50 ಸಾವಿರ ರಷ್ಯಾ ಯೋಧರ ಸಾವು: ಕೇವಲ 6 ಸಾವಿರ ಸಾವು ಎಂದು ಅಂಕಿ ಅಂಶ ಮುಚ್ಚಿಟಿದ್ದ ರಷ್ಯಾ

By Kannadaprabha News  |  First Published Jul 11, 2023, 6:32 AM IST

ಒಂದೂವರೆ ವರ್ಷದ ಹಿಂದೆ ಆರಂಭಿಸಿದ ಉಕ್ರೇನ್‌ ಜತೆಗಿನ ಯುದ್ಧದಲ್ಲಿ ಮಡಿದ ತನ್ನ ಯೋಧರ ಸಂಖ್ಯೆ 6 ಸಾವಿರ ಮಾತ್ರ ಎಂದು ರಷ್ಯಾ ಹೇಳಿಕೊಳ್ಳುತ್ತಿದೆ. ಆದರೆ ಸಾವನನ್ನಪ್ಪಿದ ರಷ್ಯನ್ನರ ಸಂಖ್ಯೆ ಸುಮಾರು 50 ಸಾವಿರ ಎಂದು ರಷ್ಯಾದ 2 ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಮೊದಲ ಬಾರಿ ಜಂಟಿ ಸಮೀಕ್ಷಾ ವರದಿ ಪ್ರಕಟಿಸಿವೆ.


ಬ್ರಸೆಲ್ಸ್‌: ಒಂದೂವರೆ ವರ್ಷದ ಹಿಂದೆ ಆರಂಭಿಸಿದ ಉಕ್ರೇನ್‌ ಜತೆಗಿನ ಯುದ್ಧದಲ್ಲಿ ಮಡಿದ ತನ್ನ ಯೋಧರ ಸಂಖ್ಯೆ 6 ಸಾವಿರ ಮಾತ್ರ ಎಂದು ರಷ್ಯಾ ಹೇಳಿಕೊಳ್ಳುತ್ತಿದೆ. ಆದರೆ ಸಾವನನ್ನಪ್ಪಿದ ರಷ್ಯನ್ನರ ಸಂಖ್ಯೆ ಸುಮಾರು 50 ಸಾವಿರ ಎಂದು ರಷ್ಯಾದ 2 ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಮೊದಲ ಬಾರಿ ಜಂಟಿ ಸಮೀಕ್ಷಾ ವರದಿ ಪ್ರಕಟಿಸಿವೆ.  ಸೋಷಿಯಲ್‌ ಮೀಡಿಯಾದಲ್ಲಿನ ಸ್ಮಶಾನದ ಫೋಟೋ ಹಾಗೂ ಪೋಸ್ಟಿಂಗ್‌ಗಳು ಮತ್ತು ಉತ್ತರಾಧಿಕಾರಕ್ಕೆ ಕ್ಲೇಮ್‌ ಮಾಡಿ ರಷ್ಯಾ ಸರ್ಕಾರಕ್ಕೆ ಮೃತರ ಬಂಧುಗಳು ಸಲ್ಲಿಸಿದ್ದ ಅರ್ಜಿಗಳನ್ನು ಆಧರಿಸಿ ಈ ಸಮಿಕ್ಷೆ ನಡೆಸಲಾಗಿದೆ. 

ಕೋವಿಡ್‌-19 ತಾರಕಕ್ಕೇರಿದ ಸಮಯದಲ್ಲಿ ಕೂಡ ನೈಜ ಕೋವಿಡ್‌ ಸಾವುಗಳ ವಿಶ್ಲೇಷಣೆಗೆ ಇದೇ ಮಾದರಿ ಅನುಸರಿಸಲಾಗುತ್ತಿತ್ತು. ಈಗಲೂ ಇದೇ ಮಾದರಿ ಆಧರಿಸಿ ತಾವು ಒಟ್ಟಾರೆ ಸುಮಾರು 50 ಸಾವಿರ ರಷ್ಯಾ ಯೋಧರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದ್ದೇವೆ ಎಂದು ರಷ್ಯಾದ ಸ್ವತಂತ್ರ ಮಾಧ್ಯಮಗಳಾದ ‘ಮೀಡಿಯಾ ಜೋನಾ’ ಹಾಗೂ ‘ಮೆಡುಜಾ’ ಹೇಳಿಕೊಂಡಿವೆ. ಈ ಪೈಕಿ ‘ಮೀಡಿಯಾ ಜೋನಾ’ ಮಾಧ್ಯಮವು ಬಿಬಿಸಿಯ ರಷ್ಯನ್‌ ಮಾಧ್ಯಮ ಸೇವೆಯಾಗಿದೆ.

Tap to resize

Latest Videos

ಮೋದಿ ದೂರದೃಷ್ಟಿ ಫಲ ಭಾರತದ ಆರ್ಥಿಕತೆಯಲ್ಲಿ ಕಾಣುತ್ತಿದೆ: ರಷ್ಯಾ ಅಧ್ಯಕ್ಷ

ಈ ಹಿಂದೆ ಅಮೆರಿಕವು 20 ಸಾವಿರ, ಬ್ರಿಟನ್‌ 40ರಿಂದ 60 ಸಾವಿರ ರಷ್ಯಾ ಯೋಧರು ಸಾವನನ್ನಪ್ಪಿರಬಹುದು ಎಂದು ಅಂದಾಜಿಸಿದ್ದವು. ಆದರೆ ಉಕ್ರೇನ್‌ ಆಗಲಿ ರಷ್ಯಾ ಆಗಲಿ ಸರಿಯಾದ ಸಾವಿನ ಸಂಖ್ಯೆ ನೀಡದೇ ಮುಚ್ಚಿಡುತ್ತಿವೆ.

ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ, ಉಕ್ರೇನ್ ಯುದ್ಧದ ಕುರಿತು ಮಹತ್ವದ ಚರ್ಚೆ! 


ಅಧ್ಯಯನ ನಡೆದಿದ್ದು ಹೀಗೆ:

ಮೊದಲು ಸೋಷಿಯಲ್‌ ಮೀಡಿಯಾದಲ್ಲಿನ ಪೋಸ್ಟ್‌ಗಳು ಹಾಗೂ ಛಾಯಾಚಿತ್ರಗಳನ್ನು ಆಧರಿಸಿ ಎರಡೂ ಮಾಧ್ಯಮಗಳ ಪತ್ರಕರ್ತರು ಕೂಲಂಕಷ ಅಧ್ಯಯನ ನಡೆಸಿದ್ದಾರೆ. ಇದರಲ್ಲಿ 2022-23ರ ಅವಧಿಯಲ್ಲಿ 27,423 ರಷ್ಯನ್‌ ಯೋಧರು ಬಲಿಯಾಗಿದ್ದು ದೃಢವಾಗಿದೆ. ಮೃತರ ಹೆಸರು ಆಧರಿಸಿ ಅವರು ಯೋಧರು ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ ಎಂದು ಮೀಡಿಯಾಜೋನಾ ಸಂಪಾದಕ ಡಿಮಿಟ್ರಿ ಟ್ರೆಶ್‌ಚಾನಿನ್‌ ಹೇಳಿದ್ದಾರೆ.

ಇದೇ ವೇಳೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 15ರಿಂದ 49 ವರ್ಷ ವಯಸ್ಸಿನ (ಯೋಧರು ಇದೇ ವಯಸ್ಸಿನವರು) ಮೃತರ ಉತ್ತಾಧಿಕಾರತ್ವಕ್ಕೆ ಎಷ್ಟುಕ್ಲೇಮುಗಳು ಸಲ್ಲಿಕೆ ಆಗಿವೆ ಎಂಬುದರ ಅಧ್ಯಯನ ನಡೆಸಲಾಗಿದೆ. ಯುದ್ಧ ಆರಂಭವಾದ 2022ರ ಫೆಬ್ರವರಿಯಿಂದ 2023ರ ಜು.7ರವರೆಗಿನ ಕ್ಲೇಮುಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 2022ರ ಆರಂಭದಲ್ಲಿ ಕೇವಲ 25 ಸಾವಿರದಷ್ಟಿದ್ದ ಕ್ಲೇಮ್‌ಗಳ ಸಂಖ್ಯೆ 2023ರ ಮೇ 27ರ ವೇಳೆಗೆ 47 ಸಾವಿರಕ್ಕೆ ಹೆಚ್ಚಿದೆ. ಇದರಿಂದಾಗಿ ಸುಮಾರು 50 ಸಾವಿರ ಯೋಧರು ಅಸುನೀಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ವರದಿ ಹೇಳಿವೆ.

click me!