Mini Budget in Pakistan : ಇಮ್ರಾನ್ ಖಾನ್ , ದಯವಿಟ್ಟು ಪಾಕಿಸ್ತಾನವನ್ನು ಮಾರಬೇಡಿ!

Suvarna News   | Asianet News
Published : Dec 31, 2021, 05:07 PM IST
Mini Budget in Pakistan : ಇಮ್ರಾನ್ ಖಾನ್ , ದಯವಿಟ್ಟು ಪಾಕಿಸ್ತಾನವನ್ನು ಮಾರಬೇಡಿ!

ಸಾರಾಂಶ

ಪಾಕಿಸ್ತಾನದ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ತೀವ್ರ ವಿರೋಧ ಸರ್ಕಾರದ ಮಿನಿ ಬಜೆಟ್ ಗೆ ದೊಡ್ಡ ಮಟ್ಟದ ವಿರೋಧ ಸರ್ಕಾರಕ್ಕೆ ನಮ್ಮ ಮನವಿ ಒಂದೇ, ದಯವಿಟ್ಟು ಪಾಕಿಸ್ತಾನವನ್ನು ಮಾರಬೇಡಿ

ನವದೆಹಲಿ (ಡಿ. 31): ದೇಶವನ್ನು ನಡೆಸುವ ಸಲುವಾಗಿ ವಿದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ತೆಗೆದುಕೊಳ್ಳುವ ಸಾಲಗಳ ಮೇಲೇಯೆ ಪಾಕಿಸ್ತಾನ (Pakistan ) ಹೆಚ್ಚು ಅವಲಂಬಿತವಾಗಿದೆ. ಇಡೀ ದೇಶವೇ ದೊಡ್ಡ ಮಟ್ಟದ ಸಾಲದ ಸುಳಿಯಲ್ಲಿರುವಾಗ ಪಾಕಿಸ್ತಾನದ ಕೇಂದ್ರ ಸರ್ಕಾರ ಮಿನಿ ಬಜೆಟ್ (Mini Budget) ಅನ್ನು ಮಂಡನೆ ಮಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೂ ತುತ್ತಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಶೌಕತ್ ತರಿನ್  (Finance Minister Shaukat Tarin)ಸಂಸತ್ತಿನಲ್ಲಿ ಹಣಕಾಸು (ಪೂರಕ) ಮಸೂದೆಯನ್ನು ಮಂಡನೆ ಮಾಡಿದರು.. ಇದನ್ನು ವಿರೋಧ ಪಕ್ಷಗಳು ಮಿನಿ ಬಜೆಟ್ ಎಂದು ಟೀಕೆ ಮಾಡಿವೆ. ಮಿನಿ ಬಜೆಟ್ ಕುರಿತಾಗಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನದ ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿರುವ ಪ್ರತಿಪಕ್ಷಗಳು, ಈ ಮಸೂದೆಯ ಮೂಲಕ ಆಡಳಿತ ಪಕ್ಷ ಪಾಕಿಸ್ತಾನವನ್ನು ಮಾರಲು ಮುಂದಾಗಿದೆ ಎಂದು ಆರೋಪ ಮಾಡಿದೆ. ಅದರಲ್ಲೂ ಪಾಕಿಸ್ತಾನದ ಸಂಸದರೊಬ್ಬರು, 1971ರಲ್ಲಿ ಭಾರತ ವಿರುದ್ಧ ನಡೆದ ಯುದ್ಧದಲ್ಲಿ ಆದ ಸೋಲಿಗಿಂತ ದೊಡ್ಡ ಅವಮಾನ ಇದಾಗಿದೆ ಎಂದು ಟೀಕಿಸಿದ್ದಾರೆ.

ಪಾಕಿಸ್ತಾನದ ಪತ್ರಿಕೆಯ ವರದಿ ಪ್ರಕಾರ, ಹಣಕಾಸು (ಪೂರಕ) ಮಸೂದೆಯ ಅನ್ವಯ 144 ಸರಕುಗಳನ್ನು ಶೇ.17 ರಷ್ಟು ಜಿಎಸ್ ಟಿ ಅಡಿಗೆ ತರಲಾಗುತ್ತಿದೆ. ಇದರಲ್ಲಿ ಮೊಬೈಲ್ ಫೋನ್ ಗಳು, ಎಲೆಕ್ಟ್ರಿಕ್ ವಾಹನಗಳು ಆಮದು ಮಾಡಿಕೊಂಡ ಅಡುಗೆ ಎಣ್ಣೆ, ಚಿಕನ್, ಔಷಧ ವಸ್ತುಗಳ ಮೂಲ ಸಾಮಗ್ರಿ, ಕೃಷಿ ಬೀಜಗಳು, ಬ್ಯಾಟರಿ, ಹಿಟ್ಟು, ಪ್ಯಾಕೇಜ್ ಮಾಡಿದಂಥ ಡೈರಿ ಉತ್ಪನ್ನಗಳು, ಕಬ್ಬು ಸೇರಿದಂತೆ ಇತರ ಉತ್ಪನ್ನಗಳ ಮೇಲೆ ಡೊಡ್ಡ ಮಟ್ಟದ ತೆರಿಗೆಯನ್ನು ಹಾಕಲಾಗುತ್ತದೆ. ಪಾಕಿಸ್ತಾನ ಸರ್ಕಾರದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತೆರಿಗೆಯನ್ನು ಹಾಕಲಾಗುತ್ತಿದೆ. ಈಗಾಗಲೇ ಅತಿಯಾದ ಹಣದುಬ್ಬರದಿಂದ ನಲುಗಿರುವ ಪಾಕಿಸ್ತಾನದ ಜನತೆಗೆ ಈ ಮಿನಿ ಬಜೆಟ್ ಮತ್ತೊಂದು ದೊಡ್ಡ ಹೊಡೆತ ನೀಡಲಿದೆ.

ಸಾಲ ತೆಗೆದುಕೊಳ್ಳುವ ಸಲುವಾಗಿ ಮಸೂದೆ: ಈ ನಡುವೆ ಪ್ರತಿಪಕ್ಷಗಳು ಇಮ್ರಾನ್ ಖಾನ್(Imran Khan) ನೇತೃತ್ವದ ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ (Pakistan Tehreek-e-Insaf )ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (IMF) ಸಾಲ ತೆಗೆದುಕೊಳ್ಳುವ ಉದ್ದೇಶದಲ್ಲಿ ಈ ಮಸೂದೆಯನ್ನು ತರಲಾಗಿದೆ ಎಂದಿದೆ. ಐಎಂಎಫ್ ಈಗಾಗಲೇ ಪಾಕಿಸ್ತಾನಕ್ಕೆ 6 ಬಿಲಿಯನ್ ಡಾಲರ್ ಮೊತ್ತವನ್ನು ಸಾಲವಾಗಿ ನೀಡಲು ಒಪ್ಪಿದೆ. ಆದರೆ, ಹಣವನ್ನು ನೀಡುವ ಸಲುವಾಗಿ ಕೆಲ ಷರತ್ತುಗಳನ್ನೂ ಮುಂದಿಟ್ಟಿದೆ. ದೇಶದ ಬಜೆಟ್ ಅನ್ನು ಕಡಿಮೆ ಮಾಡಿ, ಆದಾಯವನ್ನು ಹೆಚ್ಚಿಸುವ ರೀತಿಯಲ್ಲಿ ಮಸೂದೆ ತರಬೇಕು ಎಂದು ಹೇಳಿತ್ತು. ಜನವರಿ 12 ರಂದು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಗಳ ಬಗ್ಗ ಮರುಪರಿಶೀಲನಾ ಸಭೆ ನಡೆಯಲಿದೆ. ಈ ವೇಳೆ ವ್ಯವಸ್ಥಾಪಕ ಮಂಡಳಿ ಒಪ್ಪಿಗೆ ನೀಡಿದಲ್ಲಿ ಮಾತ್ರವೇ ಪಾಕಿಸ್ತಾನಕ್ಕೆ ಈ ಸಾಲದ ಮೊದಲ ಕಂತಿನ ರೂಪದಲ್ಲಿ 1 ಬಿಲಿಯನ್ ಡಾಲರ್ ಹಣ ಸಿಗಲಿದೆ.

Chinese J 10C Jets: ರಫೇಲ್‌ಗೆ ಸಡ್ಡು, ಚೀನಾ ನಿರ್ಮಿತ ಜೆ-10ಸಿ ವಿಮಾನ ಖರೀದಿಸಿದ ಪಾಕ್‌
ಇದನ್ನು ಟೀಕಿಸಿರುವ ಪಾಕ್ ಪ್ರತಿಪಕ್ಷಗಳು, ಹಾಲಿ ಸರ್ಕಾರ ಆರ್ಥಿಕ ನೀತಿಯನ್ನು ಸ್ವಂತ ಬಲದಲ್ಲಿ ಕೈಗೊಳ್ಳುವ ಶಕ್ತಿ ಹೊಂದಿಲ್ಲ. ಐಎಂಎಫ್ ನ ಒತ್ತಡದಿಂದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದೆ. ಪಾಕಿಸ್ತಾನ ಮುಸ್ಲೀಂ ಲೀಗ್-ನವಾಜ್ (Pakistan Muslim League-Nawaz) ಪಕ್ಷದ ನಾಯಕ ಖವಾಜಾ ಆಸಿಫ್ (Khawaja Asif), ದೇಶದ ಸೆಂಟ್ರಲ್ ಬ್ಯಾಂಕ್ ನ ಸಂಪೂರ್ಣ ಹಿಡಿತವನ್ನು ಐಎಂಎಫ್ ಗೆ ನೀಡಲಾಗಿದೆ. ಬಹುಶಃ ಈ ಸರ್ಕಾರ ದೇಶವನ್ನು ಮಾರದೇ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ. ಈಗಾಗಲೇ ಈ ಸರ್ಕಾರ ಕಳೆದ ಮೂರು ವರ್ಷಗಳಿಂದ ದೇಶದ ಜನರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!