250ಕೆಜಿ ತೂಕದ ಐಸಿಸ್ ಉಗ್ರನನ್ನು ಎತ್ತುವಲ್ಲಿ ಸುಸ್ತಾದ ಪೊಲೀಸರು!

Suvarna News   | Asianet News
Published : Jan 19, 2020, 01:50 PM IST
250ಕೆಜಿ ತೂಕದ ಐಸಿಸ್ ಉಗ್ರನನ್ನು ಎತ್ತುವಲ್ಲಿ ಸುಸ್ತಾದ ಪೊಲೀಸರು!

ಸಾರಾಂಶ

ಈ ದೈತ್ಯ ಐಸಿಸ್ ಉಗ್ರನನ್ನು ಬಂಧಿಸಲು ಹರಸಾಹಸ ಪಟ್ಟ ಪೊಲೀಸರು| ಬರೋಬ್ಬರಿ 250 ಕೆಜಿ ತೂಕದ ಐಸಿಸ್ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿ| ಭದ್ರತಾ ಪಡೆಗಳ ವಿರುದ್ಧ ಜೀವ ಇರುವವರೆಗೆ ಹೋರಾಡಲು ಕರೆ ನೀಡಿದ್ದ ಜಬ್ಬಾ ದಿ ಜಿಹಾದಿ| ಮಿನಿ ಟ್ರಕ್‌ನಲ್ಲಿ ಮಲಗಿಸಿ ಜೈಲಿಗೆ ಕರೆದೊಯ್ದ ಪೊಲೀಸರು|

ಬಾಗ್ದಾದ್(ಜ.19): ಐಸಿಸ್ ಮುಖ್ಯಸ್ಥ ಅಬುಲ್ ಬಕರ್ ಅಲ್ ಬಾಗ್ದಾದಿ ಹತ್ಯೆ ಬಳಿಕ ನಿಟ್ಟುಸಿರು ಬಿಟ್ಟಿರುವ ಇರಾಕ್ ಹಾಗೂ ಸಿರಿಯಾ ಭದ್ರತಾ ಪಡೆಗಳು, ಇದೀಗ ಆತನ ಸಹಚಚರ ಬೇಟೆ ಶುರು ಮಾಡಿದ್ದಾರೆ.

ಅದರಂತೆ ಇರಾಕ್  ಭದ್ರತಾ ಪಡೆಗಳ ನಿದ್ರೆಗೆಡಿಸಿದ್ದ ಐಸಿಸ್‌ನ ದೈತ್ಯ ಉಗ್ರನೋರ್ವ ಬಂಧನಕ್ಕೀಡಾಗಿದ್ದು, ಆತನನ್ನು ಬಂಧಿಸಿ ಕರೆದೊಯ್ಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಬಾಗ್ದಾದಿ ಕೊನೆ ಕ್ಷಣಗಳು: ಪೆಂಟಗನ್ ಬಿಡುಗಡೆ ಮಾಡಿದ ವಿಡಿಯೋ ತುಣುಕುಗಳು!

ಬರೋಬ್ಬರಿ 250 ಕೆಜಿ ತೂಕವಿರುವ ಐಸಿಸ್ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿ ಅಲಿಯಾಸ್ ಜಬ್ಬಾ ದಿ ಜಿಹಾದಿಯನ್ನು ಇರಾಕ್ ಪೊಲೀಸರು ಬಂಧಿಸಿದ್ದು, ಆತನನ್ನು ಜೈಲಿಗೆ ಕರೆದೊಯ್ಯಲು ಭಾರೀ ಶ್ರಮವಹಿಸಿದ್ದಾರೆ.

ಭದ್ರತಾ ಪಡೆಗಳ ವಿರುದ್ಧ ಜೀವ ಇರುವವರೆಗೆ ಹೋರಾಡುವಂತೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವಂತೆ  ಮುಫ್ತಿ ಉಗ್ರರರಿಗೆ ಕರೆ ನೀಡಿದ್ದ.

ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ತೆರಳಿದ ಪೊಲೀಸರು, ಆತನನ್ನು ಎತ್ತಿ ಪೊಲೀಸ್ ವಾಹನದಲ್ಲಿ ಕೂರಿಸುವಲ್ಲಿ ಸುಸ್ತಾಗಿ ಹೋಗಿದ್ದಾರೆ. ಮುಫ್ತಿಯನ್ನು ಬಂಧಿಸಲು ತಂದಿದ್ದ ಕಾರಿನಲ್ಲಿ ಆತ ತೂರದಾದಾಗ ಮಿನಿ ಟ್ರಕ್‌ವೊಂದನ್ನು ತರಿಸಿ ಉಗ್ರನನ್ನು ಜೈಲಿಗೆ ಕರೆದೊಯ್ಯಲಾಯಿತು.

ಎಲ್ಲಿ ಓಡ್ತಿಯಾ?: ಟರ್ಕಿ ಪಡೆಗಳಿಗೆ ಸೆರೆಸಿಕ್ಕ ಬಾಗ್ದಾದಿ ತಂಗಿ ರಸ್ಮಿಯಾ!

ಅಬ್ದುಲ್ ಬಾರಿ ಬಂಧನದಿಂದ ಹರಿದುಹಂಚಿ ಹೋಗಿರುವ ಐಸಿಸ್ ಸಂಘಟನೆಗೆ ಮತ್ತಷ್ಟು ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ