಿದೆ. NSC ಸೇನಾ ಮುಖ್ಯಸ್ಥರು, ಗುಪ್ತಚರ ಮುಖ್ಯಸ್ಥರು ಮತ್ತು ಪ್ರಮುಖ ಕ್ಯಾಬಿನೆಟ್ ಮಂತ್ರಿಗಳನ್ನು ಒಳಗೊಂಡಿದೆ.

Breaking: ಪಾಕ್‌ ಮೇಲೆ ಮೋದಿ ಜಲಬಾಂಬ್‌, ಭಾರತದಲ್ಲಿನ ಪಾಕ್‌ ಪ್ರಜೆಗಳಿಗೆ ದೇಶ ಬಿಡಲು 48 ಗಂಟೆ ಗಡುವು!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್