ಮಾಸ್ಕ್ ಧರಿಸದ ಮಂದಿಗೆ ಕೊರೋನಾದಿಂದ ಸತ್ತವರ ದೇಹ ಹೂಳುವ ಗುಂಡಿ ತೋಡುವ ಶಿಕ್ಷೆ!

By Suvarna NewsFirst Published Sep 15, 2020, 8:51 PM IST
Highlights

ಕೊರೋನಾ ವೈರಸ್ ನಿಯಮ ಉಲ್ಲಂಘನೆ ಮಾಡುವವರಿಗೆ ಇಂಥದ್ದೆ ಶಿಕ್ಷೆ ನೀಡಬೇಕು/ ಮಾಸ್ಕ್ ಧರಿಸದ ಮಹಾಮಹಿಮರಿಗೆ ಗುಂಡಿ ತೋಡುವ ಶಿಕ್ಷೆ/ ಇಂಡೋನೇಷಿಯಾದಲ್ಲಿ ಅದ್ಭುತ ತೀರ್ಮಾನ ತೆಗೆದುಕೊಂಡ ಜಿಲ್ಲಾಧಿಕಾರಿ

ಇಂಡೋನೆಷಿಯಾ( ಸೆ. 15)  ಕೊರೋನಾ ಸಾಮಾಜಿಕ ಅಂತರ ಮುರಿದರೆ, ಮಾಸ್ಕ್ ಧರಿಸದೆ ಇದ್ದರೆ ಇಲ್ಲಿ  ಎಂಥಾ ಶಿಕ್ಷೆ ನೀಡ್ತಾ ಇದ್ದಾರೆ, ಗೊತ್ತಾ? ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದವರಿಗೆ ಕೊರೋನಾ ಕಾರಣಕ್ಕೆ ಸಾವಿಗೀಡಾದವರ ಹೆಣ ಹೂಳುವ ಗುಂಡಿ ತೋಡುವ ಶಿಕ್ಷೆ ನೀಡಲಾಗಿದೆ. ನಮ್ಮ ದೇಶದಲ್ಲಿಯೂ ಬಂದರೆ ಚೆನ್ನ ಅಂತೀರಾ!

ಇಂಡೋನೆಷಿಯಾದ ಗೆರ್ಸಿಕ್ ರೆಜೆನ್ಸಿಯಲ್ಲಿ ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದವರಿಗೆ ಹೆಣ ಹೂಳುವ ಗುಂಡಿ ತೋಡುವ ಶಿಕ್ಷೆ ನೀಡಲಾಗಿದೆ.  ಹೆಣ ಹೂಳುವ ಗುಂಡಿ ತೋಡಲು ಮೂವರು ಕಾರ್ಮಿಕರು ಮಾತ್ರ ಲಭ್ಯವಿದ್ದರು, ಅದೆ ವೇಳೆ ಸಾಮಾಜಿಕ ಅಂತರ ಮರೆತ ಇವರು ಸಿಕ್ಕಾಕಿಕೊಂಡರು. ಇವರನ್ನು ಕೆಲಸಕ್ಕೆ ಹಚ್ಚಿದೆವು ಎಂದು ಜಿಲ್ಲಾ ಆಡಳಿತಾಧಿಕಾರಿ ಸುಯೋನೋ ತಿಳಿಸಿದ್ದಾರೆ.

ಕೊರೋನಾ ಚಿಕಿತ್ಸೆಗಾಗಿ ಪಿಪಿಇ ಕಿಟ್ ಧರಿಸಿ ಬೈಕ್ ಸವಾರಿ

ಇಬ್ಬರಿಗೆ ಗುಂಡಿ ತೋಡುವ ಕೆಲಸ ನೀಡಿದ್ದರೆ ಒಬ್ಬನಿಗೆ ಅದರ ಮೇಲ್ವಿಚಾರಣೆ ವಹಿಸಿಕೊಳ್ಳಲು ತಿಳಿಸಲಾಗಿದೆ. ಒಟ್ಟಿನಲ್ಲಿ ಮಾಸ್ಕ್ ತೊಡದ ಅಪರಾಧ ಮಾಡಿದ್ದರೆ ನಮ್ಮಲ್ಲಿ ದಂಡ ಹಾಕುತ್ತಾರೆ. ಆದರೆ ಇಂಡೋನೆಷಿಯಾದಲ್ಲಿ ಹೆಣ ಹೂಳುವ ಗುಂಡಿ ತೋಡಲು  ಹಚ್ಚಿದ್ದಾರೆ. 
 
ಅನ್ ಲಾಕ್ ನಂತರ ಕೊರೋನಾ ನಿಯಮಗಳು ಸಡಿಲಿಕೆ ಆಗಿದೆ.  ಸರ್ಕಾರ ನಿಯಮ ಸಡಿಲ ಮಾಡಿರಬಹುದು ಆದರೆ ಕೊರೋನಾ ಅಲ್ಲ ಎನ್ನುವುದು ಮಾತ್ರ ನಿಶ್ಚಿತ. ಪ್ರತಿ ದಿನ ಪ್ರಕರಣಗಳ ಸಂಖ್ಯೆ ಏರುತ್ತಲೇ ಇರುವುದು ಸಾಕ್ಷಿ.

click me!