ವಿಶ್ವದಾದ್ಯಂತ ಕೊರೋನಾ ಅವತಾರ/ ಅಬುದಾಬಿ ದೇವಾಲಯದಲ್ಲಿ ಆನ್ ಲೈನ್ ಪ್ರಾರ್ಥನೆ/ ಸತ್ಸಂಗಕ್ಕೆ ಅವಕಾಶ/ ವಿಶ್ವದಾದ್ಯಂತ 25 ಸಾವಿರ ಜನರಿಂದ ವೀಕ್ಷಣೆ
ಅಬುದಾಬಿ(ಮೇ 11) ಕೊರೋನಾ ವೈರಸ್ ಅಟ್ಟಹಾಸ ಇಡೀ ಪ್ರಪಂಚವನ್ನೇ ಕಾಡುತ್ತಿದೆ. ಆದರೆ ಅಬುದಾಬಿಯ ದೇವಾಲಯವೊಂದು ದೇವರ ಪ್ರಾರ್ಥನೆ ನಿಲ್ಲಿಸಿಲ್ಲ. ಯುಎಇಲ್ಲೂ ಧಾರ್ಮಿಕ ಕಾರ್ಯಕ್ರಮಗಳು ಮತ್ತು ದೇವಾಲಯ ಪ್ರವೇಶ ಬಂದ್ ಮಾಡಲಾಗಿದೆ.
ಆನ್ ಲೈನ್ ಮೂಲಕ ಸತ್ಸಂಗ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಅಬುದಾಬಿಯ ಹಿಂದೂ ಟೆಂಪಲ್ ಕೆಲಸಕ್ಕೆ ಮೆಚ್ಚುಗೆಗಳ ಮಹಾಪೂರ ಹರಿದು ಬಂದಿದೆ. ನಂಬಿಕೆಗಳನ್ನು ಕಾಪಾಡಿಕೊಂಡು ಬರುವ ಕಾರ್ಯ ನಡೆಯುತ್ತಿದೆ.
ಎಲ್ಲ ಸರ್ಕಾರಗಳು ಜನರ ನಂಬಿಕೆ ಮತ್ತು ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿವೆ. ನಾವು ಸ್ವಯಂ ಪ್ರೇರಿತವಾಗಿಗಿಯೇ ಜನ ಸೇರುವುದನ್ನು ಬಂದ್ ಮಾಡಿದ್ದೇವೆ ಎಂದು ಬಿಎಪಿಸ್ ಹಿಂದು ದೇವಾಲಯ ಈ ಮೊದಲೆ ತಿಳಿಸಿತ್ತು.
ಲಾಕ್ ಡೌನ್ ನಡುವೆ ಕಟೀಲು ಮಹಾತ್ಮೆ ತಿಳಿದುಕೊಳ್ಳಿ
ಪ್ರತಿ ಶುಕ್ರವಾರ 4 ಗಂಟೆಗೆ ನಡೆಯುವ ಆನ್ ಲೈನ್ ಪ್ರಾರ್ಥನೆಗೆ ಜಾಯಿನ್ ಆಗಬಹುದು ಎಂದು ಅಬುದಾಬಿಯ ಸ್ವಾಮಿನಾರಾಯಣ ಮಂದಿರ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರಕ್ಕೆ ನಮ್ಮ ಬೆಂಬಲ ಇದೆ. ಕಳೆದ ಒಂದು ವಾರದಿಂದ ನಮ್ಮ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಬಂದ್ ಮಾಡಲಾಗಿದೆ ಎಂದು ದೇವಾಲಯದ ನಿರ್ದೇಶಕರಲ್ಲೊಬ್ಬರಾದ ಅಶೋಕ್ ಕೋಟೆಚಾ ತಿಳಿಸಿದ್ದಾರೆ.
ಇನ್ನು ಅಬುದಾಬಿಯ ಚರ್ಚ್ ಗಳ ಗೇಟ್ ಸಹ ಬಂದ್ ಮಾಡಲಾಗಿದೆ. ಕೊರೋನಾದಿಂದ ಸಂಕಷ್ಟಕ್ಕೆ ಗುರಿಯಾದ, ನೊಂದವರ ಒಳಿತಿಗೆ ಪ್ರಾರ್ಥನೆ ಮಾಡಿದ್ದೇಬೆ ಎಂದು ಫಾದರ್ ರೇವ್ ಫರ್ನಾಂಡೀಸ್ ತಿಳಿಸಿದ್ದಾರೆ.
ಫೇಸ್ ಬುಕ್ ಮೂಲಕ ನಮ್ಮ ಆನ್ ಲೈನ್ ನಲ್ಲಿ ಪ್ರಾರ್ಥನೆಗೆ ಜಾಯಿನ್ ಆಗಬಹುದು. 25 ಸಾವಿರ ಜನ ವಿಶ್ವದಾದ್ಯಂತ ವೀಕ್ಷಣೆ ಮಾಡಿದ್ದು ಅಲ್ಲಿಂದಲೇ ಪ್ರಾರ್ಥನೆ ಸಲ್ಲಿಸಿದ್ದಾರೆ. ದುಬೈನ ಸೆಂಟ್ ಮೇರಿಸ್ ಕ್ಯಾಥೋಲಿಕ್ ಚರ್ಚ್ ಸಹ್ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಿದೆ.