CAA ಜಾರಿಯ ಕಾರಣ ಹೇಳಿದ ಪಾಕ್ ಪ್ರಧಾನಿ| ‘ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು CAA ಜಾರಿ’| ‘ಮೋದಿ ಸರ್ಕಾರದಡಿಯಲ್ಲಿ ಭಾರತ ಪ್ಯಾಸಿಸ್ಟ್ ಸಿದ್ದಾಂತವನ್ನು ಅಪ್ಪಿಕೊಂಡಿದೆ’| ಬಹುತ್ವ ಭಾರತ ಬಯಸುವ ಭಾರತೀಯರಿಂದ CAA ವಿರುದ್ಧ ಪ್ರತಿಭಟನೆ|
ಇಸ್ಲಾಮಾಬಾದ್(ಡಿ.22): ದೇಶದಲ್ಲಿನ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಮೋದಿ ಸರ್ಕಾರದಡಿಯಲ್ಲಿ ಭಾರತ ಪ್ಯಾಸಿಸ್ಟ್ ಸಿದ್ದಾಂತವನ್ನು ಅಪ್ಪಿಕೊಂಡಿದ್ದು, ಹಿಂದೂ ರಾಷ್ಟ್ರದ ಕಡೆಗೆ ಸಾಗುತ್ತಿದೆ ಎಂದು ಇಮ್ರಾನ್ ಖಾನ್ ಸರಣಿ ಟ್ವಿಟ್ ಮೂಲಕ ಕಿಡಿಕಾರಿದ್ದಾರೆ.
undefined
ಮೋದಿ ಪ್ರತಿಕೃತಿ ಸುಡಿ, ಸಾರ್ವಜನಿಕ ಆಸ್ತಿಯನ್ನಲ್ಲ: ಪ್ರಧಾನಿ!
ಪೌರತ್ವ ತಿದ್ದುಪಡಿ ಕಾಯ್ದೆಯೊಂದಿಗೆ ಬಹುತ್ವ ಭಾರತ ಬಯಸುವವರು ಪ್ರತಿಭಟನೆಗೆ ಇಳಿದಿದ್ದು, ಇದು ಆಂದೋಲನವಾಗಿ ರೂಪುಗೊಳ್ಳುತ್ತಿದೆ ಎಂದು ಇಮ್ರಾನ್ ಅಭಿಪ್ರಾಯಪಟ್ಟಿದ್ದಾರೆ.
At the same time the siege by Indian Occupation forces in IOJK continues & a bloodbath can be expected when it is lifted. As these protests are increasing, threat to Pak from India is also increasing. Indian Army Chief's statement adds to our concerns of a False Flag ooperation
— Imran Khan (@ImranKhanPTI)ಭಾರತದಿಂದ ಪಾಕಿಸ್ತಾನಕ್ಕೆ ಬೆದರಿಕೆ ಹೆಚ್ಚಾಗಿದ್ದು, ಈ ಬೆದರಿಕೆಯನ್ನು ಪಾಕಿಸ್ತಾನ ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಎದೆ ಬಗೆದರೆ ಎರಡಕ್ಷರ ಇಲ್ಲದವರಿಂದ ಪ್ರತಿಭಟನೆ : ಪೌರತ್ವದ ಕಿಚ್ಚಿಗೆ ತೇಜಸ್ವಿ ತುಪ್ಪ!
ಭಾರತ ಯಾವುದೇ ರೀತಿಯ ಪ್ರಚೋದನಾತ್ಮಕ ಕ್ರಮಕ್ಕೆ ಮುಂದಾದರೆ ಸೂಕ್ತ ಪ್ರತ್ಯುತ್ತರ ನೀಡಲು ಪಾಕಿಸ್ತಾನ ಸಶಕ್ತವಾಗಿದೆ ಎಂದು ಪಾಕ್ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.