ಇರಾನ್-ಅಮೆರಿಕ ನಡುವೆ ಯುದ್ಧ ಆರಂಭದ ಮುನ್ಸೂಚನೆ| ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ?| ಇರಾಕ್‌ನಲ್ಲಿರುವ ಸೇನಾ ನೆಲೆಗಳ ಮೇಲೆ 15 ಕ್ಷಿಪಣಿ ದಾಳಿ ನಡೆಸಿದ ಇರಾನ್?| ಅಮೆರಿಕದ ಸೇನಾ ಹೆಲಿಕಾಪ್ಟರ್‌ಗಳು ಹಾಗೂ ಮಿಲಿಟರಿ ಉಪಕರಣಗಳಿಗೆ ಹಾನಿ?| ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಖಚಿತಪಡಿಸಿದ ಇರಾನ್ ಸರ್ಕಾರಿ ಮಾಧ್ಯಮ| ಇರಾನ್ ದಾಳಿಯನ್ನು ನಿರಾಕರಿಸಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್| ಆಲ್ ಇಸ್ ವೆಲ್ ಎಂದು ಟ್ವೀಟ್ ಮಾಡಿದ ಡೋನಾಲ್ಡ್ ಟ್ರಂಪ್|
ಬಾಗ್ದಾದ್(ಜ.08): ಇರಾಕ್‌ನಲ್ಲಿ ಬೀಡು ಬಿಟ್ಟಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ ಎನ್ನಲಾಗಿದ್ದು, ದಾಳಿಯಲ್ಲಿ ಸುಮಾರು 80 'ಅಮೆರಿಕನ್ ಭಯೋತ್ಪಾದಕರು'(ಸೈನಿಕರು) ಮೃತಪಟ್ಟಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮ ಹೇಳಿದೆ.
ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಒಟ್ಟು 15 ಮಿಸೈಲ್‌ಗಳಿಂದ ದಾಳಿ ನಡೆಸಲಾಗಿದ್ದು, ಎಲ್ಲ ಮಿಸೈಲ್‌ಗಳೂ ಗುರಿ ತಲುಪುವಲ್ಲಿ ಯಶಸ್ವಿಯಾಗಿವೆ ಎಂದು ಇರಾನ್ ಸೇನಾ ಮೂಲಗಳು ಖಚಿತಪಡಿಸಿವೆ.
The moment missiles targeting US airbase in Iraq in retaliation for General Soleimani assassination pic.twitter.com/wa3tYIUhud
— Iran (@Iran)ಅಲ್ಲದೇ ಒಂದು ವೇಳೆ ಅಮೆರಿಕ ಈ ದಾಳಿಗೆ ಪ್ರತಿಯಾಗಿ ಇರಾನ್ ಮೇಲೆ ದಾಳಿಗೆ ಮುಂದಾದರೆ ಮತ್ತೆ 100 ಅಮೆರಿಕನ್ ಸೇನಾ ನೆಲೆಗಳು ನಮ್ಮ ಕ್ಷಿಪಣಿಗಳ ದಾಳಿಗೆ ಬಲಿಯಾಗಲಿವೆ ಎಂದೂ ಸೇನಾ ಎಚ್ಚರಿಸಿದೆ.
ಇರಾನ್ ಹಿಟ್‌ಲಿಸ್ಟ್‌ನಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಆಸ್ತಿಗಳು!
ದಾಳಿಯಲ್ಲಿ ಅಮೆರಿಕದ ಸೇನಾ ಹೆಲಿಕಾಪ್ಟರ್‌ಗಳು ಹಾಗೂ ಮಿಲಿಟರಿ ಉಪಕರಣಗಳಿಗೆ ಹಾನಿಯಾಗಿದೆ ಎಂದು ಇರಾನ್ ವಾದ ಮಂಡಿಸಿದೆ. ಖಾಸಿಂ ಸುಲೈಮನಿ ಹತ್ಯೆಗೆ ಇದು ನಮ್ಮ ಪ್ರತಿಕ್ರಿಯೆ ಎಂದು ಇರಾನ್ ದಾಳಿಯನ್ನು ಸಮರ್ಥಿಸಿಕೊಂಡಿದೆ.
ಆಲ್ ಇಸ್ ವೆಲ್ ಎಂದ ಅಮೆರಿಕ ಅಧ್ಯಕ್ಷ:
All is well! Missiles launched from Iran at two military bases located in Iraq. Assessment of casualties & damages taking place now. So far, so good! We have the most powerful and well equipped military anywhere in the world, by far! I will be making a statement tomorrow morning.
— Donald J. Trump (@realDonaldTrump)ಆದರೆ ಇರಾನ್ ದಾಳಿಯನ್ನು ನಿರಾಕರಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, 15 ಕ್ಷಿಪಣಿಗಳನ್ನು ನಮ್ಮ ಸೇನಾ ನೆಲೆಗಳ ಮೇಲೆ ಹಾಕುವುದರಿಂದ ಏನೂ ವ್ಯತ್ಯಾಸವಾಗದು ಎಂದು ಹೇಳಿದ್ದಾರೆ.
ಪೆಂಟಗನ್ ಭಯೋತ್ಪಾದಕ ಸಂಘಟನೆ: ಇರಾನ್ ಸಂಸತ್ತು ಘೋಷಣೆ!
ನಮ್ಮ ಮಿಲಿಟರಿ ಸಾಮರ್ಥ್ಯದ ಅರಿವಿರದ ಇರಾನ್ ಕೇವಲ 15 ಕ್ಷಿಪಣಿಗಳನ್ನು ಎಸೆದು ಬೀಗುತ್ತಿದೆ ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಇರಾನ್ ನಡೆಸಿದ ದಾಳಿಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.