* ಅಗತ್ಯ ಬಿದ್ದರೆ ಪ್ರತೀಕಾರ ಕ್ರಮ: ಬ್ರಿಟನ್‌ಗೆ ಎಚ್ಚರಿಕೆ
* ಬ್ರಿಟನ್‌ನ ತಾರತಮ್ಯ ಕ್ವಾರಂಟೈನ್ ನೀತಿಗೆ ಭಾರತದಿಂದ ಆಕ್ಷೇಪ
ನವದೆಹಲಿ(ಸೆ.22): ‘ಭಾರತೀಯರು 2 ಡೋಸ್ ಕೋವಿಶೀಲ್ಡ್(Covishield) ಲಸಿಕೆ ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್(Quarantine) ಆಗಬೇಕು’ ಎಂಬ ಬ್ರಿಟನ್ ಸರ್ಕಾರದ ನೂತನ ನಿಯಮ ತಾರತಮ್ಯದಿಂದ ಕೂಡಿದ್ದಾಗಿದೆ ಎಂದು ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ‘ಒಂದು ವೇಳೆ ಭಾರತದ ಮನವಿಗೆ ಬ್ರಿಟನ್ ಸ್ಪಂದಿಸದೇ ಇದ್ದರೆ ಪ್ರತಿಯಾಗಿ ಕ್ರಮಗಳನ್ನು ಕೈಗೊಳ್ಳಬೇಕಾದೀತು’ ಎಂದು ಎಚ್ಚರಿಸಿದೆ.
ಲಸಿಕೆ ಪಡೆದರೂ ಬ್ರಿಟನ್‌ಗೆ ಹೋಗೋ ಭಾರತೀಯರಿಗೆ ಸಂಕಷ್ಟ!
undefined
ಬ್ರಿಟನ್ ವಿದೇಶಾಂಗ ಸಚಿವಾಲಯದ ಜೊತೆಗಿನ ಸಭೆಯ ವೇಳೆ ಮಂಗಳವಾರ ಈ ವಿಷಯ ಪ್ರಸ್ತಾಪಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್(Jaishankar), ‘ಕ್ವಾರಂಟೈನ್‌ಗೆ ಸಂಬಂಧಿಸಿದ ಸಂಗತಿಯನ್ನು ಆದಷ್ಟು ಶೀಘ್ರ ಬಗೆಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಭಾರತದಲ್ಲಿ ಬಳಕೆ ಆಗುತ್ತಿರುವ ಕೋವಿಶೀಲ್ಡ್ ಲಸಿಕೆಯ ಮೂಲ ಬ್ರಿಟನ್. ನಾವು 50 ಲಕ್ಷ ಡೋಸ್ ಲಸಿಕೆಯನ್ನು ಬ್ರಿಟನ್‌ಗೆ ಪೂರೈಕೆ ಮಾಡಿದ್ದೇವೆ. ಅದು ಬ್ರಿಟನ್‌ನ ಆರೋಗ್ಯ ವ್ಯವಸ್ಥೆಯಲ್ಲಿ ಬಳಕೆ ಆಗುತ್ತಿದೆ. ಹೀಗಿದ್ದೂ ಕೋವಿಶೀಲ್ಡ್‌ಗೆ ಮಾನ್ಯತೆ ನೀಡದೇ ಇರುವುದು ತಾರತಮ್ಯದ ನಡೆಯಾಗಿದೆ. ಬ್ರಿಟನ್(Britain) ವಿದೇಶಾಂಗ ಸಚಿವಾಲಯ ಜೊತೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಸಮಸ್ಯೆಯನ್ನು ಆದಷ್ಟುಶೀಘ್ರ ಬಗೆಹರಿಸುವ ಆಶ್ವಾಸನೆ ದೊರೆತಿದೆ’ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.