ನಿನ್ನಂಥಾ ಗಂಡ ಯಾರೂ ಇಲ್ಲ ಬುಡು: ವೇದಿಕೆ ಏರಿ ವಿನ್ನರ್ ಕಿರೀಟ ಕಿತ್ತೆಸೆದ ಪತಿರಾಯ

Published : Jun 01, 2023, 01:33 PM ISTUpdated : Jun 01, 2023, 01:36 PM IST
ನಿನ್ನಂಥಾ ಗಂಡ ಯಾರೂ ಇಲ್ಲ ಬುಡು: ವೇದಿಕೆ ಏರಿ ವಿನ್ನರ್ ಕಿರೀಟ ಕಿತ್ತೆಸೆದ ಪತಿರಾಯ

ಸಾರಾಂಶ

ಪತ್ನಿಗಾದ ಸೋಲು ಅವಮಾನವನ್ನೇ ತನಗಾಯಿತು ಎಂಬಂತೆ ಎಲ್ಲರೆದುರು ರೋಷ ತೋರಿ ಆರ್ಭಟಿಸಿದ ಪತಿಯನ್ನು ಎಲ್ಲಾದರು ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿ ನಿಮಗಾಗಿಯೇ ಒಂದು ವೀಡಿಯೋ ಇದೆ ನೋಡಿ..

ಬ್ರೆಜಿಲ್: ಪ್ರಪಂಚದಲ್ಲಿ ಎಂಥೆಂತಾ ಜನರೆಲ್ಲಾ ಇರ್ತಾರೆ ನೋಡಿ, ಕೆಲವು ಗಂಡ ಹೆಂಡತಿಯರು ಬಹಳ ಅನೋನ್ಯವಾಗಿರುತ್ತಾರೆ. ಮತ್ತೆ ಕೆಲವರು ಸದಾ ಕಿತ್ತಾಡುತ್ತಾರೆ. ಇನ್ನು ಕೆಲವರಲ್ಲಿ ಪ್ರೀತಿ ಕಿತ್ತಾಟ ಎರಡು ಸಮ ಪ್ರಮಾಣದಲ್ಲಿರುತ್ತದೆ.  ಗಂಡ ಹೆಂಡತಿ ಮಧ್ಯೆ ಪ್ರೀತಿ ಇರುತ್ತೆ ನಿಜ. ಆದರೆ ಪತ್ನಿಗಾದ ಸೋಲು ಅವಮಾನವನ್ನೇ ತನಗಾಯಿತು ಎಂಬಂತೆ ಎಲ್ಲರೆದುರು ರೋಷ ತೋರಿ ಆರ್ಭಟಿಸಿದ ಪತಿಯನ್ನು ಎಲ್ಲಾದರು ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿ ನಿಮಗಾಗಿಯೇ ಒಂದು ವೀಡಿಯೋ ಇದೆ ನೋಡಿ..

ಪತ್ನಿಯನ್ನು ಇಷ್ಟೊಂದು ಪ್ರೀತಿಸುವವರು ಇದ್ದಾರಾ?

ಅನೋನ್ಯವಾಗಿರುವ ದಂಪತಿ ತಮ್ಮ ಪತಿ ಅಥವಾ ಪತ್ನಿಯನ್ನು ಯಾರ ಮುಂದೆಯೋ ಬಿಟ್ಟು ಕೊಡುವುದಿಲ್ಲ. ಗಂಡ ಹೆಂಡಿ ಇಬ್ಬರಲ್ಲಿ ಒಬ್ಬರಿಗೆ ಅವಮಾನವಾದರೂ, ಕಷ್ಟ ಬಂದರೂ ಅದೂ ತಮಗೆ ಆಯಿತೆಂಬಂತೆ ದುಃಖ ಪಡುವ ಕೆಲ ಜೋಡಿಗಳಿದ್ದಾರೆ. ಹಾಗೆಯೇ ಇಲ್ಲೊಬ್ಬ ಗಂಡ ತನ್ನ ಹೆಂಡತಿ ಮೇಲಿನ ಪ್ರೀತಿಯಿಂದ ಅತಿರೇಕವಾಗಿ ವರ್ತಿಸಿದ್ದು, ಅದರ ವೀಡಿಯೋ ಈಗ ವೈರಲ್ ಆಗಿದೆ. 

ಸಾವಿನಲ್ಲೂ ಒಂದಾದ ದಂಪತಿ: ಪತ್ನಿ ಸಾವಿನ ಸುದ್ದಿಕೇಳಿ ಹೃದಯಾಘಾತವಾಗಿ ಗಂಡನೂ ಸಾವು

ಆಗಿದ್ದೇನು?

ಸೌಂದರ್ಯ ಸ್ಪರ್ಧೆಯೊಂದರ ವಿಜೇತರ ಘೋಷಣೆಯ ವೇಳೆ ರನ್ನರ್ ಅಪ್ ಆಗಿದ್ದ ಸ್ಪರ್ಧಾಳುವಿನ ಪತಿಯೋರ್ವ ಮಾಡಿದ ಕಿತಾಪತಿಯಿಂದಾಗಿ ಇಡೀ ಕಾರ್ಯಕ್ರಮದ ಚಿತ್ರಣವೇ ಬದಲಾದಂತಹ ಘಟನೆ ಬ್ರೆಜಿಲ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯೊಂದರಲ್ಲಿ ನಡೆದಿದೆ. 

ಅಲ್ಲಿ ಮಿಸ್ ಗೇ ಮಾಟೊ ಗ್ರೊಸೊ 2023 ರ ಸ್ಪರ್ಧೆಯ ವಿಜಯಶಾಲಿಗಳ ಘೋಷಣೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಯಾರೂ ಊಹಿಸದ ಘಟನೆಯೊಂದು ನಡೆದು ಕಾರ್ಯಕ್ರಮ ಆಯೋಜಕರೇ ಅವಕ್ಕಾಗುವಂತೆ ಮಾಡಿತ್ತು. ತನ್ನ ಪತ್ನಿ ಗೆದ್ದಿಲ್ಲ ಎಂದು ಸಿಟ್ಟಿಗೆದ್ದ ರನ್ನರ್ ಆಪ್ ಆಗಿದ್ದ ಮಹಿಳೆಯ ಪತಿ ಇದ್ದಕ್ಕಿದ್ದಂತೆ ವೇದಿಕೆ ಏರಿ ವಿನ್ನರ್ ತಲೆ ಏರಬೇಕಿದ್ದ ಕಿರೀಟವನ್ನು ಕಸಿದುಕೊಂಡು ನೆಲಕ್ಕೆ ಎಸೆದು ತುಂಡು ಮಾಡಿದ್ದ, ಅಲ್ಲಿದ್ದ ಇತರರ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಅಲ್ಲಿದ್ದ ಅನೇಕರು ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

 

ಸ್ಥಳೀಯ ಸುದ್ದಿವಾಹಿನಿ ಗ್ಲೋಬೋ ವರದಿ ಮಾಡಿದ ಪ್ರಕಾರ LGBTQ+ ಸಮುದಾಯದ ಸೌಂದರ್ಯ ಸ್ಪರ್ಧೆ ಶನಿವಾರ ಬ್ರೆಜಿಲ್‌ನಲ್ಲಿ ನಡೆದಿದೆ. ಈ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಯಾರೋ ರೆಕಾರ್ಡ್ ಮಾಡಿದ್ದು ವೈರಲ್ ಆಗಿದೆ. 

ವೇದಿಕೆಯಲ್ಲಿ ಇಬ್ಬರು ಫೈನಲಿಸ್ಟ್‌ಗಳಾದ ನತಲ್ಲಿ ಬೆಕರ್ (Nathally Becker) ಮತ್ತು ಇಮಾನ್ಯುಲಿ ಬೆಲಿನಿ (Emannuelly Belini) ನಿಂತುಕೊಂಡಿದ್ದು, ಇವರಿಬ್ಬರಲ್ಲಿ ವಿಜೇತರ ಘೋಷಣೆಗಾಗಿ ಮಹಿಳೆಯೊಬ್ಬರು ಅವರ ಬಳಿ ನಿಂತಿದ್ದಾರೆ. ಇಬ್ಬರು ಒಬ್ಬರ ಕೈ ಒಬ್ಬರು ಹಿಡಿದುಕೊಂಡೆ ಕುತೂಹಲದ ಕ್ಷಣಕ್ಕೆ ಕಾಯುತ್ತಿದ್ದಾರೆ. ಪ್ರೇಕ್ಷಕರು ಕೂಡ ಬಹಳ ಕುತೂಹಲದಿಂದ ಇದನ್ನು ಗಮನಿಸುತ್ತ, ಚಪ್ಪಾಳೆ ಶಿಳ್ಳೆ ಹೊಡೆಯುತ್ತಾ ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಮತ್ತೊಬ್ಬನ ಜೊತೆ ಓಡಿ ಹೋದ ಪತ್ನಿ, ಆಕ್ರೋಶದ ಎಡವಟ್ಟಿಗೆ ಪತಿ ಅರೆಸ್ಟ್!

ಅಂತಿಮವಾಗಿ ಬೆಲಿನಿ (Belini) ಎಂಬಾಕೆ ವಿಜೇತಳಾಗಿ  ಆಯ್ಕೆಯಾಗಿದ್ದು, ಆಕೆಯ ತಲೆಯ ಮೇಲೆ ಕಿರೀಟ ಇಡಲು ಆಯೋಜಕರು ಮುಂದಾಗುತ್ತಾರೆ. ಈ ವೇಳೆ ರನ್ನರ್ ಆಫ್ ಆಗಿದ್ದ ಸ್ಪರ್ಧಿಯ ಪತಿ ವೇದಿಕೆ ಮೇಲೇರಿ ಆ ಕಿರೀಟವನ್ನು ಕಿತ್ತು ನೆಲಕ್ಕೆ ಎಸೆದಿದ್ದಾನೆ.  ಈ ವೇಳೆ ಅಲ್ಲಿದ್ದ ಪ್ರೇಕ್ಷಕರು ಗಾಬರಿಯಿಂದ ಬೊಬ್ಬೆ ಹೊಡೆದರೆ ಆತ ತನ್ನ ಹೆಂಡತಿಯನ್ನು ಕೂಗಿ ಎಳೆದುಕೊಂಡು ಅಲ್ಲಿಂದ ಹೋಗಿದ್ದಾನೆ. ಅಲ್ಲದೇ ಇದು ಅಷ್ಟಕ್ಕೆ ಮುಗಿದಿಲ್ಲ ಮರಳಿ ಬಂದ ಆತ ಮತ್ತೆ ಆ ಕಿರೀಟವನ್ನು ನೆಲಕ್ಕೆ ಎಸೆದಿದ್ದಾನೆ. ಈ ವೀಡಿಯೋ ಈಗ ಪ್ರಪಂಚದಾದ್ಯಂತ ವೈರಲ್ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ