
ಮ್ಯಾಡ್ರಿಡ್(ಮೇ.11): ಪಾರ್ಕ್‌ನಲ್ಲಿ ಬೆಂಕಿ ತಗುಲಿದ ವಿಡಿಯೋ ಒಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ ಪಾರ್ಕ್‌ಗೆ ಬೆಂಕಿ ತಗುಲಿದ್ದು, ನೋಡ ನೋಡುತ್ತಿದ್ದಂತೆಯೇ ಇದು ಇಡೀ ಪಾರ್ಕ್‌ಗೆ ವ್ಯಾಪಿಸುತ್ತದೆ. ಈ ಪಾರ್ಕ್‌ನಲ್ಲಿ ಮರ, ಗಿಡಗಳು, ಬಿಳಿ ಬಣ್ಣದ ಹುಲ್ಲು ಹಾಗೂ ಕುಳಿತುಕೊಳ್ಳಲು ಬೆಂಚ್ ಕೂಡಾ ಹಾಕಲಾಗಿದೆ. ಆದರೆ ಇಲ್ಲಿ ಅಚ್ಚರಿ ಮೂಡಿಸುವ ವಿಚಾರವೆಂದರೆ ಬೆಂಕಿ ಶೀಘ್ರವಾಗಿ ಪಾರ್ಕ್‌ನೆಲ್ಲೆಡೆ ಆವರಿಸುತ್ತಿದ್ದರೂ, ಹುಲ್ಲು ಬೆಂಕಿ ಕೆನ್ನಾಲೆಗೆ ಸುಡುತ್ತಿದ್ದರೂ ಕಪ್ಪಾಗದೆ ಹಸಿರು ಬಣ್ಣದಿಂದ ಕಂಗೊಳಿಸಿದೆ.
ಹೌದು ಇದು ವಿಚಿತ್ರವೆನಿಸಿದರೂ, ವಿಡಿಯೋದಲ್ಲಿ ಕಂಡು ಬಂದ ದೃಶ್ಯ. ಅಲ್ಲದೇ ಅಲ್ಲಿ ಇಡಲಾಗಿರುವ ಬೆಂಚುಗಳಿಗೂ ಯಾವುದೇ ಹಾನಿಯಾಗುವುದಿಲ್ಲ.
ಈ ವಿಡಿಯೋವನ್ನು ಕ್ಲಬ್ ಡಿ ಮೊಂಟಾನಾ ಕೈಲಾಹೋರಾ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಈ ವಿಡಿಯೋ ನಿಮಗೆ ಸಿನಿಮಾಗಿಂತ ಕಡಿಮೆ ಇಲ್ಲ ಎಂದು ಬರೆದಿದ್ದಾರೆ.
ಈ ವಿಡಿಯೋದಲ್ಲಿ ಶೇರ್ ಮಾಡಿದ ಕೆಲವೇ ತಾಸಿನೊಳಗೆ ಭಾರೀ ವೈರಲ್ ಆಗಿದೆ. ಹಲವಾರು ಮಂದಿ ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡುವುದೇ ಒಂದು ವಿಶೇಷ ಅನುಭವವಾಗಿದೆ.
ಇನ್ನು ವರದಿಗಳಲ್ಲಿಚಿನಾರ್ ಮರಗಳ ಹಣ್ಣುಗಳಿಂದ ಬಿಳಿ ಬಣ್ಣದ ಪದಾರ್ಥ ಉರಿದು ಹೋಗುತ್ತದೆ. ಸ್ಪೇನ್‌ನ ಪ್ರದೇಶವೊಂದರಲ್ಲಿ ಸ್ಥಳೀಯ ಅಧಿಕಾರಿ ಬೆಂಕಿ ಹಾಕಿ ಇದನ್ನು ತೆಗೆದು ಹಾಕುವ ಯತ್ನ ಮಾಡುತ್ತಿದ್ದಾರೆ. ಬೆಂಕಿ ಅವಘಡ ಸಂಭವಿಸದಿರಲು ಎಲ್ಲಾ ಮುಂಜಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ