ನ್ಯೂಯಾರ್ಕ್ ನಗರಕ್ಕೆ ಗೋಡೆ ನಿರ್ಮಾಣ ಮೂರ್ಖತನ ಎಂದ ಟ್ರಂಪ್!

By Suvarna NewsFirst Published Jan 19, 2020, 2:36 PM IST
Highlights

ನ್ಯೂಯಾರ್ಕ್ ನಗರಕ್ಕೆ ಗೋಡೆ ನಿರ್ಮಾಣ ಯೋಜನೆ ತಿರಸ್ಕರಿಸಿದ ಟ್ರಂಪ್| ಬಿರುಗಾಳಿಯಿಂದ ನಗರವನ್ನು ರಕ್ಷಿಸಲು ಗೋಡೆ ನಿರ್ಮಾಣಕ್ಕೆ ಮುಂದಾಗಿದ್ದ ಸೇನೆ| ಇದೊಂದು ಮೂರ್ಖತನ ಮತ್ತು ದುಬಾರಿ ಕಲ್ಪನೆ ಎಂದ ಅಮೆರಿಕ ಅಧ್ಯಕ್ಷ| ಯೋಜನೆಗೆ 119 ಬಿಲಿಯನ್ ಡಾಲರ್ ವೆಚ್ಚದ ಅಂದಾಜು| ಅಪರೂಪದ ಬಿರುಗಾಳಿಗೆ ಇಷ್ಟು ವೆಚ್ಚ ಏಕೆ ಎಂದು ಕೇಳಿದ ಟ್ರಂಪ್| 

ನ್ಯೂಯಾರ್ಕ್(ಜ.19):  ನ್ಯೂಯಾರ್ಕ್ ನಗರವನ್ನು ಬಿರುಗಾಳಿಗಳಿಂದ ರಕ್ಷಿಸಲು ಗೋಡೆ ನಿರ್ಮಿಸುವ ಆಲೋಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. 

ರಕ್ಷಣಾ ಗೋಡೆ ನಿರ್ಮಾಣವನ್ನು ಟೀಕಿಸಿರುವ ಟ್ರಂಪ್, ಇದೊಂದು ಮೂರ್ಖತನ ಮತ್ತು ದುಬಾರಿ ಕಲ್ಪನೆ ಎಂದು ಪ್ರಸ್ತಾವನೆಯನ್ನು ಟೀಕಿಸಿದ್ದಾರೆ.

ನ್ಯೂಯಾರ್ಕ್‌ ಬಂದರಿನಲ್ಲಿ ಕೆಲವು ಮೈಲುಗಳಷ್ಟು ದೂರದಲ್ಲಿ ದೈತ್ಯ ತಡೆಗೋಡೆ ನಿರ್ಮಾಣ ಮಾಡಲು ಸೇನೆ ಯೋಜಿಸಿತ್ತು. ಬಿರುಗಾಳಿಯಿಂದ ನಗರವನ್ನು ರಕ್ಷಿಸುವ ಉದ್ದೇಶದೊಂದಿಗೆ ಗೋಡೆ ನಿರ್ಮಾಣ ಮಾಡಲು ಚಿಂತಿಸಲಾಗಿತ್ತು.

ಭಾರತ- ಚೀನಾ ಗಡಿ ಕುರಿತ ಟ್ರಂಪ್‌ ಅಜ್ಞಾನಕ್ಕೆ ಮೋದಿ ಸುಸ್ತು

A massive 200 Billion Dollar Sea Wall, built around New York to protect it from rare storms, is a costly, foolish & environmentally unfriendly idea that, when needed, probably won’t work anyway. It will also look terrible. Sorry, you’ll just have to get your mops & buckets ready!

— Donald J. Trump (@realDonaldTrump)

ಈ ಯೋಜನೆಗೆ 200 ಬಿಲಿಯನ್ ಡಾಲರ್ ವೆಚ್ಚ ಮಾಡಬೇಕಿದ್ದು, ಗೋಡೆ ನಿರ್ಮಾಣ ಕಾರ್ಯಕ್ಕೆ ಸುಮಾರು 25 ವರ್ಷಗಳಾಗಬಹುದು ಎಂದು ಅಂದಾಜಿಸಲಾಗಿತ್ತು. 

ಆದರೆ ಈ ಯೋಜನೆಯನ್ನು ತಿರಸ್ಕರಿಸಿರುವ ಟ್ರಂಪ್, ಬಿರುಗಾಳಿ ಅಪರೂಪವಾಗಿದ್ದು ಅದಕ್ಕಾಗಿ ಇಷ್ಟು ವೆಚ್ಚ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

click me!