ಇರಾನ್ ಇಷ್ಟವಾದ್ರೆ ಅಲ್ಲೇ ಹೋಗಿ: ಶಿಯಾ ಮುಸ್ಲಿಮರ ಮೇಲೆ ಪಾಕ್ ಸೇನಾ ಮುಖ್ಯಸ್ಥ ಗರಂ ಆಗಿದ್ದು ಏಕೆ? ಇಫ್ತರ್ ಕೂಟದಲ್ಲಿ ನಡೆದಿದ್ದೇನು?

Published : Mar 22, 2026, 10:43 AM IST
If you Love iran go to there Pakistan Army Chief Asim Munir  Warns Shia Muslims

ಸಾರಾಂಶ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್, ಇರಾನ್ ಪರ ಒಲವು ಹೊಂದಿರುವ ಶಿಯಾ ಮುಸ್ಲಿಮರಿಗೆ 'ಇರಾನ್‌ಗೆ ಹೋಗಿ' ಎಂದು ತಾಕೀತು ಮಾಡಿದ್ದಾರೆ. ಇಫ್ತಾರ್ ಕೂಟದಲ್ಲಿ ನಡೆದ ಈ ಘಟನೆಯಿಂದ ಕೆರಳಿರುವ ಶಿಯಾ ಸಮುದಾಯ, ಸೇನಾ ಮುಖ್ಯಸ್ಥರಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದೆ.

ಇಸ್ಲಾಮಾಬಾದ್ (ಮಾ.22): ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಶಿಯಾ ಮುಸ್ಲಿಮರು ಮತ್ತು ಸೇನಾ ಮುಖ್ಯಸ್ಥರ ನಡುವಿನ ಸಂಘರ್ಷ ತಾರಕಕ್ಕೇರಿದೆ. 'ನಿಮಗೆ ಇರಾನ್ ದೇಶದ ಮೇಲೆ ಅಷ್ಟೊಂದು ಒಲವಿದ್ದರೆ, ಅಲ್ಲಿಗೇ ಹೋಗಿ ನೆಲೆಸಿ' ಎಂದು ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್ ನೇರವಾಗಿಯೇ ತಾಕೀತು ಮಾಡಿದ್ದಾರೆ.

ಇಫ್ತಾರ್ ಕೂಟದಲ್ಲಿ ಅವಮಾನ

ಮಾರ್ಚ್ 19 ರಂದು ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿಯಾ ಮುಸ್ಲಿಮರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಯಿತು ಎಂಬ ಆರೋಪ ಕೇಳಿಬಂದಿದೆ. 'ನೀವು ಪಾಕಿಸ್ತಾನದಲ್ಲಿದ್ದರೂ ಇರಾನ್ ಪರವಾಗಿಯೇ ಒಲವು ಹೊಂದಿದ್ದೀರಿ' ಎಂದು ಸೇನಾ ಮುಖ್ಯಸ್ಥರು ಶಿಯಾಗಳ ಮೇಲೆ ಗಂಭೀರ ಆರೋಪ ಮಾಡಿದರು ಎನ್ನಲಾಗಿದೆ.

ಧಾರ್ಮಿಕ ಮುಖಂಡರ ಪ್ರಶ್ನೆಗೆ ಖಡಕ್ ಎಚ್ಚರಿಕೆ

ಸೇನಾ ಮುಖ್ಯಸ್ಥರ ಈ ಆರೋಪಗಳನ್ನು ಕೆಲವು ಶಿಯಾ ಧಾರ್ಮಿಕ ಮುಖಂಡರು ಪ್ರಶ್ನಿಸಿ ಧ್ವನಿ ಎತ್ತಿದರು. ಈ ವೇಳೆ ಅಸೀಂ ಮುನೀರ್ ಕೆರಳಿದ್ದು, 'ನಿಮಗೆ ಇರಾನ್ ಅಷ್ಟೊಂದು ಇಷ್ಟವಾಗಿದ್ದರೆ ಇಲ್ಲಿರಬೇಡಿ, ಅಲ್ಲಿಗೇ ಹೋಗಿ ನೆಲೆಸಿ' ಎಂದು ಎಚ್ಚರಿಕೆ ಧಾಟಿಯಲ್ಲಿ ಹೇಳಿರುವುದು ವರದಿಯಾಗಿದೆ. ಇದು ಸಮುದಾಯದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.

ಪಾಕ್ ಸೇನೆಗೆ ಪಾಠ ಕಲಿಸುವ ಎಚ್ಚರಿಕೆ

ಸೇನಾ ಮುಖ್ಯಸ್ಥರ ಈ ವಿವಾದಾತ್ಮಕ ಹೇಳಿಕೆಯು ಪಾಕಿಸ್ತಾನದ ಶಿಯಾ ಮುಸ್ಲಿಮರನ್ನು ಕೆರಳಿಸಿದೆ. ಮುಂಬರುವ ದಿನಗಳಲ್ಲಿ ಸೇನಾ ಮುಖ್ಯಸ್ಥರಿಗೆ ತಕ್ಕ ಪಾಠ ಕಲಿಸುವುದಾಗಿ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಒಟ್ಟು 24 ಕೋಟಿ ಜನಸಂಖ್ಯೆಯಲ್ಲಿ ಶೇ. 90ಕ್ಕೂ ಹೆಚ್ಚು ಸುನ್ನಿ ಮುಸ್ಲಿಮರಿದ್ದು, ಅಲ್ಪಸಂಖ್ಯಾತ ಶಿಯಾಗಳು ಸದಾ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪವಿದೆ.

ಅಂತರಾಷ್ಟ್ರೀಯ ರಾಜಕೀಯದ ನಂಟು

ಸದ್ಯ ಪಾಕಿಸ್ತಾನ ಸರ್ಕಾರವು ಇರಾನ್ ವಿರೋಧಿ ಧೋರಣೆ ಹೊಂದಿರುವ ಕೊಲ್ಲಿ ದೇಶಗಳ ಜೊತೆ ಉತ್ತಮ ಸಂಬಂಧ ಹೊಂದಿದೆ. ಆದರೆ, ಶಿಯಾ ಮುಸ್ಲಿಮರು ಇರಾನ್ ಪರವಾಗಿ ನಿಂತಿರುವುದು ಸರ್ಕಾರದ ಮತ್ತು ಸೇನೆಯ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Trudeau: ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ; ಕೆನಡಾ ಮಾಜಿ ಪ್ರಧಾನಿ ಟ್ರೂಡೋ ಆರೋಪ ಅವಿವೇಕತನದ್ದು ಎಂದ ಮಾಜಿ ರಾಯಭಾರಿ
ಇರಾನ್‌ ತೈಲದ ಮೇಲಿನ ಅಮೆರಿಕ ನಿರ್ಬಂಧ ತೆರವು - ವೈರಿ ದೇಶದ ಬಗ್ಗೆ ಮೆತ್ತಗಾದರೆ ಟ್ರಂಪ್‌?