ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ, ಖಲಿಸ್ತಾನಿ ಉಗ್ರ ಅರ್ಶದೀಪ್ ದಲ್ಲಾನನ್ನು ಕೆನಾಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆನಡಾ ಪೊಲೀಸರ ನಡೆ ಕೆನಡಾ ಸರ್ಕಾರಕ್ಕೆ ಮುಜುಗರ ತಂದಿದೆ. ಇಷ್ಟೇ ಅಲ್ಲ ಕೆನಡಾದ ಟ್ರುಡು ಸರ್ಕಾರಕ್ಕೆ ತೀವ್ರ ಮುಖಭಂಗ ತಂದಿದೆ.
ಕೆನಡಾ(ನ.10) ಭಾರತ ಹಾಗೂ ಕನೆಡಾ ಸಂಬಂಧ ಹಾಳುಗೆಡವಿದ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರತಿ ದಿನ ಉಭಯ ರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ. ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೈಸುಟ್ಟುಕೊಂಡ ಕೆನಡಾ ಇದೀಗ ಮತ್ತೊಂದು ಮುಖಭಂಗ ಅನುಭವಿಸಿದೆ. ಕೆನಡಾ ಪೊಲೀಸರು ಸ್ಥಳೀಯ ಮಟ್ಟದಲ್ಲಿ ನಡೆದ ಶೂಟೌಟ್ ಸಂಬಂದ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ, ಖಲಿಸ್ತಾನಿ ಉಗ್ರ ಅರ್ಶದೀಪ್ ದಲ್ಲಾನ ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 27 ಹಾಗೂ 28 ರಂದು ಕೆನಾಡದಲ್ಲಿ ಮಿಲ್ಟನ್‌ನಲ್ಲಿ ನಡೆದ ಶೂಟೌಟ್ ಪ್ರಕರಣ ಸಂಬಂಧ ಕೆನಡಾ ಪೊಲೀಸರು ಅರ್ಶದೀಪ್ ದಲ್ಲಾನ ವಶಕ್ಕೆ ಪಡೆದಿದ್ದರೆ. ಈ ಶೂಟೌಟ್ ವೇಳೆ ಅರ್ಶದೀಪ್ ದಲ್ಲಾ ಸ್ಥಳದಲ್ಲಿದ್ದ ಅನ್ನೋ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಕೆನಡಾ ಪೊಲೀಸರು ಅರ್ಶದೀಪ್ ದಲ್ಲಾನ ವಶದಲ್ಲೇ ಇಟ್ಟುಕೊಂಡಿದ್ದಾರಾ ಅಥವಾ ರಿಲೀಸ್ ಮಾಡಿದ್ದಾರ ಅನ್ನೋ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಘಟನೆ ಕೆನಡಾ ಸರ್ಕಾರವನ್ನು ಬಟಾ ಬಯಲು ಮಾಡಿದೆ.
undefined
ಕೆನಡಾ ಹಿಂದೂಗಳ ಮೇಲೆ ಖಲಿಸ್ತಾನಿ ಗೂಂಡಾಗಿರಿ: ಇದು ಹೇಡಿತನದ ಕೃತ್ಯ ಎಂದ ಮೋದಿ ತೀವ್ರ ಆಕ್ರೋಶ
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಮುನ್ನ ಕೆನಡಾ ಸರ್ಕಾರಕ್ಕೆ ಭಾರತ ಸರ್ಕಾರ ಒಂದಷ್ಟು ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ನೀಡಿತ್ತು. ಈ ಪಟ್ಟಿಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್, ಅರ್ಶದೀಪ್ ದಲ್ಲಾ ಸೇರಿದಂತೆ ಹಲವರು ಹೆಸರನ್ನು ಭಾರತ ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಇವರ ಮೇಲಿರುವ ಪ್ರಕರಣಗಳನ್ನು ಉಲ್ಲೇಖಿಸಲಾಗಿತ್ತು. ಇಷ್ಟೇ ಅಲ್ಲ ಈ ಮೋಸ್ಟ್ ವಾಂಟೆಡ್ ಆರೋಪಿಗಳನ್ನು ಅರೆಸ್ಟ್ ಮಾಡಿ ಭಾರತಕ್ಕೆ ಗಡೀಪಾರು ಮಾಡಿ ಅಥವಾ ಕೆನಾದಲ್ಲಿ ಸೂಕ್ತ ಶಿಕ್ಷ ನೀಡುವಂತೆ ಭಾರತ ಆಗ್ರಹಿಸಿತ್ತು. ಆದರೆ ಕೆನಡಾ ಈ ಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಕಾರಣ ಖಲಿಸ್ತಾನಿ ಉಗ್ರರ ಪಟ್ಟಿ ಕೆನಡಾದ ಮತ ಬ್ಯಾಂಕ್ ಆಗಿತ್ತು. ಇದಾದ ವರ್ಷಗಳ ಬಳಿಕ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೋಲಾಹಲ ಸೃಷ್ಟಿಸಿತ್ತು. ಈ ಘಟನೆ ಉಭಯ ರಾಷ್ಟ್ರಗಳ ಮೇಲೆ ಬೀರಿದ ಪರಿಣಾಮ ಬಿಡಿಸಿ ಹೇಳಬೇಕಿಲ್ಲ.
ಇದೀಗ ಭಾರತ ನೀಡಿದ ಇದೇ ಪಟ್ಟಿಯಲ್ಲಿರುವ ಮತ್ತೊಬ್ಬ ಮೋಸ್ಟ್ ವಾಂಟೆಡ್ ಈ ಅರ್ಶದೀಪ್ ದಲ್ಲಾ. ಇದೀಗ ಈತ ಶೂಟೌಟ್ ಪ್ರಕರಣ ಸಂಬಂಧ ಕೆನಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ವಶಕ್ಕೆ ಪಡೆಯುವ ಮೂಲಕ ಭಾರತದ ಹಲವು ಮೋಸ್ಟ್ ವಾಂಟೆಡ್ ಉಗ್ರರಿಗೆ ಕೆನಡಾ ಆಶ್ರಯ ನೀಡುತ್ತಿದೆ ಅನ್ನೋದು ದಿಟವಾಗಿದೆ.
'ಭಾರತದ ಸಂಕಲ್ಪವನ್ನು ಇಂಥ ಕೃತ್ಯ ದುರ್ಬಲ ಮಾಡೋದಿಲ್ಲ..' ಕೆನಡಾ ಹಿಂದೂ ದೇವಾಲಯ ದಾಳಿಗೆ ಮೋದಿ ಖಂಡನೆ
ಭಾರತದ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಭಾರತ ಈ ಉಗ್ರರ ಪಟ್ಟಿ ತಯಾರಿಸಿ ಕೆನಡಾಗೆ ನೀಡಿತ್ತು. ಈ ಪಟ್ಟಿಯಲ್ಲಿ ಅರ್ಶದೀಪ್ ದಲ್ಲಾ ಕುರಿತು ಸ್ಫೋಟಕ ಮಾಹಿತಿಯನ್ನು ಭಾರತ ಸರ್ಕಾರ ನೀಡಿತ್ತು. ಕೆನಡಾದ ಸರ್ರೆಯಲ್ಲಿ ದಲ್ಲಾ ತನ್ನ ಪತ್ನಿ ಜೊತೆ ವಾಸವಿದ್ದಾನೆ. ಈತನ ವಿರುದ್ಧ ಭಾರದ UAPA ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ವಿವರನ್ನೂ ಭಾರತ ನೀಡಿತ್ತು. ಉಗ್ರ ಚಟುವಟಿಕೆ, ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಾಗಿದೆ ಎಂದಿತ್ತು. ಇಷ್ಟೇ ಅಲ್ಲ ಪಂಜಾಬ್ ಪೊಲೀಸರು ಹೊರಡಿಸಿ ಲುಕೌಟ್ ನೋಟಿಸ್ ಕುರಿತು ಮಾಹಿತಿ ನೀಡಿತ್ತು.