ಪಾಕ್‌ ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಥಳಿತ!

By Suvarna NewsFirst Published Sep 21, 2021, 12:50 PM IST
Highlights

* ಮಸೀದಿಯಿಂದ ಕುಡಿಯುವ ನೀರನ್ನು ತೆಗೆದುಕೊಂಡು ಬಂದಿದ್ದಕ್ಕೆ ಥಳಿತ

* ಪಾಕ್‌ ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಥಳಿತ

* ಕಾರ್ಮಿಕ ಕುಟುಂಬವನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಿಂಸೆ

ಇಸ್ಲಮಾಬಾದ್‌(ಸೆ.21): ಮಸೀದಿಯಿಂದ ಕುಡಿಯುವ ನೀರನ್ನು ತೆಗೆದುಕೊಂಡು ಬಂದಿದ್ದಕ್ಕೆ ಹಿಂದೂ ಕುಟುಂಬವನ್ನು ಥಳಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ. ಆನಂತರವೂ ಸ್ಥಳೀಯ ಜಮೀನ್ದಾರರು ಆ ಕುಟುಂಬವನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದ್ದಾರೆ.

ಪಂಜಾಬ್‌ ಪ್ರಾಂತ್ಯದಲ್ಲಿ ಹತ್ತಿ ಕೀಳುವ ಕಾಯಕ ಮಾಡುವ ಅಲಾಂ ರಾಮ್‌ ಬೀಲ್‌ ಎನ್ನುವ ವ್ಯಕ್ತಿಯ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ. ‘ತುಂಬಾ ಬಾಯಾರಿದ್ದರಿಂದ ನೀರು ಕುಡಿಯಲು ಮಸೀದಿಯ ಒಳಗೆ ಹೋಗಿದ್ದೆವು, ಆಗ ಸ್ಥಳೀಯ ಜಮೀನ್ದಾರರು ಅವರ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದೆವು ಎಂದು ನಮ್ಮನ್ನು ಥಳಿಸಿದರು. ಹತ್ತಿ ಕೀಳುವ ಕೆಲಸ ಮುಗಿಸಿ ಹೋಗುವಾಗ ಮತ್ತೆ ಇದೇ ವಿಷಯಕ್ಕೆ ನಮ್ಮನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದರು’ ಎಂದು ಬೀಲ್‌ ಹೇಳಿದ್ದಾರೆ.

ದುಷ್ಕರ್ಮಿಗಳು ಸ್ಥಳಿಯ ಸಂಸದ, ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೇಕಾದವರು ಎಂಬ ಕಾರಣಕ್ಕೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಘಟನೆಯ ಬಗ್ಗೆ ಪಂಜಾಬ್‌ ಪ್ರಾಂತ್ಯದ ಅಲ್ಪಸಂಖ್ಯಾತರ ನಿಗ​ಮ​ದ ಅಧ್ಯಕ್ಷರಿಗೆ ತಿಳಿದಿದ್ದರೂ, ಆಡಳಿತ ಪಕ್ಷಕ್ಕೆ ಹೆದರಿ ಪ್ರಕರಣದಿಂದ ದೂರ ಉಳಿದಿದ್ದಾರೆ ಎಂದು ಆರೋಪ ಮಾಡಲಾಗಿದೆ.

click me!