ಕೊರೋನಾ ವೈರಸ್ ಭಾರತದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತವನ್ನು ಎಚ್ಚರಿಸಿದ್ದಾರೆ. ಕೊರೋನಾ ವೈರಸ್ ಎದುರಿಸುವಲ್ಲಿ ಭಾರತ ವಿಫಲವಾಗುತ್ತಿದೆ ಎಂದಿದ್ದಾರೆ. ಟ್ರಂಪ್ ಮಾತುಗಳ ವಿವರ ಇಲ್ಲಿದೆ.
ವಾಶಿಂಗ್ಟನ್(ಆ.04): ಕೊರೋನಾ ವೈರಸ್‌ಗೆ ನಲುಗಿದ ದೇಶದಲ್ಲಿ ಅಮೆರಿಕ ಕೂಡ ಒಂದು. ಸುಸಜ್ಜಿತ ಆಸ್ಪತ್ರೆ, ಸಂಪತ್ತು ಎಲ್ಲವೂ ಇದ್ದ ಅಮೆರಿಕ ಕೊರೋನಾ ಅಬ್ಬರಕ್ಕೆ ಬೆಚ್ಚಿ ಬಿದ್ದಿತ್ತು. ಆದರೆ ಸದ್ಯ ಅಮೆರಿಕದಲ್ಲಿ ಕೊರೋನಾ ಹರಡುವಿಕೆ ಪ್ರಮಾಣ ತಗ್ಗುತ್ತಿದೆ. ಆದರೆ ಆರಂಭಿಕ ದಿನದಲ್ಲಿ ಬಹುತೇಕ ನಿಯಂತ್ರಣದಲ್ಲಿದ್ದ ಭಾರತದಲ್ಲಿ ಇದೀಗ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಮೆರಿಕ ಹಾಗೂ ಭಾರತದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ.
ಕೊರೋನಾ ವೈರಸ್ ವೀಕ್ನೆಸ್ ಪತ್ತೆ ಹಚ್ಚಿದ ರಷ್ಯಾ; ಶೇ.99.9 ವೈರಸ್ ನಾಶಕ್ಕಿದೆ ಸುಲಭ ದಾರಿ!.
undefined
ಕೊರೋನಾ ವೈರಸ್‌ನ್ನು ಸಶಕ್ತವಾಗಿ ಎದುರಿಸದ ದೇಶಗಳ ಪೈಕಿ ಅಮೆರಿಕ ಮುಂಚೂಣಿಯಲ್ಲಿದೆ. ಕೊರೋನಾ ವಿರುದ್ಧ ಅಮೆರಿಕ ಹೋರಾಟ ಸಫಲವಾಗುತ್ತಿದೆ. ಆದರೆ ಭಾರತ ತೀವ್ರ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಹಿನ್ನೆಡೆ ಅನುಭವಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದಲ್ಲಿ 6 ಕೋಟಿಗೂ ಅಧಿಕ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರ್ಯಾಪಿಡ್ ಟೆಸ್ಟ್ ಕಿಟ್ ಮೂಲಕ 10 ರಿಂದ 15 ನಿಮಿಷದೊಳಗೆ ಕೋವಿಡ್ ಪರೀಕ್ಷಾ ಫಲಿತಾಂಶ ಬರಲಿದೆ. ಹೀಗಾಗಿ ಸೋಂಕು ಹರಡುವಿಕೆಯನ್ನು ತಡೆಯಲು ಯಶಸ್ವಿಯಾಗುತ್ತಿದೆ. ಇದರಿಂದ ಅಮೆರಿಕದಲ್ಲಿ ಕೊರೋನಾ ವೈರಸ್ ಹರಡುವಿಕೆ ಪ್ರಮಾಣ ಶೇಕಡಾ 6 ರಷ್ಟು ಇಳಿಕೆಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ, ಚೀನಾ ಸೇರಿದಂತೆ ಇತರ ದೇಶಗಳಲ್ಲಿ ಕೊರೋನಾ ವೈರಸ್ ಮತ್ತೆ ಹರಡುತ್ತಿದೆ. ಆದರೆ ಅಮೆರಿಕದಲ್ಲಿ ಇಳಿಮುಖವಾಗುತ್ತಿದೆ. ಅಮೆರಿಕ ಸಹಜ ಸ್ಥಿತಿಗೆ ಮರಳುತ್ತಿದೆ. ಕಚೇರಿಗಳು, ಕೆಲಸ ಕಾರ್ಯಗಳು ಆರಂಭಗೊಂಡಿದೆ. ಇದು ಅಮೆರಿಕ ಕೊರೋನಾ ವಿರುದ್ಧ ಹೋರಾಡಿದ ರೀತಿಯನ್ನು ಹೇಳುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.