ಬಾಲಿವುಡ್‌ನ ಛನ್ನಾ ಮೆರೆಯಾ ಹಾಡಿಗೆ ಕಿಲಿ ಪೌಲ್‌ ಅದ್ಭುತ ನಟನೆ

By Suvarna News  |  First Published Jan 2, 2022, 11:39 AM IST
  • ರಣಬೀರ್‌ ನಟನೆಯ ಛನ್ನಾ ಮೆರೆಯಾ ಹಾಡಿಗೆ ನಟಿಸಿದ  ಕಿಲಿ ಪೌಲ್‌
  • ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್
  • ಯೇ ದಿಲ್‌ ಹೈ ಮುಷ್‌ಕಿಲ್‌ ಸಿನಿಮಾದ ಛನ್ನಾ ಮೆರೆಯಾ ಹಾಡು

ತಾಂಜಾನಿಯಾ(ಡಿ.2): ಈಗಾಗಲೇ ಹಲವು ಬಾಲಿವುಡ್‌ ಹಾಡುಗಳಿಗೆ ಡಾನ್ಸ್‌ ಮಾಡಿ ಫೇಮಸ್‌ ಆಗಿರುವ ತಾಂಜಾನಿಯಾದ ಟಿಕ್‌ಟಾಕ್‌ ಸ್ಟಾರ್‌ ಕಿಲಿ ಪೌಲ್‌ ಈಗ ಬಾಲಿವುಡ್‌ ಹಾಡೊಂದಕ್ಕೆ ಲಿಪ್ ಸಿಂಕ್‌  ಮಾಡುವ ಜೊತೆ ನಟನೆಯನ್ನು ಕೂಡ ಮಾಡಿದ್ದು, ಈ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅವರು ನಟಿಸಿರುವ  ಛನ್ನಾ ಮೆರೆಯಾ (Channa Mereya) ಹಾಡಿಗೆ ಕಿಲಿ ಪೌಲ್ ನಟನೆಯ ಜೊತೆ ಲಿಪ್‌ ಸಿಂಕ್‌ ಕೂಡ ಮಾಡಿದ್ದಾರೆ. ಬಾಲಿವುಡ್‌ನ ಹಲವು ಹಾಡುಗಳಿಗೆ ಕಿಲಿ ಪೌಲ್‌ ಈಗಾಗಲೇ ಡಾನ್ಸ್‌ ಮಾಡಿ ಫೇಮಸ್‌ ಆಗಿರುವುದರಿಂದ ಭಾರತದಲ್ಲಿ ಕಿಲಿ ಪೌಲ್‌ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. 

2021ರ ನವಂಬರ್‌ನಲ್ಲಿ ಕಿಲಿ ಪೌಲ್‌ (Kili Paul) ಅವರು, ಶೇರ್‌ ಷಾ ಚಿತ್ರದ  ಜುಬಿನ್‌ ನೌಟಿಯಾಲ್‌ (Jubin Nautiyal) ಹಾಗೂ ಆಸೀಸ್‌ ಕೌರ್‌ (Asees Kaur) ಅವರು ಹಾಡಿದ  ರತನ್‌ ಲಂಬಿಯಾನ್‌ ಹಾಡಿಗೆ ಹೆಜ್ಜೆ ಹಾಕಿದ್ದರು.  ಇದು ಭಾರಿ ಫೇಮಸ್‌ ಆಗಿತ್ತು. ಅದರ ಜೊತೆಗೆ ಅವರಿಗೆ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ತಂದು ಕೊಟ್ಟಿತ್ತು. ಅಲ್ಲದೇ ಈ ಹಾಡಿನಿಂದಾಗಿ ಬಾಲಿವುಡ್‌ ಮೇಲಿನ ಅವರ ಪ್ರೀತಿ ಮತ್ತಷ್ಟು ಹೆಚ್ಚಾಗಿತ್ತು. ಅಲ್ಲದೇ ಅವರು ಅರ್ಜಿತ್ ಸಿಂಗ್‌ (Arijit Singh) ಅವರ ಹೃದಯ ಕಲಕುವಂತಹ ಭಾವನಾತ್ಮಕವಾದ ಹಾಡುಗಳಿಗೂ ಹೆಜ್ಜೆ ಹಾಕಿದ್ದರು. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Kili Paul (@kili_paul)

 

ಡಾನ್ಸ್‌ ಮಾಡುವ ವೇಳೆ ತಾಂಜಾನಿಯಾದ ಸಾಂಪ್ರದಾಯಿಕ ಮಸಾಯಿ ಉಡುಪುಗಳನ್ನೇ ಕಿಲಿ ಪೌಲ್‌ ಧರಿಸುತ್ತಾರೆ. ಅಲ್ಲದೇ ನೃತ್ಯ ಅಥವಾ ನಟನೆ ಯಾವುದೇ ಇರಲಿ ತುಂಬಾ ಭಾವನಾತ್ಮಕವಾಗಿ ಅವರು ನಟಿಸುತ್ತಾರೆ. ರಣಬೀರ್‌  ಕಪೂರ್‌ (Ranbir Kapoor) ನಟನೆಯ 2016ರಲ್ಲಿ ಹಿಟ್‌ ಆಗಿದ್ದಂತಹ ಯೇ ದಿಲ್‌ ಹೈ ಮುಷ್‌ಕಿಲ್‌ ಸಿನಿಮಾದಲ್ಲಿ ರಣಬೀರ್‌ ಹೃದಯ ಒಡೆದ ಪ್ರೇಮಿಯಾಗಿ ಈ ಹಾಡನ್ನು ಹಾಡುತ್ತಾರೆ.  ಸಿನಿಮಾದಲ್ಲಿ ಅಯಾನ್‌ ಆಗಿ ರಣಬೀರ್‌ ನಟಿಸಿದ್ದರೆ ಈತನ ಪ್ರೇಮಿ ಅಲಿಜೆಯಾಗಿ ಅನುಷ್ಕಾ ಶರ್ಮಾ ನಟಿಸಿದ್ದರು. ಈ ಸಿನಿಮಾದಲ್ಲಿ ರಣಬೀರ್‌ ಪ್ರೀತಿಯನ್ನು ಅನುಷ್ಕಾ ಒಪ್ಪಿರಲಿಲ್ಲ. 

New Year 2022: ಹೊಸ ವರ್ಷ ಸ್ವಾಗತಕ್ಕೆ ಪ್ರಣಯ ಪಕ್ಷಿಗಳು ಎಲ್ಲಿಗೆ ಹಾರಿವೆ?

ಸದ್ಯ ಈ ಹಾಡಿಗೆ ಭಾವನಾತ್ಮಕವಾಗಿ ನಟಿಸಿರುವ ಕಿಲಿ ಪೌಲ್‌, ಈ ಹಾಡನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಅನುಷ್ಕಾ ಶರ್ಮಾ ಹಾಗೂ ನಿರ್ದೇಶಕ ಕರಣ್‌ ಜೋಹರ್‌ ಅವರಿಗೆ ಈ ವಿಡಿಯೋವನ್ನು ಟ್ಯಾಗ್‌ ಮಾಡಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಹವಾ ಸೃಷ್ಟಿಸಿದೆ. ಈ ಮೂಲಕ ಹಾಡು ಅಥವಾ ಕಲೆಗೆ ದೇಶ ಭಾಷೆಯ ಗಡಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.. ಕಿಲಿ ಪೌಲ್‌ ಹಾಗೂ ಆತನ ಸಹೋದರಿ ನೀಮಾ ( Neema) ಆಗಾಗ ಭಾರತೀಯ ಹಾಡುಗಳಿಗೆ ತಾವು ನಟಿಸಿ ಇನ್ಸ್ಟಾಗ್ರಾಮ್‌ನಲ್ಲಿ ಹಾಕುತ್ತಲೇ ಇರುತ್ತಾರೆ. ನವಂಬರ್‌ ತಿಂಗಳಲ್ಲಿ ಮೊದಲ ಬಾರಿ ಭಾರಿ ಜನಮನ್ನಣೆ ಗಳಿಸಿದ ಈ ಕಿಲಿ ಪೌಲ್‌ ಈಗ ಭಾರತೀಯರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 


ಜಬರ್‌ದಸ್ತ್‌ ಡಾನ್ಸ್‌ನಿಂದ ನೋರಾ ಫತೇಹಿಯನ್ನು ಇಂಪ್ರೆಸ್ ಮಾಡಿದ ತಾಂಜೇನಿಯಾ ತರುಣ

ಕೆಲ ದಿನಗಳ ಹಿಂದೆ ಕಿಲಿ ಪೌಲ್‌  ನೂರ್ ಫತೇಹಿ ನಟಿಸಿರುವ  ಗುರು ರಂದಾವ್‌ ಹಾಗೂ ಜಹ್ರಾ ಎಸ್ ಖಾನ್‌  ಹಾಡಿರುವ  ಡಾನ್ಸ್‌ ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ್ದರು.  ಈ ವೈರಲ್ ವೀಡಿಯೋದಲ್ಲಿ ಕಿಲಿ ಪೌಲ್ ಡ್ಯಾನ್ಸ್ ಮೇರಿ ರಾಣಿ ಹಾಡಿನಲ್ಲಿರುವ ಹುಕ್ ಸ್ಟೆಪ್ಸ್‌ಗಳನ್ನು ಸಖತ್ ಆಗಿ ಹಾಕಿದ್ದರು. ಕಿಲಿ ಮಾಡಿದ ಡಾನ್ಸ್‌ ವಿಡಿಯೋವನ್ನು ನೊರಾ ಫತೇಹಿ ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದರು. ಲೆಟ್ಸ್‌ ಗೋ ಅಂತ ಕ್ಯಾಪ್ಷನ್‌ ನೀಡಿದ ನೋರಾ, ಸುಂದರವಾದ ಹೆಜ್ಜೆಗಳು, ಇದೊಂದು ಅದ್ಭುತ ಎಂದು ಪ್ರತಿಕ್ರಿಯಿಸಿದ್ದರು.

click me!