* ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪ್ರವೇಶಿಸಿದ ತಾಲಿಬಾನಿಯರು
* ಜನ ಸಾಮಾನ್ಯರಲ್ಲಿ ಸಾವಿನ ಭಯ
* ಅಪ್ಘಾನಿಸ್ತಾನ ತೊರೆಯಲು ನೂಕುನುಗ್ಗಲು
ಕಾಬೂಲ್(ಆ.16): ತಾಲಿಬಾನ್ ಉಗ್ರರು ಭಾನುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪ್ರವೇಶಿಸಿ ರಾಷ್ಟ್ರಪತಿ ಭವನವನ್ನು ವಶಪಡಿಸಿಕೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಹಲವು ಉನ್ನತ ನಾಯಕರು ದೇಶವನ್ನು ತೊರೆದಿದ್ದಾರೆ. ಹೀಗಿರುವಾಗ ಸಾವಿರಾರು ಸಾಮಾನ್ಯ ಜನರು ಕಾಬೂಲ್ ಬಿಟ್ಟು ಬೇರೆ ದೇಶಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಸಾವಿನ ಭಯದ ಮಧ್ಯೆ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆಯ ತಾಣವಾಗಿದೆ. ದೇಶವನ್ನು ತೊರೆಯಲು ಸಾವಿರಾರು ಜನರು ವಿಮಾನ ನಿಲ್ದಾಣದತ್ತ ಧಾವಿಸುತ್ತಿದ್ದಾರೆ. ಸದ್ಯ ವಿಮಾನವೊಂದರಲ್ಲಿ ಜನರು ನಾ ಮುಂದು, ತಾ ಮುಂದು ಎನ್ನುವಂತೆ ನುಗ್ಗುತ್ತಿರುವ ದೃಶ್ಯವೊಂದು ಭಾರೀ ವೈರಲ್ ಆಗಿದೆ.
ತಾಲಿಬಾನ್ ನಾಯಕತ್ವದ ಹಿಂದೆ ಯಾರಿದ್ದಾರೆ?
undefined
ಅಫ್ಘಾನಿಸ್ತಾನದಿಂದ ನೂರಾರು ಜನರು ದೇಶ ಬಿಡಲು ವಿಮಾನಗಳನ್ನು ಹೇಗೆ ಹತ್ತುತ್ತಿದ್ದಾರೆ ಎಂಬುದನ್ನು ವೀಡಿಯೋದಲ್ಲಿ ಕಾಣಬಹುದು. ಎಲ್ಲರೂ ಒಬ್ಬರ ಮೇಲೊಬ್ಬರು ಬೀಳುತ್ತಿದ್ದಾರೆ. ಎಲ್ಲರೂ ಹೇಗಾದರೂ ಸರಿ ಆದರೆ ಅಪ್ಘಾನಿಸ್ತಾನ ಬಿಡಲು ಸಜ್ಜಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
This is, perhaps, one of the saddest images I've seen from . A people who are desperate and abandoned. No aid agencies, no UN, no government. Nothing. pic.twitter.com/LCeDEOR3lR
— Nicola Careem (@NicolaCareem)ಈ ವಿಡಿಯೋ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ್ದಾಗಿದೆ. ಸಾವಿರಾರು ಜನರಿಂದ ವಿಮಾನ ಸಂಪೂರ್ಣವಾಗಿ ಆವೃತವಾಗಿದ್ದು, ವಿಮಾನದ ಕ್ಯಾಬಿನ್ ಒಳಗೆ ಹೋಗಲು ಬಳಸಲಾಗುವ ಏಣಿಯ ಮೂಲಕ ಜನರು ವಿಮಾನದ ಒಳಗೆ ಹೋಗಲು ಯತ್ನಿಸಿದ್ದಾರೆ.
20 ವರ್ಷ ಬಳಿಕ ಆಫ್ಘಾನಿಸ್ತಾನ ಮತ್ತೆ ತಾಲಿಬಾನ್ ಉಗ್ರರ ವಶ!
ಅಫ್ಘಾನಿಸ್ತಾನದ ಜನರ ಈ ಪರಿಸ್ಥಿತಿ ನೋಡಿದಾಗ, ಅವರು ಅದೆಷ್ಟು ಅಸಹಾಯಕತೆ ಅನುಭವಿಸುತ್ತಿದ್ದಾರೆಂದು ಊಹಿಸಬಹುದು. ವಿಮಾನ ನಿಲ್ದಾಣದಲ್ಲಿ ಇರುವ ಎಲ್ಲರೂ ದೇಶವನ್ನು ತೊರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗ ಅನೇಕ ಮಂದಿ ವಿಮಾನಕ್ಕೆ ಹತ್ತಲು ಯಾವುದೇ ಪ್ರಯತ್ನವನ್ನು ಮಾಡದವರೂ ಅಲ್ಲಿದ್ದಾರೆ. ಬಹುಶಃ ತಾವಿನ್ನು ದೇಶ ಬಿಡಲು ಆಗುವುದಿಲ್ಲ ಎಂಬ ಭಾವನೆ ಬಂದಿರಬಹುದು.