ಯುಎಸ್ ಸೆಕ್ರಟರಿಗೆ ಮಕ್ಕಳ ಮೃತದೇಹ ಫೋಟೋ ಹಂಚಿದ ಇಸ್ರೇಲ್, ಹಮಾಸ್ ಭೀಕರತೆಯ ಸಾಕ್ಷಿ!

By Suvarna News  |  First Published Oct 12, 2023, 9:45 PM IST

ಹಮಾಸ್ ಉಗ್ರರ ಭೀಕರ ದಾಳಿಯಿಂದ ನಲುಗಿರುವ ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡಿದೆ. ಅಮೆರಿಕ ಕಾರ್ಯದರ್ಶಿ ಇಸ್ರೇಲ್‌ಗೆ ಆಗಮಿಸಿದ್ದಾರೆ. ಈ ವೇಳೆ ಇಸ್ರೇಲ್ ಪ್ರಧಾನಿ ಹಮಾಸ್ ಉಗ್ರರು ನಡಸಿದ ಭೀಕರತೆ ಫೋಟೋವನ್ನು ಕಾರ್ಯದರ್ಶಿ ಜೊತೆ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದರೆ ಎಂತವರ ರಕ್ತ ಕುದಿಯುತ್ತೆ. 
 


ಜೆರುಸಲೇಮ್(ಅ.12) ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ದಾಳಿ ನಡೆಯುತ್ತಿದೆ. ಹಮಾಸ್ ಉಗ್ರರ ಸಂಪೂರ್ಣ ನಾಶ ಮಾಡಲು ಪಣತೊಟ್ಟಿದೆ. ಇಸ್ರೇಲ್ ದಾಳಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇಸ್ರೇಲ್ ಈ ಮಟ್ಟಿಗೆ ದಾಳಿ ನಡೆಸಲು ಹಲವು ಕಾರಣಗಳಿವೆ. ಇಸ್ರೇಲ್ ಬೆಂಬಲ ನೀಡಿದ ಅಮೆರಿಕ ಇಂದು ತನ್ನ ಕಾರ್ಯದರ್ಶಿ ಆ್ಯಂಟಿನಿ ಬ್ಲಿಂಕೆನ್‌ನ್ನು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ. ಇಸ್ರೇಲ್‌ಗೆ ಆಗಮಿಸಿದ ಆ್ಯಂಟಿನಿಗೆ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಕೆಲ ಫೋಟೋಗಳನ್ನು ಹಂಚಿದ್ದಾರೆ. ಈ ಫೋಟೋಗಳು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭೀಕರತೆಗೆ ಸಾಕ್ಷಿಯಾಗಿದೆ.

ಹಮಾಸ್ ಉಗ್ರರು ಭೀಕರ ದಾಳಿ ಕುರಿತ ಹಲವು ವಿಡಿಯೋಗಳು, ಫೋಟೋಗಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. 40 ಮಕ್ಕಳ ಶಿರಚ್ಚೇಧ, ಜೀವಂತ ಸುಟ್ಟ ಹಲವು ಘಟನೆಗಳು ವರದಿಯಾಗಿದೆ. ಈ ಭೀಕರತೆಯನ್ನು ಹೇಳುವ ಫೋಟೋಗಳನ್ನು ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅಮೆರಿಕ ಕಾರ್ಯದರ್ಸಿ ಆ್ಯಂಟೋನಿ ಜೊತೆ ಹಂಚಿಕೊಂಡಿದ್ದಾರೆ.

Tap to resize

Latest Videos

ಹಮಾಸ್ ಉಗ್ರರ ಬೆಂಬಲಿಸಿದ ಸಿರಿಯಾಗೆ ಸಂಕಷ್ಟ, 2 ವಿಮಾನ ನಿಲ್ದಾಣ ಮೇಲೆ ದಾಳಿ ನಡೆಸಿದ ಇಸ್ರೇಲ್!

ಜೀವಂತ ಸುಟ್ಟು ಕರಕಲಾಗಿರುವ ಪುಟ್ಟ ಕಂದಮ್ಮಗಳ ಫೋಟೋ, ಮಲಗಿರುವಲ್ಲೇ ರುಂಡ ಕತ್ತರಿಸಿದ ಹಾಲುಗೆನ್ನೇಯ ಕಂದಮ್ಮಗಳ ಫೋಟೋಗಳು ಇದಾಗಿದೆ. ಹಮಾಸ್ ಉಗ್ರರು ನಡೆಸಿದ ಭೀಕರತೆಗೆ ಈ ಫೋಟೋಗಳೇ ಸಾಕ್ಷಿ ಹೇಳುತ್ತಿದೆ. ನಾಲ್ಕು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ರೀತಿಯ ಸಾವಿರ ಕುಟುಂಬದ ಫೋಟೋಗಳಿವೆ. ನೂರಾರು ಮಕ್ಕಳ ಹೃದವಿದ್ರಾವಕ ಘಟನೆಗಳಿವೆ. 

ಇದೇ ಕಾರಣಕ್ಕೆ ಹಮಾಸ್ ಉಗ್ರರನ್ನು ಸಂಪೂರ್ಣ ನಾಶ ಮಾಡಲು ಇಸ್ರೇಲ್ ನಿರ್ಧರಿಸಿದೆ. ಹಲವು ರಾಷ್ಟ್ರಗಳ ವಿರೋಧದ ನಡುವೆಯೂ ಇಸ್ರೇಲ್ ತನ್ನ ಯುದ್ಧ ಮುಂದುವರಿಸಿದೆ. ಈ ಫೋಟೋಗಳು ನೋಡಿದರೆ ಕರುಳು ಹಿಂಡುವ ಅನುಭವವಾಗದೇ ಇರದು. ಈ ಫೋಟೋಗಳ ಭೀಕರತೆಯಿಂದ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಚಿತ್ರಗಳನ್ನು ಪ್ರಕಟಿಸುತ್ತಿಲ್ಲ.

'ಇಸ್ರೇಲ್‌ನ ಹಿಂದೆ ನಿಂತಿರೋದು ಅಮೆರಿಕ' ಇಸ್ರೇಲ್‌ ಮೇಲೆ ದಾಳಿ ಮಾಡುವ ರಾಷ್ಟ್ರಗಳಿಗೆ ಯುಎಸ್‌ ಎಚ್ಚರಿಕೆ!

ಇಸ್ರೇಲ್‌ನ ಕ್ಷಿಪಣಿಗಳು ಗಾಜಾಪಟ್ಟಿಯಲ್ಲಿರುವ ಇಸ್ಲಾಮಿಕ್‌ ವಿವಿ ಮೇಲೆ ದಾಳಿ ನಡೆಸಿ ನೆಲಸಮಗೊಳಿಸಿವೆ. ಈ ವಿಶ್ವವಿದ್ಯಾಲಯವು ಹಮಾಸ್‌ ಉಗ್ರರಿಗೆ ತರಬೇತಿ ಕ್ಯಾಂಪ್‌ ರೀತಿ ಬಳಕೆಯಾಗುತ್ತಿತ್ತು. ಜೊತೆಗೆ ಅಲ್ಲಿ ಶಸ್ತ್ರಾಸ್ತ್ರಗಳನ್ನು ಕೂಡ ತಯಾರಿಸಲಾಗುತ್ತಿತ್ತು. ಭಯೋತ್ಪಾದನೆಗೆ ಹಣ ಸಂಗ್ರಹಿಸಲು ಅಲ್ಲಿ ಹಮಾಸ್‌ ಉಗ್ರರು ವಿಚಾರ ಸಂಕಿರಣಗಳನ್ನು ನಡೆಸುತ್ತಿದ್ದರು. ಅದನ್ನು ನಾಶಪಡಿಸುವ ಮೂಲಕ ಹಮಾಸ್‌ಗೆ ಇಸ್ರೇಲ್‌ ದೊಡ್ಡ ಆಘಾತ ನೀಡಿದೆ.

click me!