ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ದೇಶಗಳು ಇದೀಗ ಲಸಿಕೆಯನ್ನು ಎದುರನೋಡುತ್ತಿದೆ. ಇದರ ನಡುವೆ ಭಾರತ ಸೇರಿದಂತೆ ಹಲವು ದೇಶಗಳು ಕೊರೋನಾ ಲಸಿಕೆ ಪ್ರಯೋಗ ಮಾಡುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಲಭ್ಯವಾಗಲಿದೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ. ಆದರೆ ಚೀನಾ ನಿರ್ಮಿತ ಕೊರೋನಾ ಲಸಿಕೆ ಇದೇ ನವೆಂಬರ್ ತಿಂಗಳಲ್ಲಿ ಲಭ್ಯವಾಗಲಿದೆ
ಬೀಜಿಂಗ್(ಸೆ.15): ಕೊರೋನಾ ವೈರಸ್ ಲಸಿಕೆ ಕುರಿತು ಚೀನಾ ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ. ಚೀನಾ ಸಂಶೋಧಿಸಿದ ಕೊರೋನಾ ಲಸಿಕೆ ಇದೇ ನವೆಂಬರ್ ತಿಂಗಳಲ್ಲಿ ಬಳಕೆಗೆ ಲಭ್ಯವಾಗಲಿದೆ ಎಂದು ಚೀನಾದ ರೋಗ ನಿಯಂತ್ರಣ ಹಾಗೂ ಆರೋಗ್ಯ ಕಾಪಾಡುವಿಕೆ ಸೆಂಟರ್(CDC) ಹೇಳಿದೆ. ಚೀನಾ ಸಂಶೋಧಿಸಿರುವ ಲಸಿಕೆ ಇದೀಗ ಅಂತಿಮ ಹಂತದ ಪ್ರಯೋಗದಲ್ಲಿದೆ.
ಕೊರೋನಾ ನಿಯಂತ್ರಣ ಮಾಡಲು ಭಾರತದ ನೆರವು ವಿಶ್ವಕ್ಕೆ ಅಗತ್ಯವಿದೆ: ಬಿಲ್ ಗೇಟ್ಸ್!.
undefined
ಫೇಸ್ 3 ಕ್ಲಿನಿಕಲ್ ಟ್ರಯಲ್ ಬಹುತೇಕ ಯಶಸ್ವಿಯಾಗಿದೆ. ತುರ್ತು ಬಳಕೆ ಯೋಜನೆಯಡಿ ಈಗಾಗಲೇ ಕೆಲವರಿಗೆ ಈ ಔಷಧ ನೀಡಲಾಗಿದ್ದು ಯಶಸ್ವಿಯಾಗಿದೆ. ಇನ್ನು ಅಡ್ಡ ಪರಿಣಾಮ ಕುರಿತು ಅಧ್ಯಯನ ನಡೆಸಲಾಗಿದೆ. ಎಲ್ಲಾ ರೀತಿಯಿಂದಲೂ ಚೀನಾದ ಕೊರೋನಾ ಲಸಿಕೆ ಬಳಕೆಗೆ ಯೋಗ್ಯವಾಗಿದೆ. ಅಂತಿಮ ಹಂತದಲ್ಲಿ ಪ್ರಯೋಗ ನಡೆಯುತ್ತಿದ್ದು, ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು CDC ಹೇಳಿದೆ.
ಕರ್ನಾಟಕದ 30 ಜಿಲ್ಲೆಗಳಲ್ಲೂ ಕೊರೋನಾ: ಇಲ್ಲಿದೆ ಮಂಗಳವಾರದ ಅಂಕಿ-ಸಂಖ್ಯೆ
ಪ್ರಾಯೋಗಿಕ ಲಸಿಕೆ ಬಳಕೆ ಬಳಿಕ ಯಾವುದೇ ಅಸಹಜ ಲಕ್ಷಣ ಕಂಡುಬಂದಿಲ್ಲ. ಯಾವುದೇ ದೋಷವೂ ಕಂಡುಬಂದಿಲ್ಲ. ಹೀಗಾಗಿ ಬಳಕೆಗೆ ಸೂಕ್ತವಾಗಿದೆ ಎಂದು CDC ಮುಖ್ಯಸ್ಥ ಗೈಝೆನ್ ವು ಹೇಳಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಗೈಝೆನ್ ವು ಸ್ವತಃ ಕೊರೋನಾ ಲಸಿಕೆ ತೆಗೆದುಕೊಂಡಿದ್ದರು.
ಜುಲೈ ತಿಂಗಳಲ್ಲಿ ಕೊರೋನಾ ಲಸಿಕೆ ರೆಡಿಯಾಗಿದೆ. ಆದರೆ ಬಳಕೆಗೆ ನವೆಂಬರ್ ತಿಂಗಳ ವರೆಗೆ ಕಾಯಬೇಕು ಎಂದು CDC ಹೇಳಿದೆ. ವಿಶ್ವದ ಹಲವು ರಾಷ್ಟ್ರಗಳು ಕೊರೋನಾ ವೈರಸ್ ವಿರುದ್ಧ ಪರಿಣಾಮಕಾ ಲಸಿಕೆ ಸಂಶೋಧನೆ ನಡೆಸುತ್ತಿದ್ದಾರೆ. ಹಲವು ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಕೊರೋನಾ ಲಸಿಕೆ ಸಂಶೋಧನೆ ಹಾಗೂ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ.