ಕೊಲಂಬಿಯಾ(ಜ.12): ಮನೆ ಇಲ್ಲದ ನಿರ್ಗತಿಕನೋರ್ವ ತನ್ನ ಹುಟ್ಟುಹಬ್ಬವನ್ನು ನಾಯಿಗಳೊಂದಿಗೆ ಆಚರಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಲಂಬಿಯಾದ (Colombia) ಬುಕಾರಮಂಗಾ (Bucaramanga)ದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ @roteloperiodismo ಹೆಸರಿನಿಂದ ಖಾತೆ ಹೊಂದಿರುವವರೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ನಾಯಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿರುವ ವ್ಯಕ್ತಿ ಹೆಸರು ಚೋಕೋ (Choco) ಚೋಕೋ ತನ್ನ ನಾಲ್ಕು ಕಾಲು ಹೊಂದಿರುವ (ಶ್ವಾನಗಳು) ಸ್ನೇಹಿತರೊಂದಿಗೆ ಮೆಟ್ಟಿಲಿನಲ್ಲಿ ಕುಳಿತಿದ್ದಾನೆ. ಈ ಎರಡು ನಾಯಿಗಳಿಗೂ ಬರ್ತ್‌ಡೇ ಟೋಫಿಯನ್ನು ಆತ ಹಾಕಿದ್ದು, ಕೇಕೊಂದನ್ನು ತೆರೆದು ಎರಡು ನಾಯಿಗಳ ಮಧ್ಯದಲ್ಲಿ ಇರಿಸುತ್ತಾನೆ. ಬಳಿಕ ಕೇಕ್ ಮೇಲೆ ಮೇಣದ ಬತ್ತಿ ಯನ್ನು ಇಟ್ಟು ಹ್ಯಾಪಿ ಬರ್ತ್‌ಡೇ ಹಾಡನ್ನು ಹಾಡುತ್ತಾನೆ. ನಂತರ ಎರಡು ಶ್ವಾನಗಳನ್ನು ಮುದ್ದು ಮಾಡುವ ಆತ ಅವುಗಳಿಗೆ ಕೇಕ್‌ನ ತುಂಡುಗಳನ್ನು ನೀಡುತ್ತಾನೆ.
ಇನ್ನು ಈ ಚೋಕೋ ಬುಕಾರಮಂಗಾದ ಬೀದಿಯಲ್ಲಿ ವಾಸಿಸುತ್ತಿದ್ದು, ಈತ ಯಾವಾಗಲೂ ತನ್ನ ಪ್ರೀತಿಯ ನಾಯಿಗಳ ಜೊತೆಯಲ್ಲೇ ಕಾಣ ಸಿಗುತ್ತಿದ್ದ. ಇವರಂತಹ ಜನರಿಗಾಗಿ ನಾವು ಈ ಅನ್ಯಾಯದ ಸಮಾಜವನ್ನು ಬದಲಾಯಿಸಬೇಕು ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಇದನ್ನು 5.78 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡೂವರೆ ನಿಮಿಷಕ್ಕೂ ಹೆಚ್ಚು ಅವಧಿಯ ಈ ವಿಡಿಯೋ ಕ್ಲಿಪ್ ನೆಟ್ಟಿಗರ ಹೃದಯ ಕರಗಿಸಿದೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ಅಲ್ಲಿನ ಅನೇಕರು ಈ ಚೋಕೋನನ್ನು ಸಂಪರ್ಕಿಸಿ ಆತನಿಗೆ ಕೆಲವು ಉಡುಗೊರೆಗಳನ್ನು ನೀಡಿದರು.
ಪ್ರೀತಿಯ ಶ್ವಾನದ ಬರ್ತ್‌ಡೇಗೆ ಅದ್ದೂರಿ ಪಾರ್ಟಿ... ಯುವಕ ಖರ್ಚು ಮಾಡಿದ್ದು ಎಷ್ಟು ಲಕ್ಷ...?
ವೀಡಿಯೊವನ್ನು ಮೊದಲು ಪೋಸ್ಟ್ ಮಾಡಿದ ಪತ್ರಕರ್ತ ರೊಟೆಲೊ, ಬುಕಾರಮಂಗಾದ ಬ್ಯಾರನ್‌ಕ್ವಿಲ್ಲಾದಲ್ಲಿನ ಕ್ಯಾಬೆಸೆರಾ ನೆರೆಹೊರೆಯ ಬೀದಿಯಲ್ಲಿ ವ್ಯಕ್ತಿ ವಾಸಿಸುತ್ತಿದ್ದಾರೆ ಎಂದು ಹೇಳಿದರು. ನಿರಾಶ್ರಿತನಾಗಿದ್ದರೂ, ಮನುಷ್ಯ ತನ್ನ ನಾಯಿಗಳನ್ನು ನೋಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗಿದ್ದಾನೆ ಮತ್ತು ಅವನ ರೋಮದಿಂದ ಕೂಡಿದ ಸ್ನೇಹಿತರೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಾನೆ ಎಂದಿದ್ದರು.
ಕಾರು ಅಪಘಾತ: ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನ
ಬಳಿಕ ಅವರನ್ನು ಸಂಪರ್ಕಿಸಿದ ಕೆಲವು ಜನರು ಆತನಿಗೆ ಸಹಾಯ ಮಾಡಿದರು. ಅಲ್ಲದೇ ಫೋನ್ ನಂಬರ್ ನೀಡಿ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆಯಲು ಅವಕಾಶ ನೀಡಿದರು. ಅವರು ಈಗಾಗಲೇ ಒಂದು ಇನ್ಸ್ಟಾ ಖಾತೆಯನ್ನು ಹೊಂದಿದ್ದರು. ಆದರೆ ಅವರಿಗೆ ಲಾಗಿನ್ ಮಾಹಿತಿ ನೆನಪಿರಲಿಲ್ಲ. ನಂತರ ಇನ್ಸ್ಟಾಗ್ರಾಮ್ ಖಾತೆ ತೆರೆದ ಚೋಕೋ ಲೈವ್ ಸೆಷನ್‌ನಲ್ಲಿ ಬಂದ ಚೋಕೊ , ತನ್ನ ನಿಜವಾದ ಹೆಸರು ಜೋಸ್ ಲೂಯಿಸ್ ಮ್ಯಾಟೋಸ್, ಎಂದು ನಾನು ಮೂಲತಃ ಎಲ್ ಪೆನೊನ್ ಪುರಸಭೆ ವ್ಯಾಪ್ತಿಯ ನಿವಾಸಿಯಾಗಿದ್ದೆ ಎಂಬುದಾಗಿ ತಿಳಿಸಿದರು.
ಇವರು ತಮ್ಮ ಶ್ವಾನ ಶಗ್ಗಿಯ (ಕಪ್ಪು ಬಣ್ಣದ ಶ್ವಾನ) ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಇವರ ಇನ್ನೊಂದು ಶ್ವಾನದ ಹೆಸರು ನೇಹಾ, ಅದು ಸುಮಾರು 10 ವರ್ಷಗಳಿಂದ ಈತನ ಜೊತೆ ಇದ್ದು, ನವಂಬರ್‌ನಲ್ಲಿ ಅದರ ಹುಟ್ಟಿದ ಹಬ್ಬ ಇದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ